Advertisement

ರಾಂಗ್‌ ಸೈಡ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ: ಆರೋಪಿಗೆ 1 ವರ್ಷ ಶಿಕ್ಷೆ

10:48 AM Apr 06, 2022 | Team Udayavani |

ಹುಮನಾಬಾದ: ಟಿಪ್ಪರ್‌ನ್ನು ರಾಂಗ್‌ ಸೈಡ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಆರೋಪಿಗೆ ಒಂದು ವರ್ಷ ಶಿಕ್ಷೆ ಹಾಗೂ 1500 ರೂ. ದಂಡ ವಿಧಿಸಿ ಹಿರಿಯ ಸಿವಿಲ್‌ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಸರಸ್ವತಿದೇವಿ ಆದೇಶ ನೀಡಿದ್ದಾರೆ.

Advertisement

ನಿಷ್ಕಾಳಜಿತನದಿಂದ ವಾಹನ ಚಾಲನೆ ಮಾಡಿದ ಆರೋಪಿ ಲಖನರೆಡ್ಡಿ ಮಾಣಿಕರೆಡ್ಡಿ ಎಡ್ಲಾ ಶಿಕ್ಷೆಗೆ ಗುರಿಯಾಗಿದ್ದಾನೆ.

ದಿ. 27-11-2018ರಲ್ಲಿ ರಾಷ್ಟ್ರೀಯ ಹೆದ್ದಾರಿ 65ರ ಹುಡಗಿ ಸೇತುವೆ ಹತ್ತಿರದ ಹುಡಗಿ ನಂದಗಾಂವ ರಸ್ತೆಯಲ್ಲಿ ಟಿಪ್ಪರ್‌ನ್ನು ರಾಂಗ್‌ ಸೈಡ್‌ ಚಾಲನೆ ಮಾಡಿ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಾಜೇಶ್ವರ ಮೂಲದ ಶಿವಾನಂದ ಹಡಪದ ಮೃತಪಟ್ಟಿದ್ದನು. ಪ್ರಕರಣದ ಕುರಿತು ಅಂದಿನ ಸಿಪಿಐ ಜೆ.ಎಸ್‌. ನ್ಯಾಮರಗೌಡರ್‌ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ರವಿಕುಮಾರ ಹಣಮಂತ ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next