Advertisement
1.ಧಾರವಾಡದ ಪರಿಸರ ನಿಮ್ಮ ಸಾಹಿತ್ಯಕ ಬೆಳವಣಿಗೆಗೆ ಹೇಗೆ ಅನುಕೂಲವಾಯ್ತು?
Related Articles
Advertisement
3. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕಾವ್ಯವೇ ನಿಮ್ಮ ಅಭಿವ್ಯಕ್ತಿಯ ಮಾಧ್ಯಮವಾದದ್ದು ಏಕೆ? ಮಹಿಳಾ ಚಳವಳಿ ಈಗ ತಾತ್ವಿಕ, ಸಾಹಿತ್ಯಕ ಸಾಮಗ್ರಿ ಕಡಿಮೆಯಾಗಿ ಚಳುವಳಿ ಸೊರಗಿದೆ ಎನ್ನಿಸುವುದಿಲ್ಲವೆ?
ಕಾವ್ಯ ನನ್ನ ಅಭಿವ್ಯಕ್ತಿಯ ಮಾಧ್ಯಮವಾದದ್ದು ಏಕೆಂದರೆ ನನ್ನಲ್ಲಿ ಭರಪೂರವಾಗಿ ತುಂಬಿಕೊಂಡ ವೇದನೆಗಳು. ಇವುಗಳ ತೀವ್ರತೆಗೆ ಸಾಹಿತ್ಯದ ಬೇರೆ ಪ್ರಕಾರಗಳು ಯೋಗ್ಯವಾಗಲಾರವು. ಇಂದಿನ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮಹಿಳಾ ಚಳುವಳಿಗಳು ಆಗುತ್ತಿಲ್ಲ, ವೈಯಕ್ತಿಕ ನೆಲೆಯಲ್ಲಿ ಒಬ್ಬಿಬ್ಬರಿದ್ದಾರೆ ಚಳವಳಿಗಾರರು, ಆದರೆ ಸಂಘಟಿತರಾಗುತ್ತಿಲ್ಲ. ವೈಯಕ್ತಿಕ ಪ್ರಗತಿಯಲ್ಲಿ ಅನೇಕರು ತೊಡಗಿಕೊಂಡಿದ್ದಾರೆ.
4.ಮಕ್ಕಳ ಸಾಹಿತ್ಯವನ್ನು ರಚಿಸಿರುವ ನಿಮಗೆ ಅದರ ವಿಮರ್ಶೆ ಅನಾದರದಿಂದ ಸೊರಗಿದೆ ಎಂದು ಅನಿಸುತ್ತಿದೆಯಾ? ಮಕ್ಕಳ ಸಾಹಿತ್ಯದ ಬಗೆಗೆ ಮುಕ್ತತೆ ಯಾಕಿಲ್ಲ?
ಮಕ್ಕಳ ಸಾಹಿತ್ಯವೂ ಸೊರಗಿದೆ, ಮಕ್ಕಳ ಸಾಹಿತಿಗಳ ಮನಸ್ಸು ಸಹ. ಇದಕ್ಕೆ ಕಾರಣ ಸಾಹಿತಿಗಳ ಮತ್ತು ವಿಮರ್ಶಕರ ಅನಾದರ, ನಿರಾಸಕ್ತಿ. ಇವುಗಳಿಂದ ಮುಕ್ತರಾಗಿ ಮಕ್ಕಳ ಸಾಹಿತಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಕೊಳ್ಳಬೇಕು. ಹಿಂದೆ ಸರ್ಕಾರ ಕನ್ನಡ ಸಾಹಿತ್ಯ ಪರಿಷತ್ತಿನಂಥ ಸಂಸ್ಥೆಗಳು ಮಕ್ಕಳಿಗಾಗಿಯೇ ಪುಸ್ತಕಗಳನ್ನು ಪ್ರಕಟಿಸುತ್ತಿತ್ತು. ಪ್ರತಿಷ್ಟಿತ ಪ್ರಕಾಶನ ಸಂಸ್ಥೆಗಳು ಇನ್ನಷ್ಟು ವ್ಯಾಪಕವಾಗಿ ಮಕ್ಕಳ ಪುಸ್ತಕಗಳನ್ನು ಪ್ರಕಟಿಸಬೇಕು. ಪ್ರತಿ ಶಾಲೆಗೆ ಹೋಗಿ ಮಕ್ಕಳಲ್ಲಿ ಸಾಹಿತ್ಯದ ಓದಿನ ಅಭಿರುಚಿಯನ್ನು ಹೆಚ್ಚಿಸಬೇಕು
5.ಇಂದಿನ ಸಾಹಿತ್ಯ ವಲಯ ವಾದ-ಸಿದ್ಧಾಂತಗಳ ಭಾರಕ್ಕೆ ಮೂಲ ಪ್ರವೃತ್ತಿಯಿಂದ ಹಿಂದೆ ಸರಿದಿದೆ ಎನ್ನಿಸುತ್ತಿದೆಯೇ?
ನನಗೆ ಹಾಗೆನ್ನಿಸುವುದಿಲ್ಲ. ಇಂದಿನ ಯುವ ಸಾಹಿತಿಗಳು ತಮ್ಮದೇ ಸಿದ್ಧಾಂತಗಳನ್ನು ರೂಪಿಸಿಕೊಂಡು ಬರೆಯುತ್ತಿದ್ದಾರೆ. ಪುರುಷರಿಗಾಗಲಿ, ಮಹಿಳೆಯರಿಗಾಗಲಿ ಸಿದ್ಧಾಂತಗಳನ್ನು ಬಳಸಿ, ಬರೆಯುವುದು ಸುಲಭ ಸಾಧ್ಯವಲ್ಲ. ಸಮಾಜದ ಸ್ಥಿತಿ-ಗತಿಗಳನ್ನು ಗಮನದಲ್ಲಿಟ್ಟು ಕೊಂಡು ಜವಾಬ್ದಾರಿಯಿಂದ ಬರೆಯಬೇಕು. ಹಿರಿಯರು ಕಿರಿಯರ ಬರಹಗಳನ್ನು ಓದಬೇಕು. ಕಿರಿಯರು ಹಿರಿಯರ ಮಾರ್ಗದರ್ಶನ ಪಡೆದುಕೊಳ್ಳಬೇಕು.
ಸಂದರ್ಶನ:
ಆನಂದ ಪಾಟೀಲ