Advertisement
ನಮ್ಮ ಹಾಸ್ಯ ಸಾಹಿತ್ಯ ಪರಂಪರೆಯಲ್ಲಿ ಹಲವಾರು ದಿಗ್ಗಜರಿದ್ದರು. ಗೊರೂರು, ರಾಶಿ, ಬೀಚಿ, ಪಾವೆಂ, ಪ್ರಭುಶಂಕರ ಹೀಗೆ… ಯಾರ ಹಾಸ್ಯ ಸಾಹಿತ್ಯ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ ಎನ್ನಿಸುತ್ತದೆ?
Related Articles
Advertisement
ನೀವು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ. ನೆಲೆ ಕಂಡುಕೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಆ ಮೂಲಕ ಕಾಡು ಮತ್ತು ಕಡಲು-ಎರಡನ್ನೂ ಕಂಡವರು ನೀವು. ನಿಮ್ಮ ಅಭಿವ್ಯಕ್ತಿಯಲ್ಲಿ ಇದನ್ನು ಹೇಗೆ ಪ್ರತಿಬಿಂಬಿಸುವಿರಿ?
ಕಾಡು ನನ್ನ ತವರು. ಪ್ರಕೃತಿ ಸಹಜವಾಗಿ ಅದರ ಅಗಾಧತೆ, ಕೌತುಕ, ವಿಸ್ಮಯ, ಪಾಠಗಳೆಲ್ಲ ನನ್ನ ವ್ಯಕ್ತಿತ್ವದೊಳಗೆ ಸ್ಥಾನ ಪಡೆದಿವೆ. ಮೊದಲಿನ ನಾಲ್ಕು ಕೃತಿಗಳಲ್ಲಿ ಕಾಡಿನ ಅನುಭವ ದಟ್ಟವಾಗಿದೆ. ಮುಂದೆ ಮಂಗಳೂರಿನ ವಾಸ ಕಡಿಲನ್ನ ಪರಿಚಯ ಮಾಡಿಸಿತು. ನಾನು ಕಡಲಾಗುವ ಭಾವವನ್ನು, ಕಡಲು ನನ್ನದಾಗುವ ಪರಿಯನ್ನು ಆಶ್ಚರ್ಯದಿಂದ ಅನುಭವಿಸಿದ್ದೇನೆ. ಕಾಡಿನ ಇಂಚರ, ಕಡಲಿನ ಮೊರೆತ; ಕಾಡಿನ ಮೌನ, ಕಡಲಿನ ಧ್ಯಾನಸ್ಥ ಗಂಭೀರತೆ -ಇವೆಲ್ಲ ಜೀವನ ಧರ್ಮವಾಗಿ ನನ್ನೊಳಗೆ ಇಳಿದಿವೆ. ಮಂಗಳೂರಿನ ಜನಪ್ರೀತಿಯಲ್ಲಿ ನಾನಿದನ್ನು ಉಂಡಿದ್ದೇನೆ. ಒಳಗೊಂಡ, ಒಳಗೊಳ್ಳುವ ತೃಪ್ತಿ ಇದೆ.
ಇವತ್ತು ಹಾಸ್ಯವೆಂದರೆ ಅಶ್ಲೀಲ ಪದಗಳ ಬಳಕೆ ಮತ್ತು ಅವಹೇಳನ ಎಂಬಂತಾಗಿದೆ. ನಿಜವಾದ ಹಾಸ್ಯ ಸಾಹಿತ್ಯಕ್ಕೆ ಇಂಥ ಬೆಳವಣಿಗೆ ಮಾರಕ. ಇದನ್ನು ನೀಗಿಸಲು ಹಾಸ್ಯ ಸಾಹಿತಿಗಳ ಜವಾಬುದಾರಿ ಯಾವ ರೀತಿಯದು?
ನಿಜ, ಅಶ್ಲೀಲ ಸಂಭಾಷಣೆ ತುರುಕುತ್ತ, “ಪ್ರೇಕ್ಷಕರು ಖುಷಿ ಪಡುತ್ತಾರೆ, ಅದಕ್ಕೆ ಇಂಥ ಸಂಭಾಷಣೆ ರಚಿಸುತ್ತೇವೆ’ ಎಂದು ಪ್ರತಿಪಾದಿಸುವ ಸಿನಿಮಾ ಮಂದಿಯಂತೆ ಹಾಸ್ಯ ಲೇಖಕರು ಆಗಬಾರದು. ಟಿ.ವಿ.ಗಳಲ್ಲಿ ಬರುವ ಕೆಲವು ರಿಯಾಲಿಟಿ ಶೋಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳೇ ವಿಜೃಂಭಿಸುತ್ತಿವೆ.. ತೀರ್ಪುಗಾರರು ಅದನ್ನು ವಿರೋಧಿಸದೇ ನಗುತ್ತಾ ಚಪ್ಪಾಳೆ ತಟ್ಟುವುದನ್ನು ನೋಡಿದಾಗ, ನಮ್ಮ ಜನರ ಸೂಕ್ಷ್ಮತೆ ಎಲ್ಲಿಗೆ ಹೋಯಿತು ಎಂದು ಬೇಸರವಾಗುತ್ತದೆ. “ಜನ ಕೇಳುತ್ತಾರೆ, ಹಾಗಾಗಿ ನಾವು ಕೊಡುತ್ತೇವೆ’ ಎನ್ನದೆ, ಒಳ್ಳೆಯ ಸಾಹಿತ್ಯ ಕೊಟ್ಟು ಜನರ ಅಭಿರುಚಿಯ ಮಟ್ಟವನ್ನೇ ಮೇಲಕ್ಕೆ ಏರಿಸುತ್ತೇವೆ ಎಂಬ ಸಾಮಾಜಿಕ ಕಾಳಜಿ ಇರುವ ಪ್ರವೃತ್ತಿ ಹಾಸ್ಯ ಲೇಖಕರ ಆದ್ಯತೆ ಆಗಬೇಕು. ಅಶ್ಲೀಲತೆ, ವೈಯಕ್ತಿಕವಾಗಿ ನೋವುಂಟು ಮಾಡುವ ಅಣುಕುಗಳು, ಕಟಕಿ ಇತ್ಯಾದಿಗಳಿಲ್ಲದೆ ಆರೋಗ್ಯಕರ ಹಾಸ್ಯವನ್ನು ಹೇಗೆ ರಚಿಸಬಹುದು ಎಂಬುದನ್ನು ನಮ್ಮ ಹಿರಿಯ ಲೇಖಕರು-ಕಲಾವಿದರು ತಮ್ಮ ಕೃತಿ ಮತ್ತು ಕಲೆಗಳ ಮೂಲಕ ತೋರಿದ್ದಾರೆ. ಆ ಮಾರ್ಗದಲ್ಲೇ ನಮ್ಮ ಲೇಖಕರು- ಕಲಾವಿದರು ಹೆಜ್ಜೆ ಇಡಬೇಕು.
ದಕ್ಷಿಣ ಕನ್ನಡ ಜಿಲ್ಲೆಯ 26ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ನಿಮಗೀಗ ದೊರೆತಿದೆ. ಈ ಸಂದರ್ಭದಲ್ಲಿ ನಿಮ್ಮ ಮಾತುಗಳೇನು?
ಇದು ಇಡೀ ಹಾಸ್ಯ ಸಾಹಿತ್ಯಕ್ಕೇ ಸಂದ ಗೌರವ ಎಂದು ಭಾವಿಸುತ್ತೇನೆ. ವೈಯಕ್ತಿಕವಾಗಿ ಎನ್ನುವುದಕ್ಕಿಂತ ಸಾಹಿತ್ಯಕವಾಗಿ ನನಗೆ ಹೆಚ್ಚು ತೃಪ್ತಿಯನ್ನೂ, ಸಮಾಧಾನವನ್ನೂ ಕೊಟ್ಟ ಸಂಗತಿ ಇದು. ಕರಾವಳಿಯ ಜನರ ಪ್ರೀತಿ ಹಾಗೂ ಕಲೆಯ ಬಗ್ಗೆ ಅವರಿಗಿ ರುವ ಬದ್ಧತೆ, ಗುಣ ಗ್ರಾಹಿತ್ವ ದೊಡ್ಡದು. ಕರಾವಳಿಯ ಮಹಾ ಜನತೆಗೆ ನನ್ನ ಕೃತಜ್ಞತೆ ಈ ಮೂಲಕ.
ನಿಮ್ಮ ಮೊದಲ ಹಾಸ್ಯ ಪ್ರಸಂಗದ ಬಗ್ಗೆ ಹೇಳಿ… :
ನನ್ನ ಮೊದಲ ಹಾಸ್ಯ ಪ್ರಸಂಗದ ಬಗ್ಗೆ ಹೇಳಬೇಕೆಂದರೆ- ನಿಮಗೊಂದು ವೈಯಕ್ತಿಕ ವಿಷಯ ಹೇಳಬೇಕಿದೆ. ಏನೆಂದರೆ, ಗಂಡಿನ ಕಡೆಯವರು ಒಬ್ಬರು ನನ್ನನ್ನು ನೋಡಲು ಬಂದಿದ್ದರು. ನನಗಾಗ ಉದ್ದ ಜಡೆ ಇತ್ತು. ಗಂಡಿನ ಕಡೆಯ ಒಬ್ಬ ಮಹಿಳೆಗೆ ನನ್ನ ಜಡೆಯನ್ನು ಪರೀಕ್ಷಿಸಬೇಕೆಂಬ ಆಸೆ! ಆಕೆ ಹಾಗೇ ಸುಮ್ಮನೆ ನಾನು ಕೂತಿದ್ದ ಜಾಗಕ್ಕೆ ಬಂದು, ನನ್ನ ಜಡೆ ಎಳೆದು ಜಗ್ಗಿ ನೋಡಿದಳು. ನನಗೆ ಆಮೇಲೆ ಗೊತ್ತಾಯಿತು; ನಾನು ಚೌರಿ ಹಾಕಿ ಜಡೆ ಉದ್ಧ ಮಾಡಿಕೊಂಡಿದ್ದೇನೆ ಎಂದು ಅವಳು ಭಾವಿಸಿದ್ದಳು ಅಂತ. ಇದೇ ಕಾರಣಕ್ಕೆ ನನ್ನ ಮನಸ್ಸಿನೊಳಗೆ ಆ ಗಂಡು ತಿರಸ್ಕೃತನೂ ಆದ ಬಿಡಿ. (ನಗು)
ಭುವನೇಶ್ವರಿ ಹೆಗಡೆ, ಪ್ರಸಿದ್ಧ ಹಾಸ್ಯ ಲೇಖಕಿ
ಸಂದರ್ಶನ:
ಸಂಧ್ಯಾ ಹೆಗಡೆ ದೊಡ್ಡಹೊಂಡ