Advertisement
ಟೆನಿಸ್ ಬಾಲ್‌ನಲ್ಲಿ ಸ್ಟಾಪ್ ಹಾರಿಸುವುದು ಕಡ್ಡಿ ಮುರಿದಷ್ಟೇ ಸುಲಭ ಅದೇ ಹಾರ್ಡ್ ಬಾಲ್‌ನ ಇದು ಸುಲಭವಲ್ಲ. ಈ ವಿಷಯದಲ್ಲಿ ಸರ್ ಜಡೇಜಾ ಏಕಲವ್ಯ ನಂತೆ ಡೀಪ್ ಮಿಡ್ ವಿಕೆಟ್ ಜಾಗದಿಂದ ಸಿಂಗಲ್ ಸ್ಟಾಪ್ ಗೆ ಗುರಿ ಇಡುವುದರಲ್ಲಿ ನಿಸ್ಸಿಮ.
Related Articles
Advertisement
2017 ಟ್ರೋಫಿ, ಭಾರತ ಹಾಗೂ ಪಾಕ್ ಪಂದ್ಯದಲ್ಲಿ ಶೋಹಿಬ್ ಮಲಿಕ್ ನ ವಿಕೆಟ್ ಅನ್ನು ಪಡೆದ ಪರಿ ಎಲ್ಲರ ಎದೆ ಬಡಿತ ಏರು ಪೆರು ಮಾಡಿತ್ತು. ಶಾರ್ಟ್ ಥರ್ಡ್ ಮ್ಯಾನ್ ಇಂದ ಎಸೆದ ಥ್ರೋ ಸೀದಾ ಯಾಕ ರ್ ರೀತಿಯಂತೆ ವಿಕೆಟ್ ಗೆ ಬಡಿದು ಬೈಲ್ಸ್ ಹಾರಿತ್ತು. ಇದರಂತೆಯೇ ಆಸ್ಟ್ರೇಲಿಯಾ ವಿರುದ್ಧವೂ ಸಹ ಉಸ್ಮಾನ್ ಖಾವಾಜ ಅವರ ವಿಕೆಟ್ ಅನ್ನು ಪಡೆದುಕೊಂಡಿದ್ದರು.
ಇಂಡಿಯನ್ ಪ್ರೇಮಿಯರ್ ಲೀಗ್ ನಲ್ಲಿ ಅತಿ ಹೆಚ್ಚು ರನ್ ಔಟ್ ಮಾಡಿದ ಆಟಗಾರ ಎಂದರೆ ಅದು ಪೊ›ಫೆಸರ್ ಜಡ್ಡು ಮಾತ್ರವೇ ಒಟ್ಟು 24 ಶಾರ್ಪ್ ಶೂಟ್ ಮಾಡಿ ವಿಕೆಟ್ ಗಳನ್ನು ತನ್ನ ಕೇರಿಯೆನರ್ ಬೊಕ್ಕೆಗೆ ಸೇರಿಸಿಕೊಂಡಿದ್ದಾರೆ.
ನ್ಯೂಜಿಲ್ಯಾಂಡ್ ವಿರುದ್ಧ ಸೆಮಿ ಫೈನಲ್ ನಲ್ಲಿ ಕ್ಯಾಪ್ಟನ್ ಕೂಲ್ ಜತೆ ಆಡಿದ ಇವರ ಆಟ ಪಂದ್ಯಾವನ್ನು ಕೊನೆ ಗತಿಯ ತನಕ ತೆಗೆದುಕೊಂಡು ಹೋಗಬೇಕು ಎನ್ನುವ ಇವರ ಮನೋಭಾವ ಅಭಿಮಾನಿಗಳ ಎದೆಯಲ್ಲಿ ಅಚ್ಚಾಗಿದೆ. ಒಂದೇ ಓವರ್‌ನಲ್ಲಿ 37 ರನ್ ಗಳಿಸಿ ದಾಖಲೆ. ಎಡಗೈ ಸ್ಪಿನ್ನರ್ ಆಗಿ ಅತಿ ಹೆಚ್ಚು ವಿಕೆಟ್‌ಗಳನ್ನು (132) ಪಡೆದುಕೊಂಡಿದ್ದಾರೆ.
ಸಿಎಸ್‌ಕೆ ಗಾಗಿ ಜಡೇಜಾ ಅವರು 73 ಕ್ಯಾಚ್‌ಗಳನ್ನು ಹಿಡಿದ್ದಾರೆ. ಒಬ್ಬ ಒಳ್ಳೆ ಆಟಗಾರನನ್ನು ಹಾಗೂ ಒಳ್ಳೆ ಕ್ಷೇತ್ರ ರಕ್ಷಕ ಹೆಚ್ಚಾಗಿ ಲಾಂಗ್ ಆನ್ ಅಲ್ಲಿ ನಿಲ್ಲಿಸಿರುತ್ತಾರೆ. ಆದರೆ ಜಡೇಜಾ ಅವರಿಗೆ ಇದು ಯಾವುದು ಸೀಮಿತವಲ್ಲ. ನಿಂತ ಜಾಗದಲ್ಲಿ ಎಲ್ಲಾ ಖಡಕ್ ಫೀಲ್ಡಿಂಗ್ ನ ಮುಖಾಂತರ ಕ್ಯಾಮೆರಾ ಕಣ್ಣು ಸೆಳೆಯುವ ಇವರ ಏಕಾಗ್ರತೆಗೆ ಸರಿಸಾಟಿಯೇ ಇಲ್ಲ.
-ರಕ್ಷಿತ್ ಆರ್.ಪಿ.,
ಎಂಜಿಎಂ ಕಾಲೇಜು, ಉಡುಪಿ