Advertisement

ನಗರದ ನೀರಿನ ಬೇಡಿಕೆಗೆ ತೋಟಗಳಿಗೆ ಬರೆ!

09:51 PM Apr 11, 2019 | mahesh |

ಬಂಟ್ವಾಳ: ನೇತ್ರಾವತಿ ನದಿಯಲ್ಲಿ ನೀರಿನ ಹರಿವು ಕುಸಿತ ಆಗಿರುವ ಹಿನ್ನೆಲೆಯಲ್ಲಿ ಎ. 11ರಿಂದ ವಾರದಲ್ಲಿ ಮೂರು ದಿನ ಮಾತ್ರ ರೈತರು ನೀರೆತ್ತುವಂತೆ ಮೆಸ್ಕಾಂ ನೋಟಿಸು ಜಾರಿ ಮಾಡಿದೆ. ನಗರದ ನೀರಿನ ಬೇಡಿಕೆಗೆ, ಕೃಷಿಕರ ತೋಟಗಳಿಗೆ ಬಿರು ಬೇಸಗೆಯಲ್ಲಿ ಬರೆ ಎಳೆದಂತಾಗಿದೆ.

Advertisement

ನೇತ್ರಾವತಿ ನದಿ ಪಾತ್ರದ ಗ್ರಾಮ ಗಳಾದ ತುಂಬೆ, ಕಳ್ಳಿಗೆ, ಬಿ. ಮೂಡ, ಬಿ. ಕಸ್ಬಾ, ನಾವೂರು, ಮಣಿನಾಲ್ಕೂರು, ಸಜೀಪಮುನ್ನೂರು, ಸಜೀಪಮೂಡ, ಪಾಣೆಮಂಗಳೂರು, ನರಿಕೊಂಬು. ಶಂಭೂರು, ಬಾಳ್ತಿಲ, ಬರಿಮಾರು, ಕಡೇ ಶಿವಾಲಯ ವರೆಗೆ 14 ಗ್ರಾಮಗಳ ನದಿಯ 2 ಬದಿಯಲ್ಲಿ ವಿದ್ಯುತ್‌ ಬಳಸಿ ನೀರೆತ್ತುವ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಪ್ರಸ್ತುತ ನೀಡಿರುವ ಆದೇಶದಲ್ಲಿ ವಾರಕ್ಕೆ ಮೂರು ದಿನ ಮಾತ್ರ ನೀರೆತ್ತಬಹುದೆಂದು ಸೂಚಿಸಿದೆ. ಅದು ಯಾವ ದಿನ, ಅವಧಿ ಇತ್ಯಾದಿ ವಿವರಗಳಿಲ್ಲ. ವಾಣಿಜ್ಯ ಕೃಷಿ, ಆಹಾರ ಕೃಷಿಗೂ ಇದೇ ನೀತಿ ಅನುಸರಿಸ ಲಾಗುತ್ತದೆಯೇ ಎಂಬ ವಿವರಗಳೂ ಇಲ್ಲ. ನದಿ ಪಾತ್ರದಲ್ಲಿ ಸರಕಾರಿ ಪ್ರಾಯೋಜಿತ ಕೃಷಿ ಉಪಯೋಗದ, ಕುಡಿಯುವ ಉದ್ದೇ ಶದ ಸ್ಥಾವರಗಳ ಬಳಕೆಗೂ ಇದೇ ನೀತಿ ಅನ್ವಯವೇ ಎಂಬುದು ಸ್ಪಷ್ಟವಾಗಿಲ್ಲ.

ಜಿಲ್ಲಾಧಿಕಾರಿಯಿಂದ ಈ ಆದೇಶ ಜಾರಿಯಾಗಿ 15 ದಿನಗಳು ಕಳೆದಿದೆ. ಮೆಸ್ಕಾಂ ಸಮಸ್ಯೆಯನ್ನು ಇದುವರೆಗೆ ನಿಭಾಯಿಸಿ ಕೊಂಡು ಬಂದಿದೆ. ಮಳೆ ಯಾಗಿ ಕಳೆದ ವರ್ಷ ದಂತೆ ನೀರು ಹರಿದು ಬರ ಬಹುದು ಎಂಬ ತರ್ಕ ಮಾಡ ಲಾಗಿ ತ್ತಾದರೂ ನೀರಿನ ಲಭ್ಯತೆ ಇಲ್ಲದ ಕಾರಣಕ್ಕೆ ನೋಟಿಸು ಜಾರಿಗೆ ಮುಂದಾಗಿದೆ.

· ಶಂಭೂರು ಎಎಂಆರ್‌ ಡ್ಯಾಂ ವ್ಯಾಪ್ತಿಯಲ್ಲಿ ಎಂಆರ್‌ಪಿಎಲ್‌, ಎಸ್‌ಇಝಡ್‌ ಕೈಗಾರಿಕಾ ಉದ್ದೇಶದ ನೀರು ಸರಬರಾಜು ತಲಾ 500 ಎಚ್‌ಪಿ ಬಳಸುತ್ತದೆ. ಅಂದರೆ ನೇರವಾಗಿ 1,000 ಎಚ್‌.ಪಿ. ಸಾಮರ್ಥ್ಯದ ಪಂಪ್‌ ಬಳಸಿ ನೀರೆತ್ತುತ್ತದೆ.

Advertisement

· ಲೆಕ್ಕಾಚಾರದಂತೆ ಕೈಗಾರಿಕಾ ಕೃಷಿ ಉದ್ದೇಶದ ನೀರೆತ್ತುವುದಕ್ಕೆ 1,000 ಎಚ್‌ಪಿ, ರೈತರ 120 ಪಂಪ್‌ಸೆಟ್‌ಗಳಿಂದ ಕೃಷಿ ಉದ್ದೇಶಕ್ಕೆ 618 ಎಚ್‌. ಪಿ. ಬಳಕೆ ಆಗುತ್ತದೆ. ಲೆಕ್ಕಾಚಾರದಂತೆ ರೈತಾಪಿ ವರ್ಗ ಬಳಸುವ ನೀರು ಕೈಗಾರಿಕಾ ಉದ್ದೇಶದ ಸಾಮರ್ಥ್ಯಕ್ಕಿಂತ 318 ಎಚ್‌ಪಿ ಕಡಿಮೆಯೇ ಇದೆ. ಹಾಗಾಗಿ ಮೊದಲು ಕೈಗಾರಿಕಾ ಉದ್ದೇಶದ ನೀರು ಸರಬರಾಜು ವ್ಯವಸ್ಥೆ ನಿಲುಗಡೆ ಮಾಡಬೇಕು ಹೊರತು ಕೃಷಿ ಉದ್ದೇಶದ್ದಲ್ಲ ಎನ್ನಲಾಗಿದೆ.

· ತುಂಬೆ ಡ್ಯಾಂ ವ್ಯಾಪ್ತಿಯಲ್ಲಿ ಸಜೀಪಮುನ್ನೂರು ಮಡಿವಾಳಪಡು³ ಮಂಗಳೂರು ವಿವಿ ಕೊಣಾಜೆಗೆ ನೀರು ಸರಬರಾಜು 100 ಎಚ್‌ಪಿ, ಸಜೀಪಮೂಡದಲ್ಲಿ ಮುಡಿಪು ಇನ್‌ಫೋಸಿಸ್‌ 90 ಎಚ್‌ಪಿ., ಸಜೀಪಮೂನ್ನೂರು ಕೃಷಿ ಏತ ನೀರಾವರಿ 60 ಎಚ್‌.ಪಿ. ಒಟ್ಟು 250 ಎಚ್‌.ಪಿ. ಬಳಕೆ ಆಗುತ್ತದೆ.

ಆದೇಶ ಜಾರಿ
ಬಂಟ್ವಾಳ ಮೆಸ್ಕಾಂ ಉಪ ವಿಭಾಗ 1, 2ರಲ್ಲಿ ಪ್ರಥಮ ಹಂತದಲ್ಲಿ ನದಿ ಪಾತ್ರದ 2 ದಂಡೆಗಳಲ್ಲಿ ಇರತಕ್ಕ 120 ಐ.ಪಿ. ಸೆಟ್‌ಗಳ ಸಂಪರ್ಕ ನಿಲುಗಡೆ ಆದೇಶ ಜಾರಿ ಆಗಿದೆ. ಇದರಲ್ಲಿ 20 ಐ.ಪಿ. ಸೆಟ್‌ಗಳು ತಲಾ 10 ಎಚ್‌.ಪಿ. ಸಾಮರ್ಥ್ಯ, 44 ಐ.ಪಿ. ಸೆಟ್‌ ತಲಾ 5 ಎಚ್‌. ಪಿ. ಸಾಮರ್ಥ್ಯ, 66 ಐ.ಪಿ. ಸೆಟ್‌ಗಳು ತಲಾ 3 ಎಚ್‌.ಪಿ. ಸಾಮರ್ಥ್ಯದ್ದಾಗಿದೆ. ಅಂದರೆ ಈ ಎಲ್ಲ 120 ಐ.ಪಿ. ಸೆಟ್‌ಗಳು ಒಟ್ಟು 200 + 220+ 198= 618 ಎಚ್‌.ಪಿ. ಬಳಕೆ ಆಗುತ್ತದೆ.

ನೀರಿನ ಮಟ್ಟ
ತುಂಬೆ ಡ್ಯಾಂ ಎ. 11ರಂದು ನೀರಿನ ಮಟ್ಟ 5.80 ಮೀಟರ್‌
ಶಂಭೂರು ಡ್ಯಾಂ ಎ. 11ರಂದು ನೀರಿನ ಮಟ್ಟ 0

ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next