Advertisement
ಅದೊಂದು ತೀರಾ ಸಾಂಪ್ರದಾಯಿಕ ಕುಟುಂಬದ ಹೆಣ್ಣು ನೋಡುವ ಕಾರ್ಯಕ್ರಮದ ಸಂದರ್ಭವೊಂದರಲ್ಲಿ ಜರುಗುತ್ತಿದ್ದ ಚರ್ಚೆ ಸಂದರ್ಭದಲ್ಲಿ ಈಕೆಯ ವಾದಗಳನ್ನ ಮಾತಾಡುವ ರೀತಿಯನ್ನ, ನೋಡಿ ಡೀಟೇಲ್ಸ… ಪಡೆದವನೇ ಅವರಮ್ಮನ ಬೆನ್ನು ಬಿದ್ದಿದ್ದಾನೆ….
Related Articles
ಹಿಮ, ಬೆರಳು ಮುರಿಯುವಂತೆ ನನ್ನ ಕೈ ಅದುಮಿದಳು. ಹಿಮಾಳ ಅಪ್ಪ ದೇವಿ ಪ್ರಸಾದ್ ಅಂಕಲ್ ಕ್ಷಣಕಾಲ ಮೌನವಾದವರು….ಸಾವರಿಸಿ, “ಹಿಮ… ’ಅಂದರು. ನನಗೋ ಇವಳು ಎದ್ದು ಓಡಿ ಹೋದರೆ ಎಂಬ ಭೀತಿ..
Advertisement
ಹಿಮ ನನ್ನ ಕೈಯನ್ನು ಇನ್ನೂ ಜೋರಾಗಿ ಅದುಮಿದಳು. ತನ್ನ ನೋವೆಲ್ಲಾ ಹರಿದು ಹೋಗುವಂತೆ. ಇವಳು ಕದಲಲಿಲ್ಲ..ದೇವಿ ಪ್ರಸಾದ್ ಅಂಕಲ್ ಕೊಂಚ ಜೋರಾಗಿ “ಹಿಮ’ಘಎಂದರು. ಅವಳಿಗೆ ಬೇರೆ ದಾರಿ ಉಳಿಯಲಿಲ್ಲ..
ರೂಂನಲ್ಲಿ ನಾಲ್ಕೈದು ನಿಮಿಷದ ಗಾಢ ಮೌನ. ಅವನು ನಿಯಂತ್ರಣ ತಪ್ಪಿದವನಂತೆ. ಹತ್ತಿರ ಬಂದು ಅದ್ರತೆಯಿಂದ ಹಿಮ ಅಂದವನೇ ಅವಳ ಹಸ್ತಗಳನ್ನು ತನ್ನ ಕೈಗಳಿಗೆ ತೆಗೆದುಕೊಂಡ. ಹಿಮಳಿಗೆ, ಕಾಲ ಕೆಳಗಿನ ಭೂಮಿ ಕುಸಿದಂತಾಗಿತ್ತು. ಅಲ್ಲಿಂದ ಜೋರಾಗಿ ಎಲ್ಲಿಯೂ ನಿಲ್ಲದೇ ಓಡಿಹೋಗಬೇಕೆಂದರೆ ಹೆಜ್ಜೆ ಕೀಳಲಾಗುತ್ತಿಲ್ಲ. ತಾನೆಲ್ಲಿದ್ದೇನೆ ಎನ್ನುವ ಪ್ರಜ್ಞೆ ಕಳೆದಂತೆ ಉಸಿರು ತಿರುಗುತ್ತಿಲ್ಲ. ಕಣ್ಣೆತ್ತಿ ನೋಡುತ್ತಾಳೆ. ಅವೇ ಹುಚ್ಚು ಹೊಂಗನಿಸಿನ ಕಣ್ಣುಗಳು. ನನ್ನ ಕೈಗಳಿಗೆ ಆ ಹಸ್ತಗಳು ತಾಕುತ್ತಿವೆ. ಆದರೆ ಕುಷ್ಟ ಬಂದಂತೆ ಆ ಸ್ಪರ್ಶದ ಅರಿವು ನನ್ನ ನರಗಳನ್ನು ತಲುಪುತ್ತಿಲ್ಲ. ಹೌದು, ಈ ದೇಹದಲ್ಲಿ ಜೀವವಿಲ್ಲ. ಇದು ಮೂಳೆ- ಮಾಂಸಗಳ ಉಳಿಕೆಯಷ್ಟೇ ಎಂದು ಚೀರಬೇಕೆಂದು ನೋಡುತ್ತಾಳೆ. ಗಂಟಲ ಪಸೆಯಾರಿ ಉಸಿರಾಗುವುದೇ ಕಷ್ಟ ಆಗಿದೆ. ಇನ್ನು ಮಾತೆಲ್ಲಿ ? ಹೌದು, ಹಿಮ ಹೆಸರಿನ ನಾನು. ಉಳಿದಿರುವುದೆಲ್ಲಿ ? ಜೀವ ಛಿದ್ರಗೊಂಡು ಹಿಂದಿರುಗುವ ಹಾದಿಯಲ್ಲೆಲ್ಲೋ ಮಣ್ಣಾಗಿರಬೇಕು. ಹಾಗಾದರೆ ಇಲ್ಲಿ ಉಳಿದಿರುವುದೇನು..?
ಆತ ಮಾತು ಆರಂಭಿಸಿದ : “ಹಿಮ, ಈ ಗಳಿಗೆಗಳಿಗಾಗಿ ಕಳೆದ ದಿನಗಳಷ್ಟೋ ’.
ನಿನ್ನ ಹೆಸರಿಗೆ ನನ್ನ ಹೆಸರನು ಬರೆದುಕೋ ಹೀಗೆ…
ಈ ಸಾಲು ಅದೆಷ್ಟು ಆಪ್ತವಾಗಿತ್ತು ನನಗೆ… ಕೈಬಿಡಿಸಿಕೊಂಡವಳೇ ಮುಂದೆ ಹೋಗಿ ಆತನಿಗೆ ಬೆನ್ನು ಮಾಡಿ ಮೇಜಿನ ಆಸರೆ ಪಡೆದಳು.
ಅದೆಷ್ಟು ತಪಿಸಿದ್ದೆ ಆತನ ಒಂದು ನೋಟಕ್ಕಾಗಿ, ಒಂದು ಲಯದ ಆಲಿಕೆಗಾಗಿ. ನಿನ್ನ ಉಸಿರಾಟದ ಲಯವನ್ನು ಇಡೀದಿನ ಅವನ ಮಾತು ಆಲಿಸಬೇಕಿದೆ. ಹೀಗೆ ಬರೆದ ಸಾಲುಗಳಿಗೆ ಲೆಕ್ಕವುಂಟೇ?
ಆತನನ್ನು ನೋಡಲಿಲ್ಲ. ಅವನ ಮಾತು ಆಲಿಸಲಿಲ್ಲ. ಹೌದು, ಅಲ್ಲಿ ಇದ್ದುದಾದರೂ ಏನು. ಬಣ್ಣವಿತ್ತೆ, ವಾಸನೆಯಿತ್ತೆ? ಸ್ಪರ್ಶವಿತ್ತೆ?
ಇದ್ದುದಾದರೂ ಏನು. ಆತನ ಅತ್ಮದ ಮಡಿಲಲ್ಲಿ ಇದ್ದದ್ದು ಎದೆಯಾಳದ ಅಸಂಖ್ಯ ಮಾತು ಸ್ಪರ್ಶಗಳು ದಾಖಲಾದ ದಿನಚರಿ ಪುಟಗಳು. ಇಲ್ಲಿ ಈತನಿಗೆ ಈಗ ಕೊಡಲು ಮೊದಲು ನಾನು ಉಳಿದಿರಬೇಕಲ್ಲ….
ಹೌದು ಅಲ್ಲೇ ಹಿಂದಿರುಗುವ ಹಾದಿಯಲ್ಲಿ. ಅವನೂರಿನ ಸರಹದ್ದಿನಲ್ಲೇ ಮಣ್ಣಾಗಿದ್ದೇನೆ… ಅಂದು ಬಸ್ಸು ಅವನೂರಿನ ಸರ್ಕಾರಿ ಆಸ್ಪತ್ರೆ ಎದುರು ಯಾವುದೋ ಕಾರಣಕ್ಕಾಗಿ ನಿಂತಾಗ. ಅಮ್ಮನಿಗೆ ಹೇಳಿ ಬಸ್ಸಿನಲ್ಲೇ ಚಪ್ಪಲಿ ಬಿಟ್ಟು ಬರಿಗಾಲಿನಲ್ಲಿ ಆ ಮಣ್ಣಿನಲ್ಲಿ ನಡೆದಾಡಿ ಆತ ನೆಘದಾಡಿರಬಹುದಾದ ಮಣ್ಣ ಕಣವೊಂದಾದರೂ ನನ್ನ ಪಾದ ಸೋಕಲಿ ಎಂದು ತವಕಿಸಿದ್ದು ನಿಜವಲ್ಲವೇ? ಆತನನ್ನು ತಾಕಿ ಬಂದ ಗಾಳಿಯ ಕಣವೊಂದು ನನ್ನ ಉಸಿರಿನಲ್ಲಿ ಬೆರೆಯಲಿ ಎಂದು ತಹತಹಿಸಿದ್ದು ಸತ್ಯವಲ್ಲವೇ?
ಆ ಮೂರ್ನಾಲ್ಕು ಅಂಗಡಿಗಳಲ್ಲಿ ಆತ ಒಮ್ಮೆಯಾದರೂ ಬಂದು ಹೋಗಿರಬಹುದೆಂದು ಅಂದಾಜು ಮಾಡಿಕೊಂಡು, ಸುಮ್ಮನೇ ಆ ಅಂಗಡಿಗಳಲ್ಲಿ ಸ್ಟ್ರೆಪ್ಸಿಲ್ಸ… ಕೊಂಡದ್ದು ಅವನ ಮೇಲಿನ ಆರಾಧನೆಯಿಂದಲೇ ಅಲ್ಲವೇ? ಈತ ಮಾತು ಮುಂದುವರೆಸಲು ನೋಡಿದ.. ಇರುವ ಸಂಪೂರ್ಣ ಶಕ್ತಿ ಒಗ್ಗೂಡಿಸಿದವಳೇ. ಕ್ಷೀಣ ಸ್ವರದಲ್ಲಿ ದಯವಿಟ್ಟು ಕ್ಷಮಿಸಿ….ನೆನ್ನೆ stress ಅತೀ ಜಾಸ್ತಿ ಇತ್ತು..ಸುಸ್ತಾಗಿದೆ ಅಂದವಳೇ ಸೀದಾ ತನ್ನ ರೂಂಗೆ ಹೊರಟುಬಿಟ್ಟಳು. ಹಾಲ್‌ನಲ್ಲಿ ದ್ದ ಕಾವೇರಮ್ಮ, ಅನುಭವದಲ್ಲಿ ಮುಳುಗೆದ್ದ ಹೆಂಗಸು. ಪರಿಸ್ಥಿತಿ ನಿಭಾಯಿಸಿದರು. ಅವರಿಗೆ ಹಿಮಳಿಗಿಂತ ನಿಜಾಯಿತಿ ಹುಡುಗಿ ಸಿಗಲಾರಳೆಂಬ ಅದಮ್ಯ ಭರವಸೆ..
ಕಿಚನ್ ನಲ್ಲಿ ಹಿಮಾಳ ತಾಯಿ ಉಕ್ಕಿ ಬಂದ ಗಂಟಲು ತಡೆಯಲಾರದೆ, ಕೆಮ್ಮುತ್ತಿರುವಂತೆ ಕಂಡರು. ಅಲ್ಲಿ ಕೂರಲಾಗದೇ ಹೊರಬಂದು ಒಂದಷ್ಟು ಹೆಜ್ಜೆ ಹಾಕಿದೆ…ಅದೇ ಜೈನ್ ಕಾಲೇಜು…ಅವೇ ಜೋಡಿಗಳು.
ಜೈನ್ ಕಾಲೇಜ್ ಮುಂಭಾಗ…ಅಲ್ಲಿ ಬೆಳ್ಳಂಬೆಳಿಗ್ಗೆ ಕಾಲೇಜಿಗೆ ಚಕ್ಕರ್ ಹಾಕಿ ಕೂರುವ ಜೋಡಿಗಳನ್ನು ನೋಡಿದ್ದೇನೆ. ಒಬ್ಬೊಬ್ಬರು..ನಾಲ್ಕಾರು ಸಂಬಂಧಗಳಲ್ಲಿ ಮುಳುಗೇಳುವವರನ್ನೂ ಕಚೇರಿಗಳಲ್ಲಿ ನೋಡಿದ್ದೇನೆ.
ಆದರೆ ಇಷ್ಟೊಂದು ತಪನೆ-ಆರಾಧನೆ-ಸಮರ್ಪಣೆ-ಭಾವ ಸಮಾಧಿ ಮಟ್ಟ , ಅದೂ ಈ ಕಾಲದಲ್ಲಿ ; ಇವಳನ್ನು ನೋಡಿ ದಾಗಲೇ ಅರಿವಿಗೆ ಬಂದದ್ದು… ಮಂಜುಳಾ ಡಿ.