Advertisement

ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ : ಭಾರತೀಯರ ನೀರಸ ಪ್ರದರ್ಶನ

10:04 AM Sep 15, 2019 | sudhir |

ನುರ್‌ ಸುಲ್ತಾನ್‌ (ಕಜಕಸ್ತಾನ್‌): ವಿಶ್ವದ ದಿಗ್ಗಜ ಕುಸ್ತಿ ಪಟುಗಳ ವಿರುದ್ಧ ಪ್ರಬಲ ಪೈಪೋಟಿ ನಡೆಸುವ ಭಾರತದ ಕನಸಿಗೆ ಮೊದಲ ದಿನವೇ ಹಿನ್ನಡೆಯಾಗಿದೆ. ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನ ಮೊದಲ ದಿನ ಭಾರತದ ನಾಲ್ವರು ಸ್ಪರ್ಧಿಗಳು ಗ್ರೀಕೋ ರೋಮನ್‌ ಪುರುಷರ ವಿಭಾಗದಲ್ಲಿ ಕ್ರಮವಾಗಿ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಇದರಿಂದ ಭಾರತ ಮೊದಲ ದಿನ ಕೂಟದಲ್ಲಿ ಶುಭಾರಂಭ ಮಾಡಲಾಗದೆ ನಿರಾಶೆ ಅನುಭವಿಸಿತು.

Advertisement

ಮೊದಲ ಸುತ್ತಿನಲ್ಲಿ ಭಾರೀ ಕುಸಿತ:
ಒಲಿಂಪಿಕ್ಸ್‌ಯೇತರ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಸ್ಪರ್ಧಿಗಳಿಂದ ನಿರೀಕ್ಷಿತ ಪ್ರದರ್ಶನ ಹೊರಹೊಮ್ಮಲಿಲ್ಲ. ಏಷ್ಯನ್‌ ಚಾಂಪಿಯನ್‌ಶಿಪ್‌ ಬೆಳ್ಳಿಯ ಪದಕ ವಿಜೇತ ಹರ್‌ಪ್ರೀತ್‌ ಸಿಂಗ್‌ (82 ಕೆ.ಜಿ), ಸಾಗರ್‌ (63 ಕೆ.ಜಿ) ಹಾಗೂ ಮಂಜೀತ್‌ (55 ಕೆ.ಜಿ) ಒಂದು ಅಂಕವನ್ನೂ ಗಿಟ್ಟಿಸಿಕೊಳ್ಳಲೂ ಸಾಧ್ಯವಾಗದೆ ಎದುರಾಳಿಗಳಿಗೆ ಕ್ರಮವಾಗಿ ಶರಣಾದರು.

ಹರ್‌ಪ್ರೀತ್‌ 5-0 ಅಂಕಗಳ ಅಂತರದಿಂದ ಚೆಕ್‌ ಗಣರಾಜ್ಯದ ನೊವಾಕ್‌ ವಿರುದ್ಧ ಸೋಲು ಅನುಭವಿಸಿದರು. ವಿಶ್ವ ಚಾಂಪಿಯನ್‌ ಅಜರ್‌ಬೈಜನ್‌ನ ಎಲ್ಡಂಝಿ ಅಜಿಝಿÉ ವಿರುದ್ಧ ಮಂಜೀತ್‌ ಹೀನಾಯ ಸೋಲು ಅನುಭವಿಸಿದರು. ಮತ್ತೂಂದು ಸೆಣಸಾಟದಲ್ಲಿ ಸಾಗರ್‌ ಕೇವಲ ಎರಡನೇ ನಿಮಿಷದಲ್ಲಿ ಆತಿಥೇಯ ಕಜಕಸ್ತಾನದ ಅಲ್ಮತ್‌ ಕೆಬಿಸ್‌ಪಾಯೆವ್‌ ವಿರುದ್ಧ ಹೀನಾಯ ಸೋಲು ಕಂಡರು. ಭಾರತೀಯರು ವಿಶ್ವ ಮಟ್ಟಕ್ಕೆ ಬೇಕಾಗಿದ್ದ ಅನುಭವದ ಕೊರತೆಯಿಂದಾಗಿ ಸೋಲು ಅನುಭವವಿಸುವಂತಾಯಿತು.

ಗಮನ ಸೆಳೆದ ಯೋಗೇಶ್‌
ಇರುವುದರಲ್ಲಿ 72 ಕೆ.ಜಿ ವಿಭಾಗದಲ್ಲಿ ಯೋಗೇಶ್‌ ಮಾತ್ರ ಪ್ರಬಲ ಹೋರಾಟ ನೀಡಲು ಸಾಧ್ಯವಾಯಿತು. ರೋಚಕ ಸೆಣಸಿನಲ್ಲಿ 5-6 ಅಂಕಗಳ ಅಂತರದಿಂದ ಅಮೆರಿಕದ ರೆಮಂಡ್‌ ಅಂಥೋನಿ ಬಂಕರ್‌ ವಿರುದ್ಧ ಸೋಲು ಅನುಭವಿಸಿದರು. ಸೋಲಿನಲ್ಲೂ ಯೋಗೇಶ್‌ ಪರಾಕ್ರಮ ಆಟ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಇದು ಅಲ್ಪ ಮಟ್ಟಿಗೆ ಭಾರತೀಯ ಅಭಿಮಾನಿಗಳಿಗೆ ಸಮಾಧಾನ ತಂದ ಸುದ್ದಿ. ಯೋಗೇಶ್‌ ಮೊದಲ ಸುತ್ತಿನಲ್ಲಿ 4-0 ಅಂಕಗಳ ಅಂತರದಿಂದ ಹಿನ್ನಡೆ ಅನುಭವಿಸಿದ್ದರು. ಆದರೆ ನಂತರದ ಹಂತದಲ್ಲಿ ಯೋಗೇಶ್‌ ಪ್ರಬಲ ಆಟ ಪ್ರದರ್ಶಿಸಿದರು. 5-4 ಅಂತರದ ಮುನ್ನಡೆ ಪಡೆದಿದ್ದರು. ಆದರೆ ಕೊನೆಯ ಹಂತದಲ್ಲಿ ಎಡವಿದ್ದರಿಂದ ಕೇವಲ 2 ಅಂಕದಿಂದ ಸೋಲು ಅನುಭವಿಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next