ಸೋಫಿಯಾ (ಬಲ್ಗೇರಿಯಾ): “ವರ್ಲ್ಡ್ ಒಲಿಂಪಿಕ್ ಕ್ವಾಲಿಫೈಯರ್’ನ 125 ಕೆ.ಜಿ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಅಮೋಘ ಪ್ರದರ್ಶನ ನೀಡಿದ ಭಾರತದ ಸುಮಿತ್ ಮಲಿಕ್ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾಗಿದ್ದಾರೆ.
28 ವರ್ಷದ, ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಆಗಿರುವ ಸುಮಿತ್ ಮಲಿಕ್ ವೆನಿಜುವೆಲಾದ ಜೋಸ್ ಡಯಾಜ್ ರಾಬರ್ಟಿ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸುವ ಮೂಲಕ ಒಲಿಂಪಿಕ್ಸ್ ಅರ್ಹತೆ ಪಡೆದರು. ಅವರು ಟೋ :ಕಿಯೊ ಪ್ರವೇಶ ಪಡೆದ ಭಾರತದ 7ನೇ ಕುಸ್ತಿಪಟು.
ಸೀಮಾ ಟೋಕಿಯೊ ಸನಿಹ
ವನಿತೆಯರ 50 ಕೆ.ಜಿ. ವಿಭಾಗದಲ್ಲಿ ಸೀಮಾ ಬಿಸ್ಲಾ ಒಲಿಂಪಿಕ್ಸ್ ಅರ್ಹತೆಯ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಆದರೆ ನಿಶಾ ಮತ್ತು ಪೂಜಾ ರೇಸ್‌ನಿಂದ ಹೊರಬಿದ್ದಿದ್ದಾರೆ.
ಸೆಮಿಫೈನಲ್ ಪ್ರವೇಶಿಸಿರುವ ಸೀಮಾ ಬಿಸ್ಲಾ ಪೋಲೆಂಡ್‌ನ ಅನ್ನಾ ಲ್ಯುಕಾಸಿಯಾಕ್ ವಿರುದ್ಧ ಸ್ಪರ್ಧಿಸಲಿದ್ದಾರೆ. ಇಲ್ಲಿ ಜಯ ಸಾಧಿಸಿದರೆ ಸೀಮಾ ಅವರ ಟೋಕಿಯೊ ಟಿಕೆಟ್ ಖಾತ್ರಿಯಾಗಲಿದೆ.