ವಿಜಯಪುರ: ಕುಸ್ತಿ ವೈಯಕ್ತಿಕ ಕ್ರೀಡೆಗಳಲ್ಲಿ ಅತ್ಯುತ್ತಮ ಕ್ರೀಡೆ. ಕುಸ್ತಿ ಪಟುಗಳು ನಿರಂತರ ವ್ಯಾಯಾಮದ ಜೊತೆಗೆ ಪೌಷ್ಠಿಕ ಆಹಾರ ಸೇವನೆ ಅವಶ್ಯಕ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು.
ಹಿಟ್ಟಿನಹಳ್ಳಿ ಗ್ರಾಮದಲ್ಲಿ ಮಾರುತೇಶ್ವರ ಹಾಗು ದ್ಯಾಮಗಂಗಾ ಜಾತ್ರಾ ಮಹೋತ್ಸವದ ನಿಮಿತ್ತ ಪ್ರತಿ ವರ್ಷದಂತೆ ಈ ಬಾರಿಯು ಕುಸ್ತಿ ಪಟುಗಳಿಗೆ ಸ್ಪರ್ಧೆ ಏರ್ಪಡಿಸಿದ ಸಮಾರಂಭ ಉದ್ಘಾಟಿಸಿ ಮಾತನಾಡಿ ಹಿಟ್ಟಿನಹಳ್ಳಿ ಗ್ರಾಮದಲ್ಲಿ ಕುಸ್ತಿ ಸ್ಪರ್ಧೆಗಳು ಗುಣಮಟ್ಟದಿಂದ ಕೂಡಿರುತ್ತವೆ. ಮಹಿಳಾ ಮತ್ತು ಪುರುಷರ ಕುಸ್ತಿ ಸ್ಪರ್ಧೆಗೆ ಸಾವಿರಾರು ಅಭಿಮಾನಿಗಳು ವೀಕ್ಷಿಸಲು ಆಗಮಿಸಿದ್ದು ನೋಡಿದರೆ ಕುಸ್ತಿ ಸ್ಪರ್ಧೆಗಳು ಘನತೆ ಗೌರವ ಕಾಪಾಡಿವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಪಾರಂಪರಿಕ ಹಿನ್ನೆಲೆ ಹೊಂದಿರುವ ಕುಸ್ತಿ ಕ್ರೀಡೆ ಪ್ರಸ್ತುತ ಗ್ರಾಮೀಣ ಪ್ರದೇಶದ ಜಾತ್ರೆಗಳಲ್ಲಿ ಕುಸ್ತಿ ವಿಶೇಷ ಆಕರ್ಷಣೆ ಪಡೆದಿದೆ. ಸದರಿ ಕ್ರೀಡೆಗೆ ಇದೀಗ ಎಲ್ಲಿಲ್ಲದ ಉತ್ಸಾಹವಿದೆ. ಆದರೂ ಸಮಾಜದಲ್ಲಿ ಕುಸ್ತಿ ಕ್ರೀಡೆ ಹಾಗೂ ಕುಸ್ತಿ ಕ್ರೀಡಾಪಟುಗಳು ಸಂಖ್ಯೆ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ದೈಹಿಕ ಸಾಮರ್ಥ್ಯ ಕಾಯ್ದುಕೊಂಡು ಕುಸ್ತಿಪಟುಗಳಾಲು ಬಡ ಕ್ರೀಡಾಪಟುಗಳಿಗೆ ಇದರಿಂದ ಸಾಧ್ಯವಾಗದು. ದೈಹಿಕ ಸಾಮರ್ಥ್ಯ ಪಡೆಯದೆ ಕುಸ್ತಿ ಪಟುಗಳಾಗಲು ಸಾಧ್ಯವಿಲ್ಲ. ಹೀಗಾಗಿ ಕುಸ್ತಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಸರ್ಕಾರ ಕುಸ್ತಿ ಪಟುಗಳಿಗೆ ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.
ಕುಸತಿ ಕಾರ್ಯಕ್ರಮ ಸಂಘಟಕ ಚಂದ್ರಶೇಖರ ಮಲಘಾಣ ಮಾತನಾಡಿ, ನಮ್ಮ ಗ್ರಾಮದಲ್ಲಿ ಕೇವಲ 3 ಲಕ್ಷ ರೂ. ಹಣದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದು, ಸಂತೃಪ್ತಿ ತಂದಿದೆ. ನಮ್ಮೂರ ಜಾತ್ರೆ ಕುಸ್ತಿ ಸ್ಪರ್ಧೆಯಲ್ಲಿ ಈ ಭಾರಿ ಮಹಿಳಾ ಕುಸ್ತಿ ಪಟುಗಳು ಆಗಮಿಸಿರುವುದ ಸಂತಸ ತಂದಿದೆ ಎಂದರು.
ವಿಜಯಪುರ, ಗದಗ, ಯಾದಗಿರಿ, ಬಾಗಲಕೋಟೆ, ಬೆಳಗಾವಿ ಮಾತ್ರವಲ್ಲದೇ ಮಹಾರಾಷ್ಟ್ರ ರಾಜ್ಯದ ವಿವಿಧ ಕಡೆಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ರಾಜೇಂದ್ರ ಬಿರಾದಾರ, ಅಶೋಕ ಬಗಲಿ, ಶ್ರೀಕಾಂತ ಚೌಧರಿ, ಸಾಹೇಬಗೌಡ ಬಿರಾದಾರ, ಶ್ರೀಕಾಂತ ಗೊಂಗಡಿ, ಮಲ್ಲಪ್ಪ ಕತ್ನಳ್ಳಿ, ಪ್ರಕಾಶ ಚಿಕ್ಕಲಕಿ, ಜಗನ್ನಾಥ ಶಿರಭೂರ, ಮಲ್ಲಪ್ಪ ಬಾವಿಕಟ್ಟಿ, ದುಂಡಪ್ಪ ಬಗಲಿ, ಸಿದ್ದು ಗಾಯಕವಾಡ, ಧರೆಪ್ಪ ಪಡನಾಡ, ಮಹಾಂತೇಶ ಪಡನಾಡ, ವಿಠ್ಠಲ ಹಂಚನಾಳ, ಸುಭಾಶ ಯಂಭತ್ತನಾಳ, ರಾಮಗೊಂಡ ಬೀಳೂರು, ಮುದಸ್ಸರ ವಾಲಿಕಾರ, ಮಲ್ಲಪ್ಪ ಇಂಡಿ, ಶಿವಾನಂದ ಚಿತ್ತಾಪೂರ, ಖಾನಪ್ಪ ಚಿತ್ತಾಪುರ ಸೇರಿದಂತೆ ಇತರರು ಉಪಸ್ಥಿತರಿದ್ದರು.