ಹರಪನಹಳ್ಳಿ: ವಿಶ್ವವಿದ್ಯಾಲಯ ಮಟ್ಟದ 70 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಮಲ್ಲಿಕಾರ್ಜುನ್(20) ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಹಲುವಾಗಲಿನ ಯುವ ಪೈಲ್ವಾನ್ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಹಲುವಾಗಲು ಗ್ರಾಮದ ಬಡ ಕುಟುಂಬದ ಶಿವಪ್ಪ ಜ್ಯೋತೆಮ್ಮ ದಂಪತಿಯ ಪುತ್ರ ದನಕವರ್ ಮಲ್ಲಿಕಾರ್ಜುನ್ ಇವರು ಮೇ.27 ಮತ್ತು 28 ರಂದು ಥೈಲ್ಯಾಂಡಿನ ಬ್ಯಾಂಕಾಕ್ ರಾಜ್ಯದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ 70 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾರತದಿಂದ ಪ್ರತಿನಿಧಿಸಿ ಜಪಾನ್, ಇಂಡೊನೇಷ್ಯ, ಥೈಲ್ಯಾಂಡ್, ಅಮೆರಿಕಾ ದೇಶಗಳ ಕುಸ್ತಿ ಪುಟಗಳನ್ನು ಬಗ್ಗು ಬಡೆದು ಚಿನ್ನದ ಪದಕ ಪಡೆದುಕೊಳ್ಳುವ ಮೂಲಕ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾನೆ.
ಕುಸ್ತಿ ಸ್ಪರ್ಧೆಯಲ್ಲಿ ಜಯ ಸಾಧಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಲ್ಲದೇ ತಾಲೂಕಿನ ಕಿರ್ತಿಯನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಿರುವ ಮಲ್ಲಿಕಾರ್ಜುನ್ ಅವರಿಗೆ ಹರಪನಹಳ್ಳಿ ಕ್ಷೇತ್ರದ ಶಾಸಕ ಜಿ.ಕರುಣಾಕರ ರೆಡ್ಡಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಕಾಂಗ್ರೆಸ್ ಮುಖಂಡ ಎಚ್.ಬಿ.ಪರಶುರಾಮ, ಶಶಿಧರ್ ಪೂಜಾರ್, ಎಂ.ಪಿ.ವೀಣಾ ಮಲ್ಲಿಕಾರ್ಜನ್ ಸೇರಿದಂತೆ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಸರ್ಕಾರಿ ನೌಕರರು ಅಭಿನಂದಿಸಿದ್ದಾರೆ.