Advertisement

Wrestling:ರಾಜ್ಯಕ್ಕೆ ದಾಖಲೆಯ 47 ಚಿನ್ನದ ಪದಕ

12:22 AM Jul 02, 2024 | Team Udayavani |

ಬೆಂಗಳೂರು: ತಮಿಳುನಾಡಿನ ಮೆಟ್ಟೂರಿನಲ್ಲಿ ನಡೆದ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ 47 ಚಿನ್ನದ ಪದಕಗಳನ್ನು ಗೆದ್ದು ದಾಖಲೆ ಸ್ಥಾಪಿಸಿದೆ. ದಕ್ಷಿಣ ಭಾರತ 23ರ ವಯೋಮಿತಿ ವಿಭಾಗದಲ್ಲಿ 29, ದಕ್ಷಿಣ ಭಾರತ ಸಾಂಪ್ರದಾಯಿಕ ಹಿರಿಯರ ವಿಭಾಗದಲ್ಲಿ 18 ಚಿನ್ನ ಮತ್ತು 2 ಕಂಚಿನ ಪದಕಗಳು ರಾಜ್ಯದ ಪಾಲಾಗಿವೆ.
ಅಂಡರ್‌-23 ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ 9 ಫ್ರೀ ಸ್ಟೈಲ್‌, 10 ಗ್ರೀಕೋ ರೋಮನ್‌ ಮತ್ತು ಮಹಿಳೆಯರ 10 ವಿಭಾಗಗಳಲ್ಲಿ ರಾಜ್ಯದ ಕುಸ್ತಿಪಟುಗಳು ಚಿನ್ನದ ಪದಕ ಬಾಚಿಕೊಂಡಿದ್ದಾರೆ. ಹಿರಿಯರ ವಿಭಾಗದಲ್ಲಿ ತಲಾ 10 ಪುರುಷರು ಮತ್ತು ಮಹಿಳೆಯರು ಪಾಲ್ಗೊಂಡಿದ್ದು, 18 ಚಿನ್ನದ ಪದಕ ಮತ್ತು 2 ಕಂಚಿನ ಪದಕಗಳು ಲಭಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next