Advertisement

Wrestler; ‘ಕರ್ತವ್ಯ ಪಥ’ದಲ್ಲಿ ಪ್ರಶಸ್ತಿ ಇರಿಸಿದ ವಿನೇಶ್‌ ಫೋಗಟ್‌

11:39 PM Dec 30, 2023 | Team Udayavani |

ಹೊಸದಿಲ್ಲಿ: ಕುಸ್ತಿಪಟು ವಿನೇಶ್‌ ಫೋಗಟ್‌ ತಮ್ಮ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ಹಿಂದಿರುಗಿಸಿದರು. ಶನಿವಾರ ಈ ಎರಡೂ ಪ್ರಶಸ್ತಿಗಳನ್ನು ರಾಜಧಾನಿಯ ಪ್ರಧಾನಿ ಕಚೇರಿಗೆ ತೆಗೆದುಕೊಂಡು ಹೋಗಲು ನಿರ್ಧರಿಸಿದ್ದ ಅವರನ್ನು ಪೊಲೀಸರು ತಡೆದರು.

Advertisement

ಹೀಗಾಗಿ “ಕರ್ತವ್ಯ ಪಥ’ದಲ್ಲಿ ಇರಿಸಿ ವಾಪಸಾಗಬೇಕಾಯಿತು. ಬಳಿಕ ಈ ಪ್ರಶಸ್ತಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. “ಕುಸ್ತಿಪಟುಗಳಿಗೆ ನ್ಯಾಯ ಮರೀಚಿಕೆಯಾಗಿರುವ ಈ ಹೊತ್ತಿನಲ್ಲಿ ಇಂಥ ಪ್ರಶಸ್ತಿಗಳನ್ನು ಇರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಹೀಗಾಗಿ ನಾನು ಇದನ್ನು ವಾಪಸ್‌ ಮಾಡುತ್ತೇನೆ’ ಎಂಬುದಾಗಿ ವಿನೇಶ್‌ ಫೋಗಟ್‌ ಮಂಗಳವಾರ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next