Advertisement

ನಾಪತ್ತೆಯಾಗಿದ್ದ ವಾಯುಪಡೆ ವಿಮಾನದ ಅವಶೇಷ 9 ದಿನಗಳ ಬಳಿಕ ಪತ್ತೆ

09:19 AM Jun 12, 2019 | Team Udayavani |

ಇಟಾನಗರ: ಜೂನ್‌ 3 ರಂದು ನಾಪತ್ತೆಯಾಗಿದ್ದ  ವಾಯುಪಡೆಯ ವಿಮಾನ ಎಎನ್‌ -32 ಅವಶೇಷ 9 ದಿನಗಳ ಬಳಿಕ ಅರುಣಾಚಲ ಪ್ರದೇಶದ ಉತ್ತರ ಲಿಪೋದಲ್ಲಿ ಮಂಗಳವಾರ ಪತ್ತೆಯಾಗಿದೆ.

Advertisement

ಈ ಬಗ್ಗೆ ವಾಯುಸೇನೆ ಟ್ವೀಟ್‌ ಮಾಡಿದ್ದು, ಎಎನ್‌ -32 ವಿಮಾನದ ಅವಶೇಷ ಲಿಪೋದಿಂದ 16 ಕಿ.ಮೀ ಉತ್ತರ ಭಾಗದಲ್ಲಿ ಪತ್ತೆಯಾಗಿದೆ. ಶೋಧ ಕಾರ್ಯಾಚರಣೆ ವೇಳೆ ಐಎಎಫ್ ಎಮ್‌ಐ 17 ಹೆಲಿಕ್ಯಾಪ್ಟರ್‌ಗೆ 12,000 ಅಡಿ ಎತ್ತರದ ಪ್ರದೇಶದಿಂದ ಅವಶೇಷ ಗೋಚರಿಸಿದೆ ಎಂದು ಹೇಳಿದೆ.

ವಿಮಾನದಲ್ಲಿದ್ದವರ ಸ್ಥಿತಿಯನ್ನು ತಿಳಿಯಲು ಮತ್ತು ಬದುಕಿ ಉಳಿದವರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯ ಆರಂಭಿಸಿದ ಬಳಿಕ ಹೆಚ್ಚಿನ ವಿವರಗಳನ್ನು ನೀಡುವುದಾಗಿ ವಾಯುಪಡೆ ತಿಳಿಸಿದೆ.

ಅಸ್ಸಾಂನ ಜೋರ್ಹತ್‌ ವಾಯುನೆಲೆಯಿಂದ ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಗೆ ಮಧ್ಯಾಹ್ನ ಪ್ರಯಾಣ ಬೆಳೆಸಿದ್ದ ವಿಮಾನ 35 ನಿಮಿಷಗಳ ಬಳಿಕ ಸಂಪರ್ಕ ಕಳೆದುಕೊಂಡು ನಾಪತ್ತೆಯಾಗಿತ್ತು.

ಇಸ್ರೋ ಉಪಗ್ರಹಗಳ ಸಹಾಯದಿಂದ ವಿಮಾನ ಪತ್ತೆಗೆ ಯತ್ನಿಸಲಾಗಿತ್ತು. ಇಸ್ರೋ ಸಂಸ್ಥೆಯು ರಿಸ್ಯಾಟ್‌ ರೇಡಾರ್‌ ಇಮೇಜಿಂಗ್‌ ಉಪಗ್ರಹದ ನೆರವನ್ನೂ ಬಳಸಿಕೊಳ್ಳಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next