Advertisement

WPL Auction; ಬರೋಬ್ಬರಿ 1.3 ಕೋಟಿ ರೂ ಬಾಚಿದ ಕರ್ನಾಟಕದ 21 ವರ್ಷದ ವೃಂದಾ ದಿನೇಶ್

04:52 PM Dec 09, 2023 | Team Udayavani |

ಮುಂಬೈ: ವನಿತಾ ಪ್ರೀಮಿಯರ್ ಲೀಗ್ ನ ಮಿನಿ ಹರಾಜು ಪ್ರಕ್ರಿಯೆ ಮುಂಬೈನಲ್ಲಿ ಶನಿವಾರ ನಡೆಯುತ್ತಿದೆ. ಕೆಲ ಘಟಾನುಘಟಿ ಅಂತಾರಾಷ್ಟ್ರೀಯ ಆಟಗಾರು ಯಾವುದೇ ಬಿಡ್ ಇರದೆ ನಿರಾಸೆ ಅನುಭವಿಸಿದರೆ, ಕೆಲ ಹೊಸ ಆಟಗಾರರು ಭಾರಿ ಬೇಡಿಕೆ ಪಡೆದರು. ಕರ್ನಾಟಕದ 21ರ ಹರೆಯದ ವೃಂದಾ ದಿನೇಶ್ ಬರೋಬ್ಬರಿ 1.3 ಕೋಟಿ ರೂ ಪಡೆದರು.

Advertisement

ಕರ್ನಾಟಕ ತಂಡದ ಬ್ಯಾಟರ್ ಆಗಿರುವ ವೃಂದಾ ದಿನೇಶ್ ತನ್ನ ಅಗ್ರೆಸಿವ್ ಬ್ಯಾಟಿಂಗ್ ನಿಂದ ಹೆಸರು ಪಡೆದವರು. ಎಸಿಸಿ ಎಮರ್ಜಿಂಗ್ ಟೀಮ್ಸ್ ಕಪ್‌ ಗೆ ವೃಂದಾ ಆರಂಭದಲ್ಲಿ ಆಯ್ಕೆಯಾಗಿರಲಿಲ್ಲ. ಆದರೆ ಎಸ್ ಯಶಸ್ರಿಗೆ ಬದಲಿಗೆ ತಂಡಕ್ಕೆ ಸೇರಿದ ಅವರು ಫೈನಲ್ ಪಂದ್ಯದಲ್ಲಿ ತಂಡದಲ್ಲಿ ಆಡಿದರು. ಈ ಪಂದ್ಯದಲ್ಲಿ ಅವರು 29 ಎಸೆತಗಳಲ್ಲಿ 36 ರನ್ ಗಳಿಸಿದ್ದರು.

ಸೀನಿಯರ್ ಮಹಿಳಾ ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ತಂಡವು ಫೈನಲ್ ತಲುಪಲು ಅವರು ಪ್ರಮುಖ ಪಾತ್ರ ವಹಿಸಿದರು. 11 ಇನ್ನಿಂಗ್ಸ್‌ ಗಳಲ್ಲಿ 47.70 ರ ಸರಾಸರಿಯಲ್ಲಿ 477 ರನ್ ಗಳಿಸಿದರು. ಅಲ್ಲದೆ ರಾಜಸ್ಥಾನ ವಿರುದ್ಧ 81 ರನ್‌ ಗಳನ್ನು ಇನ್ನಿಂಗ್ಸ್ ಆಡಿದ್ದರು.

ವೃಂದಾ ದಿನೇಶ್ ಇತ್ತೀಚೆಗಷ್ಟೇ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದರು. ಇಂಗ್ಲೆಂಡ್ ಎ ವಿರುದ್ಧದ ಸರಣಿಯಲ್ಲಿ ವೃಂದಾ ದಿನೇಶ್ ಭಾರತ ತಂಡದ ಭಾಗವಾಗಿದ್ದರು.

Advertisement

ಇಂದು ನಡೆದ ಹರಾಜಿನಲ್ಲಿ ವೃಂದಾ ದಿನೇಶ್ 1.3 ಕೋಟಿ ರೂ ಪಡೆದರು. ಈ ಬಾರಿಯ ಡಬ್ಲ್ಯೂಪಿಎಲ್ ನಲ್ಲಿ ಅವರು ಯುಪಿ ವಾರಿಯರ್ಸ್ ತಂಡದ ಪರ ಆಡಲಿದ್ದಾರೆ. ಅತಿ ಹೆಚ್ಚು ಹಣ ಪಡೆದ ಅನ್ ಕ್ಯಾಪ್ಡ್ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು. ಆದರೆ ಕೆಲವೇ ಸಮಯಲ್ಲಿ 2 ಕೋಟಿ ರೂ ಪಡೆದ ಕಶ್ವಿ ಗೌತಮ್ ಈ ದಾಖಲೆ ಮುರಿದರು.

Advertisement

Udayavani is now on Telegram. Click here to join our channel and stay updated with the latest news.

Next