Advertisement
ಜಮ್ಮು-ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗ್ಯುರೇಝ್ ಕ್ಷೇತ್ರದಲ್ಲಿ ಚುನಾವಣಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ವೇಳೆ ರಾಜನಾಥ್ ಸಿಂಗ್ ಈ ಹೇಳಿಕೆ ನೀಡಿದ್ದಾರೆ.
Related Articles
Advertisement
ಭಾಷಣದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯ ಹೇಳಿಕೆಯನ್ನು ಪ್ರಸ್ತಾಪಿಸಿದ ಸಿಂಗ್, ನಾವು ಗೆಳೆಯರನ್ನು ಬದಲಾಯಿಸಬಹುದು, ಆದರೆ ನಮ್ಮ ನೆರೆಹೊರೆಯವರನ್ನು ಬದಲಾಯಿಸಲು ಸಾಧ್ಯವಿಲ್ಲ. ಆ ನಿಟ್ಟಿನಲ್ಲಿ ನಾನು ನನ್ನ ಪಾಕಿಸ್ತಾನಿ ಗೆಳೆಯರಿಗೆ ಹೇಳುತ್ತಿರುವುದೇನೆಂದರೆ ನಮ್ಮ ಸಂಬಂಧ ಯಾಕೆ ಹದಗೆಡುತ್ತಿದೆ? ನಾವು ನೆರೆಹೊರೆಯವರು, ಒಂದು ವೇಳೆ ನಮ್ಮ ಸಂಬಂಧ ಉತ್ತಮವಾಗಿದ್ದಿದ್ದರೆ, ನಾವು ಪಾಕಿಸ್ತಾನಕ್ಕೆ ಐಎಂಎಫ್ ಕೊಟ್ಟಿರುವುದಕ್ಕಿಂತ ಅಧಿಕ ಹಣಕಾಸಿನ ನೆರವು ನೀಡುತ್ತಿದ್ದೇವು ಎಂದು ಹೇಳಿದರು.
ಹಣಕಾಸು ನೆರವನ್ನು ಪಾಕ್ ಭಯೋತ್ಪಾದನೆಗೆ ಬಳಸುತ್ತಿದೆ:
ಭಾರತದ ಸರ್ಕಾರ ಜಮ್ಮು-ಕಾಶ್ಮೀರದ ಅಭಿವೃದ್ಧಿಗಾಗಿ ಹಣಕಾಸು ನೆರವು ನೀಡುತ್ತಿದೆ. ಆದರೆ ಪಾಕಿಸ್ತಾನ ಹಣಕಾಸು ನೆರವನ್ನು ತನ್ನ ದೇಶದಲ್ಲಿ ಭಯೋತ್ಪಾದಕರ ಕಾರ್ಖಾನೆ ನಡೆಸಲು ಬಳಸುತ್ತಿದೆ ಎಂದು ರಾಜನಾಥ್ ಸಿಂಗ್ ಆರೋಪಿಸಿದರು. ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸುತ್ತಿದೆ. ನಾವು ಭಯೋತ್ಪಾದಕ ಕೃತ್ಯಗಳ ಕುರಿತು ತನಿಖೆ ನಡೆಸಿದಾಗಲೆಲ್ಲಾ ಅದರಲ್ಲಿ ಪಾಕಿಸ್ತಾನ ಶಾಮೀಲಾಗಿರುವುದು ಸಾಬೀತಾಗಿರುವುದಾಗಿ ರಾಜನಾಥ್ ಹೇಳಿದರು.