Advertisement

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

01:10 AM Dec 31, 2024 | Team Udayavani |

ಹೈದರಾಬಾದ್‌: “ಪುಷ್ಪ-2′ ಪ್ರೀಮಿಯರ್‌ ಶೋ ವೇಳೆಯ ಕಾಲ್ತುಳಿತ ,  ನಟ ಅಲ್ಲು ಅರ್ಜುನ್‌ ಬಂಧನ ಬಗ್ಗೆ ಇದೇ ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌, “ಕಾನೂನು ಎಲ್ಲರಿಗೂ ಒಂದೇ. ನಾನು ಈ ವಿಚಾರದಲ್ಲಿ ಪೊಲೀಸರನ್ನು ದೂಷಿಸುವುದಿಲ್ಲ’ ಎಂದಿದ್ದಾರೆ.

Advertisement

ಹೀರೋ ಬರುತ್ತಿದ್ದಾರೆ ಎಂದಾಗ ಅಭಿಮಾನಿಗಳು ಉತ್ಸುಕರಾಗುವುದು ಸಹಜ. ಆದರೆ ಇಂಥ ಘಟನೆಗಳು ನಡೆದಾಗ ನಾನು ಪೊಲೀಸರನ್ನು ದೂಷಿಸುವುದಿಲ್ಲ.

ಏಕೆಂದರೆ ಪೊಲೀಸರು ಮೊದಲು ಕಾನೂನು ಸುವ್ಯವಸ್ಥೆ ಬಗ್ಗೆ ಗಮನ  ಹರಿಸುತ್ತಾರೆ ಎಂದಿದ್ದಾರೆ. ತೆಲಂಗಾಣ ಸಿಎಂ ನೀತಿಗಳನ್ನು ಅವರು ಶ್ಲಾಘಿಸಿದ್ದಾರೆ. ಅಲ್ಲು ಬಂಧನ ವಿಚಾರದಲ್ಲಿ  ಸಿಎಂ ಕೈಗೊಂಡ ಕ್ರಮಗಳು ಸರಿ ಎಂದು  ಹೇಳಿದ್ದಾರೆ.

 

 

Advertisement

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next