Advertisement

ಅತ್ಯಂತ ಕಳಪೆ ಬ್ಯಾಟಿಂಗ್‌:ರೋಹಿತ್‌ ಅಸಮಾಧಾನ

03:45 AM May 18, 2017 | Team Udayavani |

ಮುಂಬಯಿ: ಪ್ರಸಕ್ತ ಐಪಿಎಲ್‌ ಋತುವಿನಲ್ಲೇ ನಾವು ತೋರ್ಪಡಿಸಿದ ಅತ್ಯಂತ ಕಳಪೆ ಹಾಗೂ ಅತ್ಯಂತ ಕೆಟ್ಟ ಬ್ಯಾಟಿಂಗ್‌ ನಿರ್ವಹಣೆ ಇದಾಗಿದೆ ಎಂದು ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮ ಯಾವುದೇ ಮುಲಾಜಿಲ್ಲದೆ ಹೇಳಿದ್ದಾರೆ. ಪುಣೆ ವಿರುದ್ಧ ತವರಿನಂಗಳದಲ್ಲೇ ಅನುಭವಿಸಿದ ಸೋಲು ಅವರನ್ನು ಹತಾಶೆಗೆ ತಳ್ಳಿದೆ.

Advertisement

“ಈ ಟ್ರ್ಯಾಕ್‌ನಲ್ಲಿ 160 ರನ್‌ ಎನ್ನುವುದು ಹಿಂದಿಕ್ಕಲಾಗದ ಮೊತ್ತವಾಗಿರಲಿಲ್ಲ. ಆದರೆ ನಾವು ಈ ಐಪಿಎಲ್‌ನಲ್ಲೇ ಅತ್ಯಂತ ಕಳಪೆ ಹಾಗೂ ಕೆಟ್ಟ ಬ್ಯಾಟಿಂಗ್‌ ನಡೆಸಿದೆವು. ಒಂದು ಉತ್ತಮ ಜತೆಯಾಟವನ್ನು ನಡೆಸಲಿಕ್ಕೂ ನಮ್ಮಿಂದ ಸಾಧ್ಯವಾಗಲಿಲ್ಲ. ಪುಣೆ ಶಿಸ್ತಿನ ದಾಳಿ ಸಂಘಟಿಸಿ ನಮ್ಮನ್ನು ನಿಂಯತ್ರಿಸಿತು. ಅಷ್ಟೇ ಅಲ್ಲ, ಮಿಡ್ಲ್ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಕೀಳುತ್ತ ಹೋಯಿತು…’ ಎಂದರು.

“ಇಂಥ ಪರಿಸ್ಥಿತಿಯಲ್ಲಿ ಹೊಡೆತಗಳ ಆಯ್ಕೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಪರಿಸ್ಥಿತಿ ಹಾಗೂ ವಾತಾವರಣವನ್ನು ಗಮನಿಸಿ ಆಡಬೇಕಾಗುತ್ತದೆ. ಆದರೆ ನಾವು ಇದ್ಯಾವುದನ್ನೂ ಮಾಡಲಿಲ್ಲ. ಅಂದಮಾತ್ರಕ್ಕೆ ಈ ಸೋಲಿನೊಂದಿಗೆ ಜಗತ್ತೇನೂ ಕೊನೆಯಾಗಿಲ್ಲ. ಬೆಂಗಳೂರಿನಲ್ಲಿ ನಾವು ಇನ್ನೂ ಒಂದು ಪಂದ್ಯವನ್ನು ಆಡಲಿಕ್ಕಿದೆ. ತಪ್ಪುಗಳನ್ನು ತಿದ್ದಿಕೊಂಡು ಮುಂದುವರಿಯುವ ವಿಶ್ವಾಸವಿದೆ…’ ಎಂಬುದಾಗಿ ಕೇವಲ ಒಂದು ರನ್‌ ಮಾಡಿ ಔಟಾದ ರೋಹಿತ್‌ ಶರ್ಮ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next