Advertisement

ಹತ್ತೂರಲ್ಲಿ ಸಲ್ಲುವುದು ಪುತ್ತೂರು ತಾರಣ್ಣನ ಗಣಪತಿಗೆ ಪೂಜೆ

12:00 PM Sep 02, 2019 | sudhir |

ಪುತ್ತೂರು : ಗಣಪನ ವಿಗ್ರಹ ರಚನೆಯಲ್ಲಿ ಪುತ್ತೂರಿನಾದ್ಯಂತ ಚಾಲ್ತಿಯಲ್ಲಿರುವ ವ್ಯಕ್ತಿ ತಾರಾನಾಥ ಆಚಾರ್ಯ.

Advertisement

ಅವರೊಬ್ಬ ಅದ್ಭುತ ಕಲಾವಿದ. ಸುಮಾರು 28 ವರ್ಷಗಳಿಂದ ಕಲಾವೃತ್ತಿಯಲ್ಲಿರುವ ಅವರು 22 ವರ್ಷಗಳ ಹಿಂದೆ ಗಣಪತಿಯ ವಿಗ್ರಹ ನಿರ್ಮಿಸುವ ‘ಮನೋಜ್ಞ’ ಎನ್ನುವ ಆರ್ಟ್‌ ಮತ್ತು ಕ್ರಾಫ್ಟ್ ಕಲಾ ಶಾಲೆಯನ್ನು ತೆರೆದು ಆ ಮೂಲಕ ಸ್ವೋದ್ಯೋಗ ಆರಂಭಿಸಿದ್ದಾರೆ.

ಪುತ್ತೂರು ಸಹಿತ ಹತ್ತೂರಿನ ಚೌತಿಯ ಸಂಭ್ರಮಕ್ಕೆ ಪರ್ಲಡ್ಕದ ತಾರಣ್ಣನ ಗಣಪತಿಯೇ ಮೆರುಗು ನೀಡುತ್ತಿದೆ. ಪುಟಾಣಿ ಗಣಪನಿಂದ ಹಿಡಿದು ಬೃಹತ್‌ ಗಾತ್ರದ ಗಣಪತಿಯನ್ನು ನಿರ್ಮಿಸಿ ಹಲವು ಕಡೆಗೆ ನೀಡುವ ಈ ಕಲಾವಿದನಿಗೆ ವಿಗ್ರಹ ತಯಾರಿಕೆಯೇ ಬದುಕು.

ಹಿರಿಯರಿಂದ ರಕ್ತಗತವಾದ ಕಲೆಯನ್ನೇ ಮುಂದು ವರಿಸಿಕೊಂಡು ಹೋಗುತ್ತಿರುವ ಇವರಿಗೆ ಅನೇಕ ದೇವಾಲಯಗಳಲ್ಲಿಯೂ ಸಮ್ಮಾನಗಳಾಗಿವೆ.

2007ರಲ್ಲಿ ನಮ್ಮ ಟಿವಿ ನಡೆಸುವ ಅಂದದ ಗಣಪ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಗುರುಗಳಾದ ಕಲ್ಲಾರೆಯ ಕರುಣಾಕರ ಪೈ ಅವರ ಗರಡಿಯಲ್ಲಿ ಪಳಗಿದ್ದರಿಂದಲೇ ತಾವಿಂದು ಹತ್ತೂರಿಗೆ ಗಣಪತಿ ವಿಗ್ರಹಗಳನ್ನು ಸಿದ್ಧಪಡಿಸಿ ನೀಡುವಂತಾಗಿದೆ ಎಂದು ತಾರಾನಾಥ್‌ ಹೇಳುತ್ತಾರೆ.

Advertisement

ಗೆಳೆಯರ ಸಹಾಯ

ಮೂಲತಃ ಕೇರಳದ ಉಪ್ಪಳದವರಾದ ಅವರು ಪುತ್ತೂರಿಗೆ ಬಂದು 40 ವರ್ಷಗಳಾಗಿದೆ. ಪತ್ನಿ ರಜನಿ, ಮಕ್ಕಳಾದ ಮನೋಜ್ಞ ಮತ್ತು ದ್ವಿತಿ, ಗೆಳೆಯರಾದ ಹರೀಶ್‌ ಆಚಾರ್ಯ ಮತ್ತು ಅರುಣ್‌ ಅವರು ಬಣ್ಣ ಹಚ್ಚಿ ಅವರ ಮೃಣ್ಮಯ ಮೂರ್ತಿಗಳಿಗೆ ಇನ್ನಷ್ಟು ಮೆರುಗು ನೀಡುತ್ತಿದ್ದಾರೆ.

ಈ ಬಾರಿ 48 ವಿಗ್ರಹ

ಈ ಬಾರಿ 48 ಗಣಪತಿಯ ವಿಗ್ರಹಗಳನ್ನು ತಯಾರಿಸಿರುವ ತಾರಣ್ಣನ ಪುಟ್ಟ ಅಂಗಡಿಯಲ್ಲಿ ತಮ್ಮ 8ನೇ ತರಗತಿಯ ಮಗ ಮನೋಜ್ಞ ಸಿದ್ಧಪಡಿಸಿದ ಎರಡು ಪುಟಾಣಿ ಗಣಪತಿಗಳೂ ಇವೆ ಎನ್ನುವುದು ಅವರಿಗೆ ಹೆಮ್ಮೆ. ಪ್ರತಿ ವರ್ಷವೂ ಸಮೀಪದ ಆಶ್ರಮವೊಂದಕ್ಕೆ ಉಚಿತವಾಗಿ ಗಣಪತಿಯ ಮೂರ್ತಿಯನ್ನು ನೀಡುವ ಅವರ ಗುರುಗಳ ಅಭ್ಯಾಸ ಉಳಿಸಿಕೊಂಡು ಬಂದಿದ್ದಾರೆ.

ಇಲ್ಲೆಲ್ಲ ತಾರಣ್ಣನ ಗಣಪ!

ಪುತ್ತೂರಿನ ವಿವೇಕಾನಂದ ಕಾಲೇಜು, ಸಂತ ಫಿಲೋಮಿನಾ ಕಾಲೇಜು, ಅಡೂರು ದೇಗುಲ, ಕಾವು ದೇಗುಲ, ಜಾಲ್ಸೂರು, ಸುಳ್ಯ, ಕಾವೇರಿಕಟ್ಟೆ , ರಾಘವೇಂದ್ರ ಮಠ ಸೇರಿದಂತೆ ನೆರೆಯ ರಾಜ್ಯದಿಂದಲೂ ಇವರ ಗಣಪನಿಗೆ ಭಾರೀ ಬೇಡಿಕೆ ಇದೆ. ಅವರ ಶಿಷ್ಯ ಸಮಾನರು ಗಣಪತಿ ಬಪ್ಪ ಮೋರೆಯಾ ಎನ್ನುವ ಸಂಘವನ್ನು ಕಟ್ಟಿಕೊಂಡು ಆ ಮೂಲಕವೂ ಚೌತಿ ಸಂಭ್ರಮವನ್ನು ಅಚರಿಸುತ್ತಿರುವುದು ಕಲಾಕಾರ ನೊಬ್ಬನ ಕಲೆಗೆ ಸಂದ ನಿಜವಾದ ಗೌರವ.

28 ವರ್ಷಗಳಿಂದ ಗಣಪತಿ ವಿಗ್ರಹ ನಿರ್ಮಾಣದಲ್ಲಿ ಸಿದ್ಧಹಸ್ತರಾಗಿದ್ದಾರೆ ತಾರಾನಾಥ ಆಚಾರ್ಯ.

Advertisement

Udayavani is now on Telegram. Click here to join our channel and stay updated with the latest news.

Next