Advertisement

ಹೊಳೆ ಗಂಗವ್ವನಿಗೆ ಪೂಜೆ

09:19 AM Jul 26, 2020 | Suhan S |

ರಾಣೆಬೆನ್ನೂರು: ಬಹು ಸಂಸ್ಕೃತಿ ರಾಷ್ಟ್ರವಾದ ಭಾರತದಲ್ಲಿ ಹಬ್ಬಗಳು ಸಾಲು ಸಾಲಾಗೇ ಬರುತ್ತವೆ. ಪ್ರತಿಯೊಂದು ಹಬ್ಬಕ್ಕೂ ತನ್ನದೇ ಆದ ವಿಶೇಷತೆ ಇದೆ. ನಾಗರ ಪಂಚಮಿ ಹಬ್ಬ ಅಣ್ಣ-ತಂಗಿಯರ ಹಬ್ಬ. ತಂಗಿ ತವರು ಮನೆಗೆ ಬಂದು ಅಣ್ಣನನ್ನು ಹರಸುವ ಹಬ್ಬ. ಯಾವ ಹಬ್ಬಕ್ಕೂ ಕರೆಸದಿದ್ದರೂ ನಾಗರ ಪಂಚಮಿಗೆ ತವರು ಮನೆಗೆ ಕರೆಸಿ ಕೈಲಾದ ಉಡುಗೊರೆ ನೀಡುತ್ತಾರೆ.

Advertisement

ಆದರೆ ಕೋವಿಡ್ ಭಯದಿಂದ ಈ ಬಾರಿಯ ಪಂಚಮಿಯನ್ನು ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೇ ಆಚರಿಸಿಕೊಂಡಿದ್ದು ಕಂಡುಬಂದಿತು. ನಾಗರ ಪಂಚಮಿ ಹಬ್ಬ ಬಂತೆಂದರೆ ಸಾಕು ಮಹಿಳೆಯರಿಗೆ ಎಲ್ಲಿಲ್ಲದ ಸಡಗರ-ಸಂಭ್ರಮ. ಆದರೆ ಶನಿವಾರ ಪಂಚಮಿ ಹಬ್ಬದಲ್ಲಿ ಈ ಸಂಭ್ರಮ ಕಾಣಲಿಲ್ಲ.

ಹೊಳೆ ಪೂಜೆ: ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಪಂಚಮಿ ಹಬ್ಬದ ಮೂರನೆಯ ದಿನವಾದ ಶನಿವಾರ ಹೊಳೆ ಗಂಗವ್ವನ ಪೂಜೆ ಸಲ್ಲಿಸಲಾಯಿತು. ಇನ್ನು ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್‌ ಗಳಿಗೆ ಹಸಿರು ಸೀರೆ ಉಡಿಸಿ, ಹಂಗನೂಲು ಹಾಕಿ, ಹೋಳಿಗೆ ಎಡೆ ಹಿಡಿದು ವಿಶೇಷ ಪೂಜೆ ಸಲ್ಲಿಸಿದರು. ದೇವರಿಗೆ ಏರಿಸಿದ ಸೀರೆಯನ್ನು ತವರು ಮನೆಗೆ ಬಂದ ಮಗಳು ಉಟ್ಟುಕೊಂಡು, ಉಡಕ್ಕಿ ಹಾಕಿಸಿಕೊಂಡು ತವರು ಮನೆಗೆ ಹರಿಸಿ ಗಂಡನ ಮನೆಗೆ ಹೋಗುವ ವಾಡಿಕೆ ಇದೆ. ಅದು ಈ ಹಬ್ಬದಲ್ಲಿ ನಡೆಯದೆ ಸೊಸೆಯಂದಿರೇ ಹೊಳೆ, ಬೋರ್‌ವೆಲ್‌, ನಳಗಳ ನೀರಿನಲ್ಲಿ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next