Advertisement

ಕುರಿಗಳ ಪೂಜಿಸಿ ಬೆಳಕಿನ ಹಬ್ಬ ಆಚರಣೆ

12:48 PM Oct 30, 2019 | Team Udayavani |

ಚಿಕ್ಕೋಡಿ: ತಾಲೂಕಿನ ಉಮರಾಣಿ ಗ್ರಾಮದಲ್ಲಿ ಕುರುಬ ಸಮುದಾಯದವರು ತಮ್ಮ ಕುರಿಗಳನ್ನು ದೀಪಾವಳಿ ಹಬ್ಬದ ನಿಮಿತ್ತ ಪೂಜೆ ಮಾಡಿ ಆರತಿ ಬೆಳಗಿ ನಾಡಿನಲ್ಲಿರುವ ರೈತರು, ಒಕ್ಕಲಿಗರು ಹಾಗೂ ಕುರಿಗಾರರನ್ನು ಆ ದೇವರು ಕಾಪಾಡಲೆಂದು ಪ್ರಾರ್ಥಿಸಿಕೊಂಡರು.

Advertisement

ಈ ಸಂದರ್ಭದಲ್ಲಿ ಮುಖಂಡ ಮಾಯಪ್ಪಾ ಮಗದುಮ್ಮ ಮಾತನಾಡಿ,ಕುರಿಗಾರರ ಕಾಯಕ ಆದಿ ಅನಾದಿ ಕಾಲದಿಂದ ಬಂದಿದ್ದು, ಕುರಿಗಳನ್ನು ಅನೇಕ ದೇವತಾ ಪುರುಷರು ಕೂಡಾ ಸಾಕಿ ಸಲುಹಿದ್ದಾರೆ. ಶಿವ- ಪಾರ್ವತಿ ಕುರಿ ಸಾಕಾಣಿಕೆ ಮಾಡಿದ್ದು, ಪುರಾಣದಲ್ಲಿ ಉಲ್ಲೇಖವಿದ್ದು, ದೇವರ ಕೆಲಸವನ್ನು ಇವತ್ತು ಕುರುಬ ಸಮುದಾಯದವರು ಮುಂದುವರಿಸಿಕೊಂಡು ಬರುತ್ತಿರುವುದು ಸಂತಸದ ಸಂಗತಿ ಎಂದರು.

ನಂತರ ಮಾತನಾಡಿದ ಗ್ರಾಪಂ ಸದಸ್ಯ ಲಕ್ಷ್ಮಣ ಪೂಜೇರಿ ದೀಪಾವಳಿ ಹಬ್ಬದ ನಿಮಿತ್ತ ನಾಡಿನ ರೈತ ಸಮುದಾಯ ಹಾಗೂ ಕುರುಬ ಸಮುದಾಯಕ್ಕೆ ದೇವರ ಕೃಪೆ ಇರಲೆಂದು ಲಕ್ಷ್ಮೀ ಸ್ವರೂಪದ ಕುರಿಗಳನ್ನು ಪೂಜೆ ಮಾಡಿಕೊಂಡು ಬರಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷಧನಪಾಲ ಬೀಮನಾಯ್ಕ, ಯುವ ಮುಖಂಡ ರಾಜೇಶ ಜಿಡ್ಡಿಮನಿ, ಮುರಿಗೆಪ್ಪಾ ಅಡಿಸೇರಿ, ಅರುಣ ಕಾಳಿಶಿಂಗೆ, ನಾಗಪ್ಪಾ ಪೂಜೇರಿ, ಗಜಾನನಪಾಟೀಲ, ಗುರುಪಾದ ಜಿಡ್ಡಿಮನಿ, ಸಂಜು ಜಿಡ್ಡಿಮನಿ, ಆನಂದ ಸಂಭಾಜಿ, ಶಶಿಕಾಂತ ಸಂಭಾಜಿ, ಮಾದೇವ ಜಿಡ್ಡಿಮನಿ, ಸಿದ್ರಾಮ ಮಗದುಮ್ಮ. ಸತ್ಯಪ್ಪಾ ಮಗದುಮ್‌ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next