Advertisement

ಸಂಸ್ಮರಣೆ: ಕುಂಭಳೇಶ್ವರ ಸ್ವಾಮಿಗೆ ಪೂಜೆ

07:26 PM Jan 22, 2021 | Team Udayavani |

ಹಾಸನ/ರಾಮನಾಥಪುರ: ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗಳ 2ನೇ ವರ್ಷದ ಸಂಸ್ಮರಣೆಯನ್ನು ದಾಸೋಹ ದಿನವಾಗಿ ಮಾಡಬೇಕೆಂದು ನಿರ್ಧರಿಸಿದ ಹಿನ್ನೆಲೆಯಲ್ಲಿ ಅರಕಲಗೂಡು ತಾಲೂಕು ಕೊಣನೂರಿನ ಕುಂಭಳೇಶ್ವರ ದೇವಾಲಯದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾವು ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿತು.

Advertisement

ಶ್ರೀಗಳ ಪುಣ್ಯ ಸಂಸ್ಮರಣೋತ್ಸವದ ಅಂಗವಾಗಿ ಕುಂಭಳೇಶ್ವರ ದೇವಾಲಯ ಬೀದಿ, ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕಾವೇರಿ ನದಿಯಿಂದ ಮಹಿಳೆಯರು ಪಂಚಗಂಗೆ ತಂದು ಸ್ವಾಮಿಗೆ ರುದ್ರಾಭಿಷೇಕ, ವಿಶೇಷ ಪೂಜಾ ಕೈಂಕರ್ಯ ನೆರವೇರಿಸಿ ಶ್ರೀಗಳಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

ವೀರಶೈವ ಮಹಾಸಭಾದ ಕೊಣನೂರು ಹೋಬಳಿ ಅಧ್ಯಕ್ಷ ಸುಂದ್ರೇಶ್‌ ಮಾತನಾಡಿ, ಶ್ರೀಗಳು ಬದುಕಿದ್ದ 111 ವರ್ಷಗಳೂ ಸಾಧನೆಗಳಾಗಿವೆ. ಅವರ ಆದರ್ಶ ಗಳನ್ನು ಸಮಾಜದ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.

ಮಹಾಸಭಾ ಕಾರ್ಯದರ್ಶಿ ಕೆ.ಎಸ್‌. ಲೋಕೇಶ್‌ ಮಾತನಾಡಿ, ಶ್ರೀಗಳ ಸಂಸ್ಮರಣೋತ್ಸವವನ್ನು ಸರ್ಕಾರವೇ ದಾಸೋಹ ದಿನವಾಗಿ ಆಚರಿಸಬೇಕು ಎಂದು ಒತ್ತಾಯ ಮಾಡಿದರು.

ಇದನ್ನೂ ಓದಿ: ಮಾಸಾಂತ್ಯಕ್ಕೆ 12 ಕೆರೆ ಭರ್ತಿ: ನಿರಂಜನ್‌

Advertisement

ನೌಕರರ ಸಂಘದ ಅಧ್ಯಕ್ಷ ಬೆಟ್ಟದಹಳ್ಳಿ ಮಹೇಶ್‌, ಕಾರ್ಯದರ್ಶಿ ನಿರ್ವಾಣಪ್ಪ ಸಿದ್ಧಗಂಗಾ ಶ್ರೀಗಳಿಗೆ ಶೀಘ್ರದಲ್ಲಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಆಗ್ರಹಿಸಿದರು. ಮಹಾಸಭಾದ ಹೋಬಳಿ ಉಪಾಧ್ಯಕ್ಷ ವಿಶ್ವನಾಥ್‌, ಖಜಾಂಚಿ ನಾಗೇಂದ್ರ, ಕಾವೇರಿ ಸ್ವತ್ಛತ ಆಂದೋಲನಾ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಂ.ಎನ್‌. ಕುಮಾರಸ್ವಾಮಿ, ಗುತ್ತಿಗೆದಾರ ಕೆ.ಎಸ್‌.ನಾಗರಾಜ್‌, ಸಮಾಜದ ಮುಖಂಡರಾದ ಸೀಬಳ್ಳಿ ಕುಮಾರಸ್ವಾಮಿ, ಮರಿಶೆಟ್ಟಿ, ಮಂಜಯ್ಯ, ಶಿವಲಿಂಗಪ್ಪ, ನಿಂಗಣ್ಣ ಮತ್ತಿತರರು  ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next