Advertisement

ತಾಜ್‌ಮಹಲ್ ನಲ್ಲಿ ಪೂಜೆ: ಶಿವಸೇನೆ

09:19 AM Jul 22, 2019 | Team Udayavani |

ಆಗ್ರ: ತಾಜ್‌ಮಹಲ್ ನಲ್ಲಿ ಪೂಜೆ ಸಲ್ಲಿಸುವುದಾಗಿ ಶಿವಸೇನೆ ಬೆದರಿಕೆ ಹಾಕಿದೆ. ಹೀಗಾಗಿ, ಸೂಕ್ತ ಭದ್ರತೆ ಒದಗಿಸುವಂತೆ ಭಾರತೀಯ ಪುರಾತತ್ವ ಇಲಾಖೆ ಆಗ್ರಾ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಸಮ್ಮತಿಯೂ ವ್ಯಕ್ತವಾಗಿದೆ.

Advertisement

ಜು.17ರಂದು ತಾಜ್‌ಮಲ್ ನಲ್ಲಿ ಆರತಿ ಬೆಳಗಿ ಪೂಜೆ ಮಾಡುವುದಾಗಿ ಶಿವಸೇನೆ ಘೋಷಿಸಿತ್ತು. ಸಾಧ್ಯವಿದ್ದರೆ ಜಿಲ್ಲಾಡಳಿತ ಮತ್ತು ಪೊಲೀಸರು ತಡೆಯಲಿ ಎಂದು ಆಗ್ರಾದ ಶಿವಸೇನೆ ಮುಖಂಡ ವೀನು ಲಾವಣ್ಯ ಘೋಷಿಸಿದ್ದರು.

ತಾಜ್‌ಮಹಲ್ ನಿರ್ಮಾಣವಾಗುವುದಕ್ಕೆ ಮೊದಲು ಅಲ್ಲಿ ದೇಗುಲವಿತ್ತು. ಅಲ್ಲಿ ಆರತಿ ಬೆಳಗುವುದಾಗಿ ಶಿವಸೇನೆ ಎಚ್ಚರಿಸಿತ್ತು. 1958ರ ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ತಾಣ ಕಾಯ್ದೆ ಪ್ರಕಾರ ಸಂರಕ್ಷಿತ ತಾಣಗಳಲ್ಲಿ ಯಾವುದೇ ಧಾರ್ಮಿಕ ವಿಧಿವಿಧಾನ ನಡೆಸುವುದು ಕಾನೂನ ಬಾಹಿರ.

Advertisement

Udayavani is now on Telegram. Click here to join our channel and stay updated with the latest news.

Next