Advertisement

ಮಂಗಳ ಗ್ರಹದಲ್ಲಿ ಯುಎಇನಿಂದ ನಗರ ನಿರ್ಮಾಣ

03:45 AM Feb 17, 2017 | Team Udayavani |

ದುಬೈ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳ ಗ್ರಹಕ್ಕೆ ನೌಕೆ ಹಾರಿಬಿಟ್ಟದ್ದೇ ತಡ, ಅಲ್ಲಿಗೆ ತೆರಳಿ ಭೂಮಿಗೆ ಪರ್ಯಾಯ ವ್ಯವಸ್ಥೆಯಾಗಿ ಜೀವನ ಸಾಗಿಸುವ ಬಗ್ಗೆ ಚರ್ಚೆಗಳು ಆರಂಭಗೊಂಡಿವೆ. ಆದರೆ ಬುರ್ಜ್‌ ಖಲೀಫಾದಂಥ ಗಗನಚುಂಬಿ ಕಟ್ಟಡಗಳನ್ನು ನಿರ್ಮಿಸಿದ ಸಂಯುಕ್ತ ಅರಬ್‌ ಗಣರಾಜ್ಯ (ಯುಎಇ) ಮುಂದಿನ 100 ವರ್ಷಗಳಲ್ಲಿ ಅಲ್ಲೊಂದು ಸುಂದರ ನಗರ ನಿರ್ಮಾಣ ಮಾಡಲು ಮುಂದಾಗಿದೆ. 

Advertisement

ಇದರ ಜತೆಗೆ ಅಲ್ಲಿ ನೆಲೆಸಲು ಬಯಸುವವರನ್ನು ಕರೆದುಕೊಂಡು ಹೋಗುವ ವ್ಯವಸ್ಥೆಯನ್ನು ಮಾಡಲಿದೆಯಂತೆ. ಅದಕ್ಕಾಗಿ ಅಂತಾರಾಷ್ಟ್ರೀಯ ಮಟ್ಟದ ವೈಜ್ಞಾನಿಕ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳ ಜತೆ ಕೈಜೋಡಿಸಲಾಗುತ್ತದೆ. ಅಂದ ಹಾಗೆ ಈ ಬಗ್ಗೆ ಘೋಷಣೆಗಳನ್ನು ಮಾಡಿದ್ದು  ಯುಎಇನ ಪ್ರಧಾನ‌ಮಂತ್ರಿ ಶೇಕ್‌ ಮೊಹಮ್ಮದ್‌ ಬಿನ್‌ ರಶೀದ್‌ ಅಲ್‌ ಮಖೂ¤ಮ್‌ ಮತ್ತು ಅಬುಧಾಬಿಯ ರಾಜಕುಮಾರ ಶೇಕ್‌ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌. ಭೂಮಿಯಲ್ಲಿ ಇರುವಂತೆಯೇ ಗುಣಮಟ್ಟದ ರಸ್ತೆಗಳು, ಶೈಕ್ಷಣಿಕ ಸಂಸ್ಥೆಗಳನ್ನು ನಿರ್ಮಿಸಲಾಗುತ್ತದೆಂದು ಅವರು ಹೇಳಿದ್ದಾರೆ. ಎಮಿರೇಟ್ಸ್‌ನ ವೈಜ್ಞಾನಿಕ ಸಮೂಹ ಅಂತಾರಾಷ್ಟ್ರೀಯ ಸಂಘಟನೆಗಳ ಜತೆಗೂಡಿ ಮಾನವ ಜೀವನಕ್ಕೆ ಬೇಕಾಗಿರುವ ವ್ಯವಸ್ಥೆ, ಸಾರಿಗೆ ಮತ್ತು ಇತರ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next