Advertisement

World’s Top Scientists List: ವಿಜಯಪುರ ಮೂವರು ಸಂಶೋಧಕರು ಆಯ್ಕೆ

07:38 PM Oct 07, 2023 | Shreeram Nayak |

ವಿಜಯಪುರ : 2023 ನೇ ವರ್ಷದ ವಿಶ್ವದ ಉನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ವಿಜಯಪುರದ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಮೂವರು ಸಂಶೋಧಕರನ್ನು ಆಯ್ಕೆ ಮಾಡಲಾಗಿದೆ.

Advertisement

ವಿಜಯಪುರದ ಬಿ. ಎಲ್. ಡಿ. ಇ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಡಾ. ಕುಸಾಲ ದಾಸ ಹಾಗೂ ಡಾ. ರಘು ಎ. ವಿ. ಅಇವರಿಗೆ ಔಷಧ ವಿಜ್ಞಾನ, ಶರೀರ ಶಾಸ್ತ್ರ ಹಾಗೂ ಪಾಲಿಮರ್ ಕ್ಷೇತ್ರದಲ್ಲಿನ ಸಂಶೋಧನೆಗಾಗಿ 2023 ನೇ ವರ್ಷದ ವಿಶ್ವದ ಉನ್ನತ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಲಭಿಸಿದೆ.

ಅಮೇರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ನೆದರಲ್ಯಾಂಡಿನ ಎಲ್ಸವಿಯರ್ ಪ್ರಕಾಶನ ಸಂಸ್ಥೆ ಪ್ರತಿ ವರ್ಷ ಸೈಟೇಷನ್ ಇಂಡೆಕ್ಸ್ ಆಧಾರದ ಮೇಲೆ ಒಂದು ಲಕ್ಷಕ್ಕೂ ಹೆಚ್ಚು ವಿಜ್ಞಾನಿಗಳನ್ನು ಗುರುತಿಸಿ, ಶ್ರೇಷ್ಠ ಶೇ.2 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಕಲ್ಪಿಸುತ್ತದೆ.

19 ಪೇಟೆಂಟ್ ಪಡೆದಿರುವ ಹಾಗೂ 21 ಸಂಶೋಧನಾ ಪ್ರಕಟನೆ ಪ್ರಕಟಿಸಿರುವ ಡಾ. ರಾಘವೇಂದ್ರ ಕುಲಕರ್ಣಿ ಅವರು ಸತತ 3 ನೇ ಬಾರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಪಾಲಿಮರ್ ಆಧಾರಿತ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 15ನೇ ಸ್ಥಾನದಲ್ಲಿದ್ದು, ವಿಶ್ವದ 127ನೇ ಸ್ಥಾನದಲ್ಲಿದ್ದಾರೆ. ಪಡೆದಿದ್ದಾರೆ. ಸಂಶೋಧನೆಗಾಗಿ ರೂ. 97 ಲಕ್ಷ ಅನುದಾನ ಪಡೆದಿದ್ದಾರೆ.

ಡಾ. ಕುಸಾಲ ದಾಸ ಅವರು ಶರೀರ ಶಾಸ್ತ್ರ ವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 186ನೇ ಸ್ಥಾನದಲ್ಲಿದ್ದು, ವಿಶ್ವದಲ್ಲಿ 2407 ನೇ ಸ್ಥಾನ ಪಡೆದಿದ್ದಾರೆ. 135 ಸಂಶೋಧನಾ ಪ್ರಕಟಿಸಿರುವ ಇವರು, 2 ಪೇಟೆಂಟ್ ಪಡೆದಿದ್ದು, ಸಂಶೋಧನೆಗಾಗಿ 60 ಲಕ್ಷ ರೂ. ಅನುದಾನವನ್ನೂ ಪಡೆದುಕೊಂಡಿದ್ದಾರೆ.

Advertisement

ಡಾ. ರಘು ಎ.ವಿ. ಅವರು ಪಾಲಿಮರ್  ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಸಂಶೋಧನೆ ಮಾಡಿರುವ ಭಾರತದ ಸಂಶೋಧಕರಲ್ಲಿ 20 ನೇ ಸ್ಥಾನದಲ್ಲಿದ್ದು, ವಿಶ್ವದ 326 ನೇ ಸ್ಥಾನ ಪಡೆದಿದ್ದಾರೆ. 110 ಸಂಶೋಧನಾ ಪ್ರಕಟನೆ ರಚಿಸಿದ್ದು, ಸಂಶೋಧನೆಗಾಗಿ 25 ಲಕ್ಷ ಅನುದಾನ ಪಡೆದಿದ್ದಾರೆ. ಕರ್ನಾಟಕ ಸರಕಾರದ ಸರ್ ಸಿ.ವಿ. ರಾಮನ್ ಪ್ರಶಸ್ತಿಯೂ ಇವರ ಮುಡಿಗೇರಿದೆ.

ಬಿಎಲ್‍ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಮೂವರು ಹಿರಿಯ ಸಂಶೋಧಕರ ಸಾಧನೆಗೆ ಸಾಧನೆಗೆ ಬಿ.ಎಲ್.ಡಿ.ಇ. ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಸಚಿವ ಡಾ.ಎಂ.ಬಿ. ಪಾಟೀಲ, ಸಮಕುಲಾಧಿಪತಿ ಡಾ.ವೈ.ಎಂ. ಜಯರಾಜ, ಕುಲಪತಿ ಡಾ.ಆರ್.ಎಸ್.ಮುಧೋಳ ಹಾಗೂ ಅಡಳಿತ ಮಂಡಳಿ ಅಭಿನಂದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next