ಲಂಡನ್: ಆರ್ಥಿಕ, ಭೌಗೋಳಿಕ ಮತ್ತು ರಾಜಕೀಯ ಕಾರಣಗಳಿಂದ ಕಳೆದ ವರ್ಷ ವಿಶ್ವದ ಶ್ರೀಮಂತರು ತಮ್ಮ ಸಂಪತ್ತಿನಲ್ಲಿ ಒಟ್ಟಾರೆ 10 ಲಕ್ಷ ಕೋಟಿ ಡಾಲರ್ ಕಳೆದುಕೊಂಡಿದ್ದಾರೆ.
ಬುಧವಾರ ಪ್ರಕಟವಾದ ನೈಟ್ ಫ್ರಾಂಕ್ ಸಂಪತ್ತಿನ ವರದಿ ಪ್ರಕಾರ, ವಿಶ್ವದಲ್ಲಿ 2,18,000 ಮಂದಿಯು “ಅತೀ ಹೆಚ್ಚು ನಿವ್ವಳ ಮೌಲ್ಯದ ವ್ಯಕ್ತಿಗಳು’ ಅಂದರೆ ಅತಿ ಹೆಚ್ಚು ಸಂಪತ್ತುಳ್ಳ ವ್ಯಕ್ತಿಗಳ ಗುಂಪಿಗೆ ಸೇರುತ್ತಾರೆ. 2021ರಲ್ಲಿ ಇವರ ಬಳಿ 101.5 ಲಕ್ಷ ಕೋಟಿ ಡಾಲರ್ ಮೌಲ್ಯದ ಸಂಪತ್ತು ಇತ್ತು. 2022ರಲ್ಲಿ ಇದು 91.4 ಲಕ್ಷ ಕೋಟಿ ಡಾಲರ್‌ಗೆ ಕುಸಿದಿದೆ. ಈ ಮೂಲಕ ಒಟ್ಟಾರೆ ಸಂಪತ್ತಿನಲ್ಲಿ ಶೇ.10ರಷ್ಟು ಇಳಿಕೆ ಕಂಡಿದೆ.
“ಉಕ್ರೇನ್-ರಷ್ಯಾ ಯುದ್ಧದಿಂದ ವಿಶ್ವ ದಲ್ಲಿ ಉಂಟಾದ ಬಿಕ್ಕಟ್ಟು, ಯೂರೋಪಿ ಯನ್ ರಾಷ್ಟ್ರಗಳಲ್ಲಿ ಇಂಧನ ಕೊರತೆ, ಹಲವು ದೇಶಗಳಲ್ಲಿ ಹಣದುಬ್ಬರ, ಜಾಗತಿಕ ಆರ್ಥಿಕ ಹಿನ್ನಡೆ ಸೇರಿದಂತೆ ಅನೇಕ ಕಾರಣ ದಿಂದ ಕಳೆದ ವರ್ಷ ಸಂಪತ್ತಿನಲ್ಲಿ ಕುಸಿತ ವಾಗಿದೆ,’ ಎಂದು ನೈಟ್ ಫ್ರಾಂಕ್‌ನ ಮುಖ್ಯ ಸಂಪಾದಕ ಲಿಯಾಮ್ ಬೈಲಿ ತಿಳಿಸಿದ್ದಾರೆ.
ಖಂಡವಾರು ಸಂಪತ್ತು ಕುಸಿತ
ಯೂರೋಪ್ ಶೇ.17
ಒಶಾನಿಯಾ ಶೇ.11
ಅಮೆರಿಕ ಶೇ.10
ಮಧ್ಯ ಪ್ರಾಚ್ಯ ಶೇ.7
ಏಷ್ಯಾ ಶೇ.7
ಆಫ್ರಿಕಾ ಶೇ.5
ಜಾಗತಿಕ ಸರಾಸರಿ ಶೇ.10