Advertisement
ಜಗತ್ತಿನ ಪುಟ್ಟ ದ್ವೀಪ ರಾಷ್ಟ್ರ ಥೈಲ್ಯಾಂಡ್ ಪ್ರಕೃತಿದತ್ತವಾದ ರಮಣೀಯ ಪ್ರವಾಸಿ ತಾಣಗಳನ್ನು ಹೊಂದಿದೆ. ಈ ದೇಶ ಮುನ್ನಡೆಯುತ್ತಿರುವುದು, ಇಲ್ಲಿನ ಜನರು ಜೀವನ ನಡೆಸುತ್ತಿರುವುದು ಪ್ರವಾಸೋದ್ಯಮದಿಂದಲೇ ಎಂಬುದು ಇಲ್ಲಿನ ಅಚ್ಚರಿಯ ವಿಚಾರ. ಹೀಗಾಗಿ ಇಲ್ಲಿ ಪ್ರವಾಸಿಗರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ವಿಮಾನ ನಿಲ್ದಾಣ, ಅಂಗಡಿ ಮಳಿಗೆಗಳಲ್ಲಿ ಪ್ರವಾಸಿಗರಿಗೆ ಕೈಮುಗಿದು ಸ್ವಾಗತಿಸಲಾಗುತ್ತದೆ ಮತ್ತು ಅದೇ ರೀತಿ ಬೀಳ್ಕೊಡಲಾಗುತ್ತದೆ.
Related Articles
Advertisement
ಕನ್ನಡಿಗರ ಹೃದಯ ಶ್ರೀಮಂತಿಕೆಗೆ ಇಲ್ಲಿನ ಜನ ಗೌರವ ನೀಡುತ್ತಾರೆ. ಕನ್ನಡ ನಾಡುನುಡಿ, ನಿತ್ಯಹರಿದ್ವರ್ಣ ಕಾಡುಗಳು, ಗಂಧದ ಮರ, ರಾಜಮಹಾರಾಜರ ಇತಿಹಾಸ, ಶಿಲ್ಪಕಲೆ, 8 ಜ್ಞಾನಪೀಠ ಪ್ರಶಸ್ತಿ ಪಡೆದ ಕರ್ನಾಟಕ ರಾಜ್ಯದ ಬಗ್ಗೆ ಇಲ್ಲಿನ ಜನರು ಮೆಚ್ಚುಗೆ ವ್ಯಕ್ತಪಡಿಸುವುದು ವಿಶೇಷ.
ಅತ್ಯಂತ ಸುಸಂಸ್ಕೃತ, ಸರಳ ಜೀವನ ನಡೆಸುವ ಇಲ್ಲಿನ ಜನರು, ಕನ್ನಡಿಗರೊಂದಿಗೆ ಸಹೋದರತ್ವ ಭಾವನೆಯಿಂದ ಬೆರೆತುಕೊಳ್ಳುತ್ತಾರೆ. ಹಬ್ಬಗಳಲ್ಲಿಯೂ ಸಹಭಾಗಿಯಾಗುತ್ತಾರೆ. ದೇವರು, ಪೂಜೆ, ಪುನಸ್ಕಾರಗಳನ್ನು ಗೌರವಿಸುತ್ತಾರೆ.
ಚಿಯಾಂಗ್ ಮಾಯಿ
ಥೈಲ್ಯಾಂಡ್‌ನಲ್ಲಿ ಪ್ರಸಿದ್ಧ ಪ್ರವಾಸಿ ತಾಣ. ಇದು ಥೈಲ್ಯಾಂಡ್‌ನ ಅತ್ಯಂತ ದೊಡ್ಡ ಮತ್ತು ಸುಂದರವಾದ ನಗರ. ಇಲ್ಲಿ ಅತಿ ಹೆಚ್ಚು ಪರ್ವತಗಳಿವೆ. ಬ್ಯಾಂಕಾಂಕ್‌ನಿಂದ ಸುಮಾರು 700 ಕಿ.ಮೀ. ದೂರದಲ್ಲಿದೆ. ಇಲ್ಲಿ ಅತ್ಯುದ್ಭುತ ಗೋಡೆಗಳು, ಸ್ಮಾರಕ, ಪ್ರತಿಮೆಗಳು ಕಾಣಸಿಗುತ್ತವೆ. ಹೆಚ್ಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ನಡೆಯುವ ತಾಣವಾಗಿದೆ.
ಚಿಯಾಂಗ್ ರೈ
ಉತ್ತರ ಥೈಲ್ಯಾಂಡ್ ಪರ್ವತಗಳ ನಡುವೆ ಇರುವ ಚಿಯಾಂಗ್ ರೈ ಆಕರ್ಷಕ ತಾಣ. ಇಲ್ಲಿನ ವಿಶಿಷ್ಟ ವಾಸ್ತುಶಿಲ್ಪ, ಸುಂದರ ದೃಶ್ಯಗಳು, ಪ್ರಶಾಂತ, ರೋಮಾಂಚನಕಾರಿ ಸ್ಥಳಗಳು ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇಲ್ಲಿರುವ ಚಿಯಾಂಗ್ ರಾಯ್ ಕ್ಲಾಕ್ ಟವರ್, ಭವ್ಯವಾದ 9 ಶ್ರೇಣಿಯ ವಾಟ್ ಹುವಾಯಿ ಪಿಯಾ ಕುಂಗ್ ದೇವಾಲಯ ರಚನೆ ಅತ್ಯದ್ಭುತವಾಗಿದೆ. ಇಲ್ಲಿರುವ ಸಿಂಘಾ ಪಾರ್ಕ್, ಮೇ ಕೋಕ್ ನದಿ ಹಾಗೂ ಸುಂದರ ಶಿಖರಗಳಲ್ಲಿ ಒಂದಾಗಿರುವ ದೋಯಿ ಮಾಸಲೋಂಗ್ ಕೂಡ ಇಲ್ಲಿದೆ. ಇಲ್ಲಿ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ.
ವಾಟ್ ರೊಂಗ್ ಖುನ್
ವೈಟ್ ಟೆಂಪಲ್ ಎಂದು ಕರೆಯಲ್ಪಡುವ ವಾಟ್ ರೊಂಗ್ ಖುನ್ ಥೈಲ್ಯಾಂಡ್‌ನ ಅತ್ಯಂತ ಪ್ರಸಿದ್ಧ ಪ್ರವಾಸಿ ತಾಣ. ಇದು ಚಿಯಾಂಗ್ ರಾಯ್‌ನ ಹೆಗ್ಗುರುತು. ಬೌದ್ಧ ಮೌಲ್ಯಗಳನ್ನು ಒಳಗೊಂಡ ಇಲ್ಲಿ ಬೌದ್ಧ ಧರ್ಮದ ಶಿಕ್ಷಣ, ಬುದ್ಧನ ಬೋಧನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ. ದೇವಾಲಯದಲ್ಲಿ ಬಳಸಿರುವ ಗಾಜಿನ ಮೇಲೆ ಸೂರ್ಯನ ಬೆಳಕು ಬಿದ್ದಾಗ ಕಾಣುವ ದೃಶ್ಯ ನಯನಮನೋಹರವಾಗಿರುತ್ತದೆ.
– ಲಕ್ಷ್ಮೀ, ಅಂಕಲಗಿಮಠ