Advertisement

World’s Most Powerful Passports: 82ನೇ ಸ್ಥಾನಕ್ಕೇರಿದ ಭಾರತ

11:15 PM Jul 24, 2024 | Team Udayavani |

ಹೊಸದಿಲ್ಲಿ: ವಿಶ್ವದ ಪ್ರಭಾವಿ ಪಾಸ್‌ಪೋರ್ಟ್‌ ರ್‍ಯಾಂಕಿಂಗ್‌ಗಳ ಪಟ್ಟಿ ಹೆನ್ಲ ಪಾಸ್‌ಪೋರ್ಟ್‌ ಸೂಚ್ಯಂಕ ಬಿಡುಗಡೆ ಯಾಗಿದೆ.

Advertisement

ಕಳೆದ ವರ್ಷ 85ನೇ ಸ್ಥಾನದ ಲ್ಲಿದ್ದ ಭಾರತ ಈ ಬಾರಿ 82ನೇ ಸ್ಥಾನಕ್ಕೇ ರಿದೆ. ಭಾರತದ ಪಾಸ್‌ಪೋರ್ಟ್‌ ಹೊಂದಿರುವ ವ್ಯಕ್ತಿ 58 ದೇಶಗಳಿಗೆ ವೀಸಾರಹಿತ ಪ್ರಯಾಣ ಮಾಡಬಹುದು.

ಐಎಟಿಎ (ಇಂಟರ್‌ನ್ಯಾಶನಲ್‌ ಏರ್‌ ಟ್ರಾನ್ಸ್‌ಪೊàರ್ಟ್‌ ಅಸೋಸಿಯೇ ಷನ್‌) ನೀಡಿದ ಮಾಹಿತಿ ಪ್ರಕಾರ ಈ ರ್‍ಯಾಂಕಿಂಗನ್ನು ನಿರ್ಧರಿಸಲಾಗುತ್ತದೆ. ಭಾರತದ ನೆರೆಯ ದೇಶ ಪಾಕಿಸ್ಥಾನ 100 ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ವಿಶ್ವದ ನಂ.1 ಪ್ರಭಾವಿ ಪಾಸ್‌ಪೋರ್ಟ್‌ ಸ್ಥಾನವನ್ನು ಸಿಂಗಾಪುರದ ಪಾಸ್‌ಪೋರ್ಟ್‌ ಪಡೆದಿದೆ. 2ನೇ ಸ್ಥಾನದಲ್ಲಿ ಫ್ರಾನ್ಸ್‌, ಇಟಲಿ, ಜರ್ಮನಿ, ಸ್ಪೇನ್‌, ಜಪಾನ್‌ ಇವೆ. 3ನೇ ಸ್ಥಾನದಲ್ಲಿ ಆಸ್ಟ್ರಿಯಾ, ಫಿನ್ಲಂಡ್‌, ಐರ್ಲೆಂಡ್‌, ಲಕ್ಸೆಮ್‌ಬರ್ಗ್‌, ನೆದರ್‌ಲ್ಯಾಂಡ್ಸ್‌, ದ.ಕೊರಿಯ, ಸ್ವೀಡನ್‌ ಇವೆ. ಅಮೆರಿಕ 8ನೇ ಸ್ಥಾನಕ್ಕೆ ಕುಸಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next