ಅಟೋಮ್ಯಾಟಿಕ್ ಲೇಸ್ ಶೂ : ಬೆಲೆ: 19 ಲಕ್ಷ ರೂ.
ಶೂ ತಯಾರಕ ಸಂಸ್ಥೆ ನೈಕಿ, ತನ್ನ ಸಂಗ್ರಹದಲ್ಲಿ ಹೊಸದೊಂದು ಮಾದರಿಯ, ವಿನೂತನ ಕಾನ್ಸೆಫ್ಟ್ ಶೂ ಒಂದನ್ನು ಹೊಂದಿದೆ. ಈ ಶೂನ ವಿನ್ಯಾಸ ಮತ್ತು
ತಾಂತ್ರಿಕತೆಗೆ ಪ್ರೇರಣೆ, ಒಂದು ಹಾಲಿವುಡ್ ಸಿನಿಮಾ. “ಬ್ಯಾಕ್ ಟು ದ ಫ್ಯೂಚರ್’ ಎನ್ನುವ ಸಿನಿಮಾದಲ್ಲಿ ನಾಯಕ, ಒಂದು ವಿಶೇಷ ಬಗೆಯ ಶೂ ಧರಿಸಿರುತ್ತಾನೆ. ಅದರ ವೈಶಿಷ್ಟ್ಯವೆಂದರೆ, ಲೇಸ್ ಕಟ್ಟಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಕಾಲನ್ನು ಶೂ ಒಳಗೆ ತೂರಿಸಿದರೆ ಸಾಕು, ಅದೇ ಸ್ವಯಂಚಾಲಿತವಾಗಿ ಲೇಸ್ ಕಟ್ಟುತ್ತದೆ. ಅದು ಕೂಡ ಕಾಲಿನ ಗಾತ್ರಕ್ಕೆ ಅನುಗುಣವಾಗಿ, ಹೆಚ್ಚು ಒತ್ತಡ ಬಾರದಂತೆ! ಅದೇ ತಂತ್ರಜ್ಞಾನವನ್ನು ನೈಕಿ ಸಂಸ್ಥೆ, ತನ್ನ “ಏರ್ ಮ್ಯಾಗ್ 2016′ ಎಂಬ ಮಾಡೆಲ್‌ನಲ್ಲಿ ಅಳವಡಿಸಿದೆ. ಈ ಶೂನಲ್ಲಿ, ಬ್ಯಾಟರಿ ಮತ್ತು ಮೋಟಾರ್ ಇದೆ. ಅದರ ಸಹಾಯದಿಂದಲೇ ಅಟೋಮ್ಯಾಟಿಕ್ ಲೇಸ್ ಕಟ್ಟುವ ಪ್ರಕ್ರಿಯೆ ಕಾರ್ಯಗತ ಗೊಳ್ಳುವುದು. ಇದರ ಮಾರಾಟದಿಂದ ಬರುವ ಹಣವನ್ನು, ಪಾರ್ಕಿನ್‌ಸನ್ ಕಾಯಿಲೆಯಿಂದ ಬಳಲುತ್ತಿರುವವರ ಸಹಾಯಾರ್ಥ ವಿನಿಯೋಗಿ ಸಲಿದೆ ಎಂದು ಸಂಸ್ಥೆ ತಿಳಿಸಿತ್ತು. ಶೂನ ಪ್ರಸ್ತುತ ಮಾರುಕಟ್ಟೆ ಬೆಲೆ 19 ಲಕ್ಷ. ಇದನ್ನು ಮಾರುಕಟ್ಟೆಗೆ ಬಿಡುಗಡೆಗೆ ಮುನ್ನ, ಪಾರ್ಕಿನ್ ಸನ್ ಸಹಾಯಾರ್ಥವಾಗಿ ಹರಾಜು ಕಾರ್ಯಕ್ರಮವನ್ನು ನೈಕಿ ಸಂಸ್ಥೆ ಹಮ್ಮಿಕೊಂಡಿತ್ತು. ಅಲ್ಲಿ ಬ್ರಿಟಿಷ್ ಹಾಡುಗಾರನೊಬ್ಬ 28 ಲಕ್ಷ ನೀಡಿ ಈ ಶೂ ಖರೀದಿಸಿದ್ದ.
Advertisement