Advertisement

ವಿಶ್ವದ ಅತಿ ಉದ್ದದ ಗಾಜಿನ ಸ್ಕೈವಾಕ್‌; ಅಭೂತಪೂರ್ವ ನೋಟ

01:28 AM Dec 28, 2022 | Team Udayavani |

ಜಗತ್ತಿನಲ್ಲೇ ಅತಿ ಉದ್ದದ ಗಾಜಿನ ಸ್ಕೈವಾಕ್‌ನಲ್ಲಿ ನಡೆಯುವ ಅದ್ಭುತ ಅವಕಾಶ ಭಾರತೀಯರಿಗೆ ಸದ್ಯದಲ್ಲೇ ಸಿಗಲಿದೆ. ಮಹಾರಾಷ್ಟ್ರದ ಅಮರಾವತಿಯ ಸಮೀಪದ ಗಿರಿಧಾಮ ಚಿಖಲ್‌ದಾರಾದಲ್ಲಿ ಬರೋಬ್ಬರಿ 407 ಮೀಟರ್‌ ಉದ್ದದ ಸ್ಕೈವಾಕ್‌ ನಿರ್ಮಾಣವಾಗುತ್ತಿದೆ. ಈಗಾಗಲೇ ಶೇ.70ರಷ್ಟು ಕಾಮಗಾರಿ ಮುಗಿದಿದೆ. ಇದು ಪ್ರಸ್ತುತ ಸ್ವಿಜರ್ಲೆಂಡ್‌ ಮತ್ತು ಚೀನದಲ್ಲಿರುವ ಸ್ಕೈವಾಕ್‌ಗಿಂತಲೂ ಉದ್ದವಾಗಿರಲಿದೆ.

Advertisement

ಚಿಖಲ್‌ದಾರಾ ಸ್ಕೈವಾಕ್‌ನ ಉದ್ದ- 407 ಮೀಟರ್‌
ಗ್ಲಾಸ್‌ ಡೆಕ್‌ನ ಉದ್ದ- 100 ಮೀಟರ್‌
ಈಗಾಗಲೇ ಪೂರ್ಣಗೊಂಡ ಕಾಮಗಾರಿ- ಶೇ.70
ಲೋಕಾರ್ಪಣೆ ಯಾವಾಗ?- 2023 ಜುಲೈ
ನಿರ್ಮಾಣ ವೆಚ್ಚ- 35 ಕೋಟಿ ರೂ.
ಸ್ವಿಜರ್ಲೆಂಡ್‌ನ‌ ಸ್ಕೈವಾಕ್‌ ಉದ್ದ- 397 ಮೀ.
ಚೀನಾದ ಸ್ಕೈವಾಕ್‌ ಉದ್ದ- 360 ಮೀ.

ಹಲವು ಪ್ರಥಮಗಳ ಕಿರೀಟ
ಜಗತ್ತಿನಲ್ಲೇ ಅತಿ ಉದ್ದನೆಯ ಸ್ಕೈವಾಕ್‌ ಹಾಗೂ ವಿಶ್ವದ ಮೊದಲ ಸಿಂಗಲ್‌-ಕೇಬಲ್‌ ರೋಪ್‌ ಸಸ್ಪೆನ್ಶನ್‌ ಸೇತುವೆ ಎಂಬ ಹೆಗ್ಗಳಿಕೆಯನ್ನು ಇದು ಗಳಿಸಲಿದೆ. ಈಗಾಗಲೇ ಚಿಖಲ್‌ದಾರಾ ಕಣಿವೆಯಲ್ಲಿ ಸ್ಕೈವಾಕ್‌ಗೆ ಅಗತ್ಯವಿರುವ ಕಂಬಗಳ ಅಳವಡಿಕೆ ಪೂರ್ಣಗೊಂಡಿದೆ. ಈ ವರ್ಷದ ಜನವರಿಯಲ್ಲಿ ಯೋಜನೆಗೆ ರಾಜ್ಯ ಅರಣ್ಯ ಇಲಾಖೆ ಅನುಮತಿ ಸಿಕ್ಕಿತ್ತು. ಪರಿಸರ ಇಲಾಖೆ ಅನುಮತಿ ಸಿಗುವುದು ಬಾಕಿಯಿದೆ ಎಂದು ಸಿಡ್ಕೊà ಕಾರ್ಯಕಾರಿ ಎಂಜಿನಿಯರ್‌ ದೇವೇಂದ್ರ ಜಮ್ನಿಕರ್‌ ತಿಳಿಸಿದ್ದಾರೆ.

ಅಭೂತಪೂರ್ವ ನೋಟ
ಸ್ಕೈವಾಕ್‌ನ ಮಧ್ಯಭಾಗದಲ್ಲಿ 100 ಮೀ. ಉದ್ದದ ಗಾಜಿನ ಅಟ್ಟವನ್ನು ನಿರ್ಮಿಸಲಾಗುತ್ತದೆ. ಈ ಸ್ಕೈವಾಕ್‌  ಹುಲಿ ರಕ್ಷಿತಾರಣ್ಯದ ಬಫ‌ರ್‌ ವಲಯವನ್ನು ಸಾಗಿ ಹೋಗಲಿದೆ. ಹೀಗಾಗಿ, ಗಾಜಿನ ಸ್ಕೈವಾಕ್‌ ಮೇಲೆ ನಡೆಯುವಾಗ ಕೆಳಗಿರುವ ರಕ್ಷಿತಾರಣ್ಯ ಮತ್ತು ಪ್ರಾಕೃತಿಕ ಸೌಂದರ್ಯವನ್ನು ಸವಿಯಬಹುದು.

Advertisement

Udayavani is now on Telegram. Click here to join our channel and stay updated with the latest news.

Next