Advertisement

43 ವರ್ಷಗಳಿಂದಲೂ ಒಬ್ಬರೇ ಅಧ್ಯಕ್ಷ! ಆರನೇ ಬಾರಿಗೆ ಅಧ್ಯಕ್ಷ ಪದವಿಗೆ ಒಬ್ಯಾಂಗ್‌

12:08 AM Nov 28, 2022 | Team Udayavani |

ಮಲಾಬೋ: ಕೇಂದ್ರ ಆಫ್ರಿಕದ ದೇಶವಾಗಿರುವ ಈಕ್ವಟೋರಿಯಲ್‌ ಜಿನಿಯಾ (Equatorial Guinea)ದ ಅಧ್ಯಕ್ಷರಾಗಿ ಟೆಯೊಡೋರೋ ಒಬ್ಯಾಂಗ್‌ ಗ್ಯುಮಾ ಸೊಗೋ (Teodoro Obiang Nguema Mbasogo) ಆಯ್ಕೆಯಾಗಿದ್ದಾರೆ. ಸತತ ಆರನೇ ಬಾರಿಗೆ ಅವರು ಅಧಿಕಾರದ ಚುಕ್ಕಾಣಿ ಪಡೆದುಕೊಂಡಿದ್ದಾರೆ. ಇದರಿಂದಾಗಿ ಅವರು ಜಗತ್ತಿನ ದೇಶವೊಂದರ ಚುನಾಯಿತ ಅಧ್ಯಕ್ಷರಾಗಿ ದಾಖಲೆ ನಿರ್ಮಿಸಲಿದ್ದಾರೆ. 1979ರ ಆಗಸ್ಟ್‌ನಿಂದ ಅವರು ತೈಲ ಸಂಪತ್ತು ಹೆಚ್ಚಾಗಿರುವ ದೇಶದ ನೇತೃತ್ವ ವಹಿಸಿಕೊಂಡಿದ್ದಾರೆ.

Advertisement

1968ರಲ್ಲಿ ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದು ಪ್ರತ್ಯೇಕ ದೇಶವಾಗಿ ಅಸ್ತಿತ್ವಕ್ಕೆ ಬಂದ ನಂತರ ಫ್ರಾನ್ಸಿಸ್ಕೋ ಮಸಿಯಾಸ್‌ ಗ್ಯುಮಾ (Francisco Macias Nguema) ಅಧ್ಯಕ್ಷರಾಗಿದ್ದರು. ಅವರ ಬಳಿಯಿಂದ ಅಧಿಕಾರ ಕಸಿದುಕೊಂಡು ಹುದ್ದೆಗೆ ಏರಿದ್ದರು.

ಅವರ ಆಯ್ಕೆಯ ಬಗ್ಗೆ ಪ್ರತಿಸ್ಪರ್ಧಿಗಳು ಕಟುವಾಗಿ ಟೀಕೆ ಮಾಡಿದ್ದಾರೆ. ಅವರು ನಡೆಸುತ್ತಿರುವ ಕಠಿಣ ನಿರ್ಣಯದ, ಕಟ್ಟುನಿಟ್ಟಿನ ಆಡಳಿತದಿಂದಾಗಿ ದೇಶಕ್ಕೆ ನಷ್ಟ ಉಂಟಾಗಿದೆ. ಈಕ್ವಟೋರಿಯಲ್‌ ಜಿನಿಯಾ ಆಫ್ರಿಕದ ಉತ್ತರ ಕೊರಿಯಾ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next