Advertisement

ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ಅಟಲ್‌ ಹೆಸರು

10:05 AM Dec 25, 2019 | Hari Prasad |

ಹೊಸದಿಲ್ಲಿ: ಹಿಮಾಚಲ ಪ್ರದೇಶದ ರೋಹ್ಟಂಗ್‌ ಪಾಸ್‌ ಕೆಳಗೆ ನಿರ್ಮಿಸಿರುವ ವಿಶ್ವದ ಅತಿ ಉದ್ದದ ಸುರಂಗ ಮಾರ್ಗಕ್ಕೆ ಬುಧವಾರ ಅಟಲ್‌ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ ಅವರ ಹೆಸರನ್ನು ಇಡಲಾಗುತ್ತಿದೆ.

Advertisement

2000ರ ಜೂನ್‌ 3ರಂದು ವಾಜಪೇಯಿ ಪ್ರಧಾನಿಯಾಗಿದ್ದಾಗ 8.8 ಕಿ.ಮೀ. ಉದ್ದದ ಐತಿಹಾಸಿಕ ಸುರಂಗ ಮಾರ್ಗ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಈ ಬೃಹತ್‌ ಯೋಜನೆಯಿಂದ ಮನಾಲಿ ಹಾಗೂ ಲೇಹ್‌ ಪ್ರದೇಶಕ್ಕೆ ತೆರಳಲು 46 ಕಿ.ಮೀ. ಸುತ್ತುವುದು ತಗ್ಗಲಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಸುರಂಗ ಮಾರ್ಗಕ್ಕೆ ವಾಜಪೇಯಿ ಹೆಸರಿಡಲು ನಿರ್ಧರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next