Advertisement

ವಿಶ್ವದ ಬೃಹತ್‌ ದೇವಸ್ಥಾನ 2024ರಲ್ಲಿ ಉದ್ಘಾಟನೆ; “ವೇದ ತಾರಾಮಂಡಲ ಮಂದಿರ”ನಿರ್ಮಾಣ

07:41 PM Aug 29, 2022 | Team Udayavani |

ಮಾಯಾಪುರ (ಪಶ್ಚಿಮ ಬಂಗಾಳ): ವಿಶ್ವದ ಬೃಹತ್‌ ದೇವಸ್ಥಾನ ಎಂದೇ ಕರೆಸಿಕೊಳ್ಳುತ್ತಿರುವ ವೇದ ತಾರಾಮಂಡಲ ಮಂದಿರ, ಪ.ಬಂಗಾಳದ ನಾದಿಯಾ ಜಿಲ್ಲೆಯ ಮಾಯಾಪುರದಲ್ಲಿ ಸಿದ್ಧಗೊಳ್ಳುತ್ತಿದೆ. ಒಂದು ವೇಳೆ ಕೊರೊನಾ ಬರದಿದ್ದರೆ ಇದೇ ವರ್ಷ ಅದು ಭಕ್ತರಿಗೆ ತೆರೆದುಕೊಳ್ಳಬೇಕಿತ್ತು. ಈಗಿನ ಪ್ರಕಾರ 2024ರಲ್ಲಿ ಅದ್ಧೂರಿಯಾಗಿ ಉದ್ಘಾಟನೆಗೊಳ್ಳಲಿದೆ.

Advertisement

ಏನಿದರ ವಿಶೇಷತೆ?: ಶ್ರೀಲ ಪ್ರಭುಪಾದರಿಂದ ಸ್ಥಾಪಿಸಲ್ಪಟ್ಟ ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘ (ಇಸ್ಕಾನ್‌) ಇದನ್ನು ನಿರ್ಮಿಸುತ್ತಿದೆ. 2010ರಲ್ಲಿ ಇದರ ನಿರ್ಮಾಣ ಶುರುವಾಗಿದೆ. ವಿಶೇಷವೆಂದರೆ ದೇಶದ ಪ್ರಮುಖ ಸಂತರಲ್ಲೊಬ್ಬರಾದ ಚೈತನ್ಯ ಮಹಾಪ್ರಭುಗಳು ಹುಟ್ಟಿದ ಜಾಗವಿದು.

ಶ್ರೀಲ ಪ್ರಭುಪಾದರ ಇಚ್ಛೆಯಂತೆ, ವೇದಗಳು, ಶ್ರೀಮದ್ಭಾಗವತದಲ್ಲಿ ಹೇಳಿರುವಂತೆ ವೇದ ತಾರಾಮಂಡಲ, ಗ್ರಹಮಂಡಲವನ್ನು ಇಲ್ಲಿ ಸಿದ್ಧಪಡಿಸಲಾಗುತ್ತಿದೆ. ಇದು ವಿಶ್ವದಲ್ಲೇ ಅತ್ಯಂತ ಬೃಹತ್‌ ವೇದ ತಾರಾಮಂಡಲ ಮಂದಿರ ಎನಿಸಿಕೊಳ್ಳಲಿದೆ.

ಆಲ್‌ಫ್ರೆಡ್‌ ಫೋರ್ಡ್‌ ಅಥವಾ ಅಂಬರೀಶ ದಾಸರಿಂದ ನಿರ್ಮಾಣ:
ಇಡೀ ಕಟ್ಟಡದ ನಿರ್ಮಾಣದ ಹೊಣೆಯನ್ನು ಫೋರ್ಡ್‌ ಕಂಪನಿಯ ಮಾಲಿಕ ಆಲ್‌ಫ್ರೆಡ್‌ ಫೋರ್ಡ್‌ ಹೊತ್ತುಕೊಂಡಿದ್ದಾರೆ. ಅವರು ಈಗಾಗಲೇ ತಮ್ಮ ಹೆಸರನ್ನು ಅಂಬರೀಶ ದಾಸ ಎಂದು ಬದಲಿಸಿಕೊಂಡಿದ್ದಾರೆ.

800 ಕೋಟಿ ರೂ.- ದೇಗುಲ ನಿರ್ಮಾಣ ವೆಚ್ಚ
10000- ಜನರು ಪ್ರತಿ ಅಂತಸ್ತಿನಲ್ಲೂ ಕೂರಬಹುದು.
2.5 ಎಕರೆ- ವಿಸ್ತಾರದ ಅರ್ಚಕರ ಭವನ
70,000 ಚದರ ಅಡಿ ವಿಸ್ತಾರದಲ್ಲಿ ದೇವಸ್ಥಾನ
380 ಅಡಿ ಎತ್ತರದಲ್ಲಿ ನಿರ್ಮಾಣ. ಇದು ವಿಶ್ವದಲ್ಲೇ ಅತಿ ಎತ್ತರದ ಗೋಪುರ ಅಥವಾ ಗುಮ್ಮಟ ಹೊಂದಿರುವ ಧಾರ್ಮಿಕ ಕೇಂದ್ರವೆನಿಸಿಕೊಳ್ಳಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next