Advertisement

ಅಂಟಾರ್ಟಿಕದಲ್ಲಿ ಬಿರುಕು: ವಿಶ್ವದ ಬೃಹತ್‌ ಹಿಮಗಡ್ಡೆ ಸೃಷ್ಟಿ

10:58 PM May 19, 2021 | Team Udayavani |

ನವದೆಹಲಿ: ಅಂಟಾರ್ಟಿಕ ಖಂಡದಲ್ಲಿ ಒಂದು ಬೃಹತ್‌ ದ್ವೀಪದಷ್ಟು ದೊಡ್ಡದಾದ ಹಿಮಗಡ್ಡೆಯೊಂದು, ಬೇರ್ಪಟ್ಟಿದೆ. ಮೂಲ ಹಿಮರಾಶಿಯಿಂದ ಬೇರ್ಪಟ್ಟ ವಿಶ್ವದ ಬೃಹತ್‌ ಹಿಮಗಡ್ಡೆ ಇದೆಂದು ಹೇಳಲಾಗಿದೆ. ಈ ಘಟನೆ ನಡೆದಿರುವುದು ರಾನ್‌ ಹಿಮಶ್ರೇಣಿಯ ಪಶ್ಚಿಮಭಾಗದಲ್ಲಿ. ಸದ್ಯ ಹೀಗೆ ಬೇರ್ಪಟ್ಟ ಹಿಮಗಡ್ಡೆ ವೆಡ್ಡೆಲ್‌ ಸಮುದ್ರದ ಬಳಿಗೆ ತೇಲಿಕೊಂಡು ಹೋಗುತ್ತಿದೆ.

Advertisement

ಇದರ ಗಾತ್ರ 170 ಕಿ.ಮೀ. ಉದ್ದ, 25 ಕಿ.ಮೀ. ಅಗಲ. ಇದು ಸ್ಪೇನಿನ ಮಜೋರ್ಕಾ ದ್ವೀಪದ ಗಾತ್ರಕ್ಕೆ ಸಮ. ನ್ಯೂಯಾರ್ಕ್‌ನ ಲಾಂಗ್‌ ದ್ವೀಪಕ್ಕಿಂತ ದೊಡ್ಡದು, ಪ್ಯೂಯೆರ್ಟಿರಿಕೊ ದ್ವೀಪದ ಅರ್ಧದಷ್ಟಾಗಿದೆ. ಈಗ ಇದರ ವಿಸ್ತಾರವನ್ನು ಊಹಿಸಿ! ನಿಧಾನಕ್ಕೆ ಅಂಟಾರ್ಟಿಕದಲ್ಲಿ ಹಿಮಕರಗುತ್ತಿದೆ. ಇದರಿಂದ ವೆಡ್ಡೆಲ್‌ ಸಮುದ್ರದ ಆಸುಪಾಸು ನೀರ್ಗಲ್ಲುಗಳು ಹಿಂದೆ ಸರಿಯುತ್ತಿವೆ. ಇದರ ಪರಿಣಾಮ ಬೃಹತ್‌ ಹಿಮಗಡ್ಡೆಗಳ ತುಣುಕುಗಳು ತೇಲಿಕೊಂಡು ಹೋಗುತ್ತಿವೆ.

ಇದನ್ನೂ ಓದಿ :ಅಧಿಕಾರ ದುರಪಯೋಗ, ಕರ್ತವ್ಯಲೋಪ : ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಅಮಾನತು

ಕಳೆದವರ್ಷವೂ ಇಂತಹದ್ದೇ ಘಟನೆ ಅಂಟಾರ್ಟಿಕದ ದಕ್ಷಿಣ ಜಾರ್ಜಿಯ ಕರಾವಳಿ ತೀರದಲ್ಲಿ ನಡೆದಿತ್ತು. ಆಗ ವಿಜ್ಞಾನಿಗಳು ಈ ಹಿಮಗಡ್ಡೆ ಪೆಂಗ್ವಿನ್‌, ಸಮುದ್ರದ ಸಿಂಹಗಳ ತಾಣವಾದ ದ್ವೀಪವೊಂದಕ್ಕೆ ಡಿಕ್ಕಿ ಹೊಡೆದು ಅನಾಹುತಕ್ಕೆ ಕಾರಣವಾಗಬಹುದೆಂದು ಆತಂಕ ವ್ಯಕ್ತಪಡಿಸಿದ್ದರು. ಅದೃಷ್ಟವಶಾತ್‌ ಹಾಗಾಗಿರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next