Advertisement

Bird flu ವಿಶ್ವದಲ್ಲೇ ಮೊದಲ ವ್ಯಕ್ತಿ ಬಲಿ: ವಿಶ್ವ ಆರೋಗ್ಯ ಸಂಸ್ಥೆ

12:48 AM Jun 07, 2024 | Team Udayavani |

ಹೊಸದಿಲ್ಲಿ: ಅಮೆರಿಕ, ಇಂಗ್ಲೆಂಡ್‌, ಫ್ರಾನ್ಸ್‌, ಜಪಾನ್‌, ಆಸ್ಟ್ರೇಲಿಯಾಗಳಲ್ಲಿ ಹಕ್ಕಿ ಜ್ವರದ ಪ್ರಕರಣಗಳು ಹೆಚ್ಚಳವಾಗುತ್ತಿರುವ ನಡುವೆಯೇ, ಮೆಕ್ಸಿಕೋದಲ್ಲಿ ಸೋಂಕು ತಗುಲಿದ್ದ ವ್ಯಕ್ತಿಯೊಬ್ಬ ಸಾವಿಗೀಡಾಗಿರುವುದು ದೃಢಪಟ್ಟಿದೆ. ಇದು ವಿಶ್ವದಲ್ಲೇ ಹಕ್ಕಿಜ್ವರದಿಂದ ಮನುಷ್ಯರು ಸಾವಿಗೀಡಾದ ಮೊದಲ ಪ್ರಕರಣ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ) ತಿಳಿಸಿದೆ.

Advertisement

59 ವರ್ಷದ ವ್ಯಕ್ತಿ ಹಕ್ಕಿ ಜ್ವರ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಕಳೆದ ಏಪ್ರಿಲ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿ, ಸಾವನ್ನಪ್ಪಿದ್ದಾರೆ. ಹಕ್ಕಿ ಜ್ವರದ ಸೋಂಕು ಹೇಗೆ ತಗುಲಿದೆ ಎಂಬುದು ಇನ್ನಷ್ಟೇ ಪತ್ತೆಯಾಗಬೇಕಿದೆ. ಕೋಳಿ ಸೇರಿದಂತೆ ಉಳಿದ ಹಕ್ಕಿಗಳ ಸಾಕಾಣಿಕೆ ಕೇಂದ್ರಗಳಿಂದ ಸೋಂಕು ಹರಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next