Advertisement
ವಾಸಿಯಾಗದ ಕಾಯಿಲೆಗೆ ವಾಸನದ ವೈದ್ಯ ಎಂದೇ ಖ್ಯಾತರಾಗಿರುವ, ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುವ ಪಾರಂಪರಿಕ ವೈದ್ಯ ಡಾ| ಹನುಮಂತ ಮಳಲಿ ಅವರು ಜೇನುತುಪ್ಪದ ದ್ರವರೂಪದ ಪೇಸ್ಟ್ ತಯಾರಿಸಿದ್ದಾರೆ. ರಾಸಾಯನಿಕ ಮುಕ್ತ ಹಾಗೂ ನಿಸರ್ಗದತ್ತ ಪದಾರ್ಥಗಳನ್ನು ಒಳಗೊಂಡ ಜೇನುತುಪ್ಪವೇ ಪ್ರಧಾನವಾಗಿರುವ “ದಂತಾಮೃತ ಬಿಂದು’ ಎಂಬ ಪೇಸ್ಟ್ ತಯಾರಿಸಿದ್ದು, ಪ್ರಯೋಗಾಲಯದಿಂದಲೂ ಪರೀಕ್ಷೆಗೊಳಪಟ್ಟು ಅನುಮತಿ ಪಡೆದುಕೊಳ್ಳಲಾಗಿದೆ.
Related Articles
Advertisement
ಡಾ| ಹನುಮಂತ ಮಳಲಿ ಅವರಿಗೆ 80 ವರ್ಷದ ವೃದ್ಧರೊಬ್ಬರು ಆ ವಯಸ್ಸಿನಲ್ಲೂ ತಮ್ಮ ಹಲ್ಲು ಗಟ್ಟಿಮುಟ್ಟಾಗಿ ಆರೋಗ್ಯವಾಗಿರುವುದಕ್ಕೆ ನಿತ್ಯ ಜೇನುತುಪ್ಪದಿಂದ ಹಲ್ಲುಜ್ಜುವುದೇ ಕಾರಣ ಎಂದು ಹೇಳಿದ್ದರಂತೆ. ಡಾ| ಮಳಲಿ ಅವರು ಸಹ ಸ್ವತಃ ಜೇನುತುಪ್ಪದಿಂದ ಹಲ್ಲುಜ್ಜಿ ನೋಡಿದ್ದು, ಫಲಿತಾಂಶ ಕಂಡುಬಂದ ನಂತರ ಜೇನುತುಪ್ಪವನ್ನು ಕೆಲವರಿಗೆ ನೀಡಿ ಹಲ್ಲುಜ್ಜಲು ಬಳಸಲು ಸೂಚಿಸಿದ್ದಾರೆ. ಅವರಿಂದಲೂ ಉತ್ತಮ ಫಲಿತಾಂಶದ ಅನಿಸಿಕೆ ವ್ಯಕ್ತವಾಗಿದೆ. ಬಳಿಕ ಜೇನಿಗೆ ಉಪ್ಪು ಸೇರಿಸಿ ಸುಮಾರು 3-6 ತಿಂಗಳು ಪ್ರಯೋಗ ಮಾಡಿದ್ದಾರೆ. ನಂತರ ಜೇನುತುಪ್ಪಕ್ಕೆ ತುಳಸಿರಸ, ಲವಂಗದ ಎಣ್ಣೆ, ಶ್ರೀಗಂಧದ ಎಣ್ಣೆ, ಪಚ್ಚೆ ಕರ್ಪೂರ ಬಳಸಿ ದಂತಾಮೃತ ಬಿಂದು ಪೇಸ್ಟ್ ತಯಾರಿಸಿದ್ದಾರೆ.
ರಾಸಾಯನಿಕ ಪದಾರ್ಥಗಳು ಇಂದಿನ ಟೂತ್‌ಪೇಸ್ಟ್‌ಗಳಲ್ಲಿ ಇರುವುದು ಸಾಬೀತಾಗಿದೆ. ಜನರಿಗೆ ರಾಸಾಯನಿಕ ಮುಕ್ತ, ದಂತಗಳ ಪರಿಪೂರ್ಣ ಆರೋಗ್ಯಕ್ಕೆ ಪೂರಕವಾಗುವ ಪೇಸ್ಟ್ ತಯಾರಿಸಬೇಕೆಂಬ ಚಿಂತನೆಯೊಂದಿಗೆ ಕೈಗೊಂಡ ಪ್ರಯೋಗ ಯಶಸ್ವಿಯಾಗಿದ್ದು, ಜೇನುತುಪ್ಪದ ದ್ರವರೂಪದ ದಂತಾಮೃತ ಬಿಂದು ಜನರ ದಂತ ಆರೋಗ್ಯ ಸಂರಕ್ಷಕನಾದರೆ, ಜೇನುಕೃಷಿಕರಿಗೆ ಮಹತ್ವದ ಆಸರೆ ಆಗಲಿದೆ. ಮಕ್ಕಳು ಹಲ್ಲುಜ್ಜುವಾಗ ಅದನ್ನು ನುಂಗಿದರೂ ಯಾವುದೇ ಅಪಾಯವಿಲ್ಲ. –ಡಾ| ಹನುಮಂತ ಮಳಲಿ, ಪಾರಂಪರಿಕ ವೈದ್ಯರು
ಇನ್ನೆರಡು ತಿಂಗಳಲ್ಲಿ ಲೋಕಾರ್ಪಣೆ
ದಂತಾಮೃತ ಬಿಂದು ಪೇಸ್ಟ್ ಅನ್ನು ಮಧುಮೇಹಿಗಳು ಸಹ ಬಳಸಬಹುದಾಗಿದೆ. ಸುಮಾರು 30 ಎಂಎಲ್ ಟ್ಯೂಬ್‌ನಲ್ಲಿ ದಂತಾಮೃತ ಬಿಂದು ಬರಲಿದ್ದು, ಮುಂದಿನ ದಿನಗಳಲ್ಲಿ ಜನರ ಬೇಡಿಕೆ ಆಧರಿಸಿ ಹೆಚ್ಚಿನ ಪ್ರಮಾಣದ ಟ್ಯೂಬ್‌ನಲ್ಲಿ ಹೊರತರಲು ನಿರ್ಧರಿಸಲಾಗಿದೆ. ಪೇಸ್ಟ್‌ಅನ್ನು ಓಂಶಕ್ತಿ ಆಯುರ್ವೇದ ಘಟಕ ಉತ್ಪಾದನೆ ಮಾಡಿದರೆ, ಸ್ವಯಂ ಸಂಜೀವಿನಿ ಮಾರುಕಟ್ಟೆಗೆ ನೀಡುತ್ತಿದೆ. ಇನ್ನೆರಡು ತಿಂಗಳಲ್ಲಿ ಹುಬ್ಬಳ್ಳಿಯಿಂದಲೇ ಮಾರುಕಟ್ಟೆಗೆ ದಂತಾಮೃತ ಬಿಂದು ಲೋಕಾರ್ಪಣೆಗೊಳ್ಳಲಿದೆ. ಅಮರೇಗೌಡ ಗೋನವಾರ