Advertisement

ಅತೀ ವೇಗದ ಬೆಳವಣಿಗೆ : ವಿಶ್ವದ 20 ಟಾಪ್‌ ನಗರಗಳ ಪೈಕಿ ಭಾರತದ್ದೇ 17

03:34 PM Dec 06, 2018 | Team Udayavani |

ಹೊಸದಿಲ್ಲಿ : 2019 ಮತ್ತು 2035ನೇ ಇಸವಿಯ ನಡುವೆ ವಿಶ್ವದಲ್ಲಿ ಅತ್ಯಂತ ವೇಗದ ಬೆಳವಣಿಗೆ ಕಾಣುವ ಅಗ್ರ 20 ನಗರಗಳ ಪಟ್ಟಿಯಲ್ಲಿ ಭಾರತದ್ದೇ 17 ನಗರಗಳು ಇರಲಿವೆ ಎಂದು ಆಕ್ಸ್‌ಫ‌ರ್ಡ್‌ ಇಕಾನಮಿಕ್ಸ್‌ ವರದಿ ತಿಳಿಸಿದೆ. 

Advertisement

ಅತೀ ವೇಗದ ಬೆಳವಣಿಗೆ ಕಾಣಲಿರುವ ಭಾರತದ 17 ನಗರಗಳ ಪೈಕಿ ಗುಜರಾತ್‌ನ ಸೂರತ್‌ ಅಗ್ರ ಸ್ಥಾನದಲ್ಲಿ ಇರಲಿದೆ ಎಂದೂ ವರದಿ ತಿಳಿಸಿದೆ. 

ಹಾಗಿದ್ದರೂ ಭಾರತೀಯ ನಗರಗಳ ಒಟ್ಟು ಜಿಡಿಪಿ, ಚೀನ, ಉತ್ತರ ಅಮೆರಿಕ ಮತ್ತು ಯುರೋಪ್‌ ನಗಗಳ ಜಿಡಿಪಿಗಿಂತ ಅತ್ಯಂತ ಕಡಿಮೆ ಇರಲಿದೆ ಎಂದು ವರದಿ ಹೇಳಿದೆ. 

ಭಾರತೀಯ ನಗರಗಳ ಪೈಕಿ ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣಲಿರುವ ಸೂರತ್‌ನ ಜಿಡಿಪಿ 2018-2035ರ ನಡುವಿನ ಅವಧಿಯಲ್ಲಿ ಶೇ.9.2 ಇರಲಿದೆ; ಆಗ್ರಾ, ಬೆಂಗಳೂರು, ಹೈದರಾಬಾದ್‌, ನಾಗ್ಪುರ, ತಿರುಪ್ಪುರ, ರಾಜ್‌ಕೋಟ್‌, ತಿರುಚಿರಪಳ್ಳಿ, ಚೆನ್ನೈ ಮತ್ತು ವಿಜಯವಾಡ ಅನುಕ್ರಮವಾಗಿ ಅನಂತರದ ಸ್ಥಾನಗಳಲ್ಲಿ ಇರಲಿವೆ ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next