Advertisement
ಈ ಬಗ್ಗೆ ಮಾತನಾಡಿದ ದಿಲ್ಲಿ ಮೆಟ್ರೋದ ಕಾರ್ಪೊರೇಟ್ ಕಮ್ಯುನಿಕೇಶನ್‌ನ ಕಾರ್ಯ ನಿರ್ವಾಹಕ ನಿರ್ದೇಶಕ ಅಜು ದಯಾಳ್ “ಸದ್ಯ ದಿಲ್ಲಿ ಮೆಟ್ರೋದಲ್ಲಿ 173 ಸ್ಟೇಷನ್‌ಗಳಿವೆ. ಮೂರನೇ ಹಂತದ ಯೋಜನೆ ಪೂರ್ತಿಯಾದ ಬಳಿಕ ಒಟ್ಟು 375 ಕಿಮೀ ಮಾರ್ಗ ಮೆಟ್ರೋಗೆ ಸಿಗಲಿದೆ. ನೋಯ್ಡಾ- ಗ್ರೇಟರ್ ನೋಯ್ಡಾ ಕಾರಿಡಾರ್ ಅತಿದೊಡ್ಡ ಕಾರಿಡಾರ್ ಆಗಲಿದೆ. ಚೀನದ ಬೀಜಿಂಗ್ ಮತ್ತು ಲಂಡನ್‌ನಲ್ಲಿರುವ ಮೆಟ್ರೋ ಬಳಿಕ ಅತ್ಯಂತ ದೊಡ್ಡ ಕಾರಿಡಾರ್ ಆಗಲಿದೆ’ ಎಂದಿ ದ್ದಾರೆ. ಈ ವಲಯ ದಿಲ್ಲಿ ಮೆಟ್ರೋ ಸಂಪರ್ಕ ಸರಣಿ ಭಾಗವಾಗಿರಲಿದ್ದು, 52 ನಿಲ್ದಾಣಗಳನ್ನು ಹೊಂದಲಿದೆ. ನಿರ್ಮಾಣವನ್ನು ದಿಲ್ಲಿ ಮೆಟ್ರೋ ನಿಗಮ ಕೈಗೆತ್ತಿಕೊಂಡರೂ ಅದರ ನಿರ್ವಹಣೆಯನ್ನು ನೋಯ್ಡಾ ಮೆಟ್ರೋ ರೈಲು ನಿಗಮ ನಡೆಸಲಿದೆ. 2018ರಲ್ಲಿ ಮೆಟ್ರೋ ಹರಿಯಾಣ ಕ್ಕೂ 3ನೇ ಹಂತದಲ್ಲಿ ಕಾಲಿಡಲಿದೆ. ಗುರ್ಗಾಂವ್- ಫರಿದಾ ಬಾದ್ ಅನಂತರ ಬಹಾದುರ್‌ಗಡಕ್ಕೆ ಸಂಪರ್ಕ ವಿಸ್ತಾರ ಗೊಂಡ ಬಳಿಕ ಅದು ಸಾಧ್ಯ.
421ನಿಲ್ದಾಣ ನ್ಯೂಯಾರ್ಕ್ ಸಿಟಿ ಸಬ್‌ವೇ 303ನಿಲ್ದಾಣ ಪ್ಯಾರೀಸ್ ಮೆಟ್ರೋ
Related Articles
Advertisement
296ನಿಲ್ದಾಣ ಸಿಯೋಲ್ ಸಬ್‌ವೇ