Advertisement
ಆದರೆ 65 ಕೆಜಿ ವಿಭಾಗದಲ್ಲಿ ಅಗ್ರ ರ್‍ಯಾಂಕಿಂಗ್ ಹೊಂದಿದ್ದ ಭಜರಂಗ್ ಪೂನಿಯಾ ಈ ಸ್ಥಾನ ಕಳೆದುಕೊಂಡಿದ್ದಾರೆ. ವನಿತಾ ವಿಭಾಗದಲ್ಲಿ ವಿನೇಶ್ ಪೋಗಟ್ ನಂ.2 ಆಗಿದ್ದಾರೆ.
Related Articles
ಭಜರಂಗ್ ಪೂನಿಯಾ ನಂಬರ್ ವನ್ ಎಂಬ ಹಿರಿಮೆಯೊಂದಿಗೆ ವಿಶ್ವ ಚಾಂಪಿಯನ್‌ಶಿಪ್ ಸ್ಪರ್ಧೆಗೆ ಇಳಿದಿದ್ದರು. ಆದರೆ 65 ಕೆಜಿ ವಿಭಾಗದಲ್ಲಿ ಕಂಚಿಗೆ ತೃಪ್ತರಾದ ಅವರೀಗ ದ್ವಿತೀಯ ಸ್ಥಾನಕ್ಕೆ ಇಳಿದಿದ್ದಾರೆ (63 ಅಂಕ). ಚಿನ್ನ ಗೆದ್ದ ರಶ್ಯದ ಗಾಜಿಮುರಾದ್ ರಶಿದೋವ್ ನೂತನ ನಂ.1 ಕುಸ್ತಿಪಟು ಎನಿಸಿದ್ದಾರೆ.
57 ಕೆಜಿ ವಿಭಾಗದಲ್ಲಿ ಕಂಚು ಗೆದ್ದ ರವಿ ದಹಿಯಾ ಮೊದಲ ಸಲ ಟಾಪ್-5 ಯಾದಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರದು 5ನೇ ರ್‍ಯಾಂಕಿಂಗ್. ರಾಹುಲ್ ಅವಾರೆ ನಂ.2 ಆಗಿದ್ದಾರೆ.
Advertisement
ವಿನೇಶ್ 4 ಸ್ಥಾನ ಜಿಗಿತವಿಶ್ವ ಕೂಟದಲ್ಲಿ ಕಂಚು ಗೆದ್ದು ಟೋಕಿಯೊ ಒಲಿಂಪಿಕ್ ಅರ್ಹತೆ ಸಂಪಾದಿಸುವಲ್ಲಿ ಯಶಸ್ವಿಯಾದ ವಿನೇಶ್ ಪೋಗಟ್ ಅವರದು 4 ಸ್ಥಾನಗಳ ನೆಗೆತ. 53 ಕೆಜಿ ವಿಭಾಗದಲ್ಲಿ ಅವರೀಗ ವಿಶ್ವದ ನಂ.2 ಕುಸ್ತಿಪಟು.