Advertisement

ವಿಶ್ವದರ್ಜೆ ಆಧ್ಯಾತ್ಮಿಕ ಕೇಂದ್ರ: ಪುತ್ತಿಗೆ ಶ್ರೀ

12:07 AM Apr 23, 2019 | sudhir |

ಉಡುಪಿ: ಪುತ್ತಿಗೆ ಮೂಲ ಮಠವನ್ನು ಧಾರ್ಮಿಕ ಹಾಗೂ ಸಂಸ್ಕೃತ ಅಧ್ಯಯನದಲ್ಲಿ ವಿಶ್ವದರ್ಜೆಯ ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾಡುವ ಆಶಯವನ್ನು ಹೊಂದಿರುವುದಾಗಿ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

Advertisement

ಸೋಮವಾರ ನಡೆದ ಶಿಷ್ಯ ಸ್ವೀಕಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

ಮಧ್ವಾಚಾರ್ಯರು, ಶ್ರೀಕೃಷ್ಣ ದೇವರ ಪ್ರೇರಣೆಯಂತೆ ಈಗಾಗಲೇ ವಿದೇಶದಲ್ಲೂ ಶ್ರೀಕೃಷ್ಣ ತತ್ತÌ ಪ್ರಸಾರ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಗುರು- ಶಿಷ್ಯರು ಈ ಕಾರ್ಯದಲ್ಲಿ ತೊಡಗುವವರಿದ್ದೇವೆ. ವಿಶ್ವಸಂಸ್ಥೆ ಸೇರಿದಂತೆ 182 ರಾಷ್ಟ್ರಗಳ ಧಾರ್ಮಿಕ ಸಂಸ್ಥೆಯ ಅಧ್ಯಕ್ಷನ ನೆಲೆಯಲ್ಲಿ ಉಗ್ರ ನಿಗ್ರಹ ಕಾರ್ಯ ಜವಾಬ್ದಾರಿಯೂ ತಮ್ಮ ಮೇಲಿದೆ. ಇದು ನಮ್ಮ ಸಾಹಸವೇ ಹೊರತು ದುಸ್ಸಾಹಸವಲ್ಲ. ಈಗಾಗಲೇ ಅಮೆರಿಕಾ, ಕೆನಡಾ, ಲಂಡನ್‌ ಮತ್ತು ಆಸ್ಟ್ರೇಲಿಯಾ ಸಹಿತ ವಿವಿಧ ಕಡೆ 11 ಪುತ್ತಿಗೆ ಶಾಖಾ ಮಠಗಳಿದ್ದು, ಮುಂದಿನ ದಿನದಲ್ಲಿ ವಿಶ್ವಾದ್ಯಂತ 108 ಪುತ್ತಿಗೆ ಶಾಖಾಮಠ ಸ್ಥಾಪನೆಯ ಸಂಕಲ್ಪವಿದೆ ಎಂದರು.

ಭಗವಂತನನ್ನು ಸೇರಲು ಎರಡು ಮಾರ್ಗಗಳಿವೆ. ಸನ್ಯಾಸ ಧರ್ಮಾನು ಸರಣೆ ಮೂಲಕ ಕ್ಷಿಪ್ರವಾಗಿ ಭಗವಂತನ ದರ್ಶನ ಹೊಂದ ಬಹುದಾದರೆ, ಗೃಹಸ್ಥಾಶ್ರಮದವರಿಗೂ ಭಗವತಾøಪ್ತಿ ಸಾಧ್ಯ. ಶ್ರೀಮಠದ ಸಂಪ್ರದಾಯದಂತೆ ಉತ್ತರಾಧಿಕಾರಿ ಶಿಷ್ಯ ಪರಿಗ್ರಹಣದ ಕರ್ತವ್ಯ ನೆರವೇರಿಸಲಾಗಿದೆ ಎಂದರು.

ಆಯ್ಕೆ ತರಾತುರಿಯಲ್ಲಿ ನಡೆದಿಲ್ಲ
ಮಠದ ಉತ್ತರಾಧಿಕಾರಿಯ ಆಯ್ಕೆ ತರಾತುರಿಯಲ್ಲಿ ನಡೆದಿಲ್ಲ. ಕಳೆದ ಎಂಟು ತಿಂಗಳಿಂದ ಕುಂಜಿಬೆಟ್ಟು ಪ್ರಶಾಂತ ಆಚಾರ್ಯ ಅವರ ಬಗ್ಗೆ ತಿಳಿದು ಅಂತಿಮವಾಗಿ ಶಿಷ್ಯನನ್ನಾಗಿ ಸ್ವೀಕರಿಸಲಾಗಿದೆ. ಅವರಿಂದ ತಣ್ತೀ ಪ್ರಚಾರ, ಪರಸ್ಪರ ಐಕ್ಯಭಾವದಿಂದ ಮಠದ ವ್ಯವಹಾರಗಳು, ಯತಿಧರ್ಮ ಪಾಲನೆ ಬಗ್ಗೆ ವಚನ ಪಡೆದುಕೊಳ್ಳ ಲಾಗಿದೆ. ಈ ದಿನ ಬಿಟ್ಟರೆ ಇನ್ನು ಒಂದೂವರೆ ವರ್ಷ ಮುಹೂರ್ತ ಕೂಡಿಬರುವುದಿಲ್ಲ. ಆದ್ದರಿಂದ ಇಂದೇ ಕಾರ್ಯಕ್ರಮ ನಡೆಸಿದೆವು ಎಂದು ಶ್ರೀಪಾದರು ಹೇಳಿದರು.

Advertisement

ಗುರುವಂದನೆ
ಮೇ 16ರಂದು ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರಿಗೆ ಗುರುವಂದನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಶತಾಯುಷಿಗಳಾಗಲಿ
ಐಟಿ ಸ್ವಾಮೀಜಿಯಿಂದ ಆಧ್ಯಾತ್ಮಿಕ, ಧಾರ್ಮಿಕ ಪ್ರಚಾರವಾಗಲಿ. ತಮ್ಮ ಮಠದ ಪರಂಪರೆಯಲ್ಲಿ ಶತಾಯುಷಿ ಗಳಾದ ಶ್ರೀಹಂಸೇಂದ್ರ ತೀರ್ಥರು, ಶ್ರೀ ಕವೀಂದ್ರ ತೀರ್ಥರು, ಶ್ರೀ ಸುಧೀಂದ್ರ ತೀರ್ಥರು, ಶ್ರೀ ರಾಘವೇಂದ್ರ ತೀರ್ಥರು, ಶ್ರೀ ವಿಜಯೀಂದ್ರ ತೀರ್ಥರು, ಶ್ರೀ ಸುಮತೀಂದ್ರತೀರ್ಥ ಶ್ರೀಪಾದರಂತೆ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಶತಾಯುಷಿಯಾಗಲಿ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾರೈಸಿದರು.

ಸನ್ಯಾಸಿಯಾಗಬೇಕೆಂಬ ಆಸೆ ಇತ್ತು
ಬಾಲ್ಯದಿಂದ ಸನ್ಯಾಸಿಯಾಗಬೇಕೆಂಬ ಆಸೆ ಇತ್ತು. ಸನ್ಯಾಸಿ ಯಾಗಬೇಕೆಂಬ ತವಕ ಇದ್ದರೂ ಕೋಟಿಗೊಬ್ಬರಂತೆ ಆ ಅವಕಾಶ ಪ್ರಾಪ್ತಿಯಾಗಲಿದೆ. ತಮ್ಮ ಪೂರ್ವಜನ್ಮದ ಸುಕೃತ, ಮಾತಾಪಿತರ ಗುರು ಭಕ್ತಿಯಿಂದ ಕೃಷ್ಣ ಸೇವೆ ತಮಗೆ ಪ್ರಾಪ್ತವಾಗಿದೆ. ತಮಗೆ ಸನ್ಯಾಸದೀಕ್ಷೆ ನೀಡಿದ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರ ನಂಬಿಕೆ ಉಳಿಸಿಕೊಳ್ಳುತ್ತೇನೆ.
– ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು, ಪುತ್ತಿಗೆ ಮಠ

12 ವರ್ಷ ಅಧ್ಯಯನ
ಉತ್ತರಾಧಿಕಾರಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮುಂದಿನ 12 ವರ್ಷಗಳ ಮೂಲ ಮಠದಲ್ಲಿ ವೇದ ವೇದಾಂತ ಶಿಕ್ಷಣ ಪಡೆಯಲಿದ್ದಾರೆ. ವೇದಾಂತ ಶಿಕ್ಷಣ ಬೋಧನೆಗಾಗಿ ತಜ್ಞ ವಿದ್ವಾಂಸರನ್ನು ನಿಯೋಜಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next