Advertisement

ರಾಜ್ಯದ ಕರಕುಶಲ ವಸ್ತುಗಳಿಗೆ ವಿಶ್ವಮಟ್ಟದಲ್ಲಿ ಬೇಡಿಕೆ

10:10 AM Nov 22, 2021 | Team Udayavani |

ಬೆಂಗಳೂರು: ಕರ್ನಾಟಕದ ಕುಶಲಕರ್ಮಿಗಳ ಉತ್ಪನ್ನ ಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಚ್ಚು ಬೇಡಿಕೆ ಬರುತ್ತಿದ್ದು ಆನ್‌ಲೈನ್‌ ಮಾರಾಟ ಸೇವೆಯನ್ನೂ ಆರಂ ಭಿಸಲಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ನಿಗ ಮದ ಮತ್ತಷ್ಟು ಮಳಿಗೆ ಸ್ಥಾಪಿಸಲು ಚಿಂತನೆ ನಡೆಸಿದೆ ಎಂದು ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಡಿ.ರೂಪಾ ತಿಳಿಸಿದ್ದಾರೆ.

Advertisement

ಉದಯವಾಣಿ‘ ಕಚೇರಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡು ಮಾತ ನಾ ಡಿದ ಅವರು, ದುಬೈ ಎಕ್ಸ್‌ಪೋ, ದೆಹಲಿ ಪ್ರದರ್ಶನ ಸೇರಿ ವಿವಿಧೆಡೆ ನಡೆಯುವ ಪ್ರದರ್ಶನ ಮೇಳಗಳಲ್ಲಿ ನಿಗಮವು ಭಾಗಿಯಾಗುತ್ತಿದ್ದು, ನಮ್ಮ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು. ಕೊರೊನಾ ನಂತರ ನಿಗಮದ ವಹಿವಾಟಿನಲ್ಲೂ ಚೇತರಿಕೆ ಕಂಡುಬಂದಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಹಿವಾಟು ಮೂರು ಪಟ್ಟು ಹೆಚ್ಚಾಗಿದೆ.

ಕಳೆದ ವರ್ಷ ಜುಲೈ, ಆಗಸ್ಟ್‌ , ಸೆಪ್ಟೆಂಬರ್‌, ಅಕ್ಟೋಬರ್‌ ತಿಂಗಳಲ್ಲಿ 38 ಲಕ್ಷ ರೂ. ವಹಿವಾಟು ಆಗುತ್ತಿತ್ತು. ಈ ವರ್ಷ ಮಾಸಿಕ 1.10 ಕೋಟಿ ರೂ. ವಹಿವಾಟಾಗಿದ್ದು ಪ್ರತಿ ತಿಂಗಳು ಇದು ಹೆಚ್ಚಾಗುತ್ತಲ್ಲೇ ಇದೆ. ಇದು ಆಶಾಯದಾಯಕ ಬೆಳವಣಿಗೆ ಎಂದು ತಿಳಿಸಿದರು. ಹಮ್ಮೆಯ ವಿಷಯ ಎಂದರೆ ದುಬೈ ಎಕ್ಸ್‌ಪೋನ ಇಂಡಿಯಾ ಪೆವಿಲಿಯನ್‌ನಲ್ಲಿ ಇದುವರೆಗೂ ನಮ್ಮ ರಾಜ್ಯದಿಂದ ಯಾರೂ ಮಳಿಗೆ ತೆರೆದಿರಲಿಲ್ಲ.

ಇದೀಗ ಕರುಕುಶಲ ನಿಗಮ ರೀಟೇಲ್‌ ಮಳಿಗೆ ಹಾಕಿದೆ. ಅಲ್ಲಿಗೆ ಬಂದ ವಿಶ್ವದ ಬಹುತೇಕ ರಾಷ್ಟ್ರಗಳ ಪ್ರತಿನಿಧಿಗಳು ನಮ್ಮ ಉತ್ಪನ್ನಗಳಿಗೆ ಮನಸೋತಿದ್ದಾರೆ ಎಂದು ಹೇಳಿದರು. ದುಬೈ ಎಕ್ಸ್‌ಪೋದಲ್ಲಿ ಕನ್ನಡಿಗರು ಮತ್ತು ವಿದೇಶಿಗ ರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು, ಇತರೆ ದೇಶಗಳ ಲ್ಲಿಯೂ ಸ್ವದೇಶಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ.

ಇದೇ ರೀತಿ ಚೆನ್ನೈ ಸೇರಿದಂತೆ ಇತರೆ ರಾಜ್ಯಗಳಲ್ಲಿಯೂ ನಮ್ಮ ಕರಕುಶಲ ವಸ್ತುಗಳ ಮಳಿಗೆಯನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಕರಕುಶಲ ಉತ್ಪನ್ನಗಳ ಕ್ಷೇತ್ರದಲ್ಲಿ ಕಾವೇರಿ ಬ್ರ್ಯಾಂಡ್‌ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ನಾನು ಅಧಿಕಾರ ಸ್ವೀಕರಿಸಿದಾಗ ನಿಗಮವು ತುಂಬಾ ನಷ್ಟವನ್ನು ಅನುಭವಿಸುತ್ತಿತ್ತು. ಇದೀಗ ನಷ್ಟ ತಪ್ಪಿಸಿ ಲಾಭದತ್ತ ಕೊಂಡೊಯ್ಯಲಾಗಿದೆ. ಸೋರಿಕೆ ಹಾಗೂ ಆವ್ಯವಹಾರ ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ. ಕುಶಲಕರ್ಮಿಗಳ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸಲಾಗಿದೆ.

Advertisement

ಅವರಲ್ಲಿ ಹೊಸ ಭರವಸೆ ಮೂಡಿಸಲಾಗಿದೆ. ಅವರೇ ನಮ್ಮ ನಿಗಮದ ಬಲ ಎಂದು ಹೇಳಿದರು. ನಿಗಮದಲ್ಲಿ ಹಿಂದೆ ಅವ್ಯವಹಾರ ನಡೆದು 25 ಕೋಟಿ ರೂ. ನಷ್ಟವಾಗಿದೆ. ಆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈಹಿಂದೆ ಆಗಿದ್ದ ವ್ಯತ್ಯಾಸ ಸರಿಪಡಿಸಿ ನಿಗಮವನ್ನು ಸುಸ್ಥಿತಿಗೆ ತರುವ ಪ್ರಾಮಾಣಿಕ ಪ್ರಯತ್ನ ನಡೆದಿದೆ ಎಂದು ತಿಳಿಸಿದರು. ಸರ್ಕಾರದಿಂದ ಸಿಗುವ ಸಬ್ಸಿಡಿಯನ್ನು ನೇರವಾಗಿ ಕರಕುಶಲ ಕರ್ಮಿಗಳಿಗೆ ನೀಡುತ್ತೇವೆ.ಉಳಿದಂತೆ ಮಳಿಗೆಯ ಜಾಗ, ಉತ್ಪಾದಿಸುವ ಜಾಗ, ಕಚ್ಚಾವಸ್ತುಗಳು ಸೇರಿದಂತೆ ಇತರೆ ಸಹಾಯಗಳನ್ನು ನಮ್ಮ ನಿಗಮದಿಂದಲೇ ಮಾಡುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

 12 ಕರಕುಶಲ ಮಾರಾಟ ಮಳಿಗೆ

ದೆಹಲಿ, ಗುಜರಾತ್‌, ಹೈದರಾಬಾದ್‌, ಬೆಂಗಳೂರಿನಲ್ಲಿ ಎರಡು ಮಳಿಗೆಗಳು, ಮೈಸೂರಿನಲ್ಲಿ ಮೂರು ಮಳಿಗೆಗಳು ಸೇರಿದಂತೆ ಒಟ್ಟು 12 ಕರಕುಶಲ ವಸ್ತುಗಳ ಮಾರಾಟ ಮಳಿಗೆಗಳಿವೆ. ಸಾಗರದ ಗುರುಕುಲ ತರಬೇತಿ ಕೇಂದ್ರದಲ್ಲಿ ವಾರ್ಷಿಕವಾಗಿ ಸುಮಾರು 40 ಅಭ್ಯರ್ಥಿಗಳು ಕಲ್ಲಿನ ಮತ್ತು ಮರದ ಕರಕುಶಲ ಕೆತ್ತನೆಗಳ ಬಗ್ಗೆ ತರಬೇತಿಯನ್ನು ಪಡೆಯುತ್ತಿದ್ದಾರೆ. ನಿಗಮದಿಂದಲೇ ಅವರಿಗೆ ತರಬೇತಿ ಹಾಗೂ ಇತರೆ ಸೌಲಭ್ಯ ಒದಗಿಸಲಾಗಿದೆ ಎಂದು ಕರಕುಶಲ ಅಭಿವೃದ್ಧಿ ನಿಗಮದ ಡಿ.ರೂಪಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next