Advertisement
ಪಟ್ಟಣದಲ್ಲಿ ಪುರಸಭೆ, ಕಾನೂನು ಸೇವಾಸಮಿತಿ, ಮಹಾತ್ಮಗಾಂಧಿ ಪ್ರೌಢ ಶಾಲೆ ಎನ್‌ಎಸ್‌ಎಸ್ ಘಟಕದ ಸಂಯಕ್ತಾಶ್ರಯದಲ್ಲಿ ಎಂ.ಜಿ. ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವಿಶ್ವ ಜಲದಿನಾಚರಣೆಯಲ್ಲಿ ಮಾತನಾಡಿದ ಅವರು,ಭೂಗೋಳದಲ್ಲಿ ಮೂರನೇ ಭಾಗ ನೀರಿದ್ದರೇ,ಒಂದು ಭಾಗ ಭೂಮಿ ಇದೆ. ಹಿಂದೆ 300-400ಅಡಿಗಳು ಕೊಳವೆ ಬಾವಿ ಕೊರೆದರೆ ನೀರುಸಿಗುತಿತ್ತು. ಈಗ 1200 ಅಡಿ ಕೊರೆದರು ನೀರು ಸಿಗುತ್ತಿಲ್ಲ, ಇದಕ್ಕೆ ಕಾರಣ ಭೂಮಿಯ ಮೇಲೆ ಗಿಡಮರಗಳು ಕಡಿಮೆಯಾಗುತ್ತಿದೆ. ಇದರಿಂದಮಳೆಯ ಪ್ರಮಾಣ ಕಡಿಮೆಯಾಗಿದೆ. ಪುರಸಭೆನೀರಿನ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ವಹಿಸಬೇಕು ಎಂದರು.
Related Articles
Advertisement
ಜನರಿಗೆ ನೀರಿನ ಜಾಗೃತಿ ಮೂಡಿಸಿ :
ಮಾನವ ವೈಜ್ಞಾನಿಕವಾಗಿ ಎತ್ತರಕ್ಕೆ ಬೆಳೆದಿದ್ದರೂನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಆವಿಷ್ಕಾರಸಾಧ್ಯವಾಗಿಲ್ಲ, ಇದು ಭೂಮಿಯಿಂದ ಪ್ರಕೃತಿದತ್ತವಾಗಿ ಬಂದ ಅಮೂಲ್ಯ ಕೊಡುಗೆ. ಇದನ್ನುವ್ಯರ್ಥವಾಗಿ ಹರಿ ಬಿಡದೇ ಸಂರಕ್ಷಿಸಬೇಕು. ನೀರಿನ ಪ್ರಮುಖ್ಯತೆ ಹಾಗೂ ಮಿತ ಬಳಕೆ ಬಗ್ಗೆವಿದ್ಯಾರ್ಥಿಗಳು ತಿಳಿದು ಜನರಿಗೆ ನಿರಂತರ ಜಾಗೃತಿಮೂಡಿಸುವ ಕೆಲಸಗಳು ಮಾಡಬೇಕು ಎಂದು ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್ ಹೇಳಿದರು.