Advertisement
ತಾಲೂಕಿನ ನಾಯನಹಳ್ಳಿಯಲ್ಲಿ ಶಾಶ್ವತ ನೀರಾವರಿ ಹೋರಾಟ ಸಮಿತಿ ಮುಖಂಡ ಆಂಜಿನೇಯರೆಡ್ಡಿ ಅವರ ತೋಟದಲ್ಲಿ ವಿಶ್ವ ಜಲ ದಿನಾಚರಣೆ ಪ್ರಯುಕ್ತ ಜಿಲ್ಲಾ ಶಾಶ್ವತ ನೀರಾವರಿ ಹೋರಾಟಸಮಿತಿ ನೀರಾವರಿ ತಜ್ಞ ದಿ.ಡಾ.ಪರಮಶಿವಯ್ಯಸ್ಮರಣಾರ್ಥ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ,ಸಂವಿಧಾನದಡಿಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಸಂಸದರು ಮತ್ತು ಶಾಸಕರು ಸ್ಥಳೀಯ ಸಮಸ್ಯೆಗಳನ್ನು ಅರಿತು ಪರಿಹಾರ ಕಲ್ಪಿಸುವ ಕೆಲಸಮಾಡಬೇಕು. ಅದು ಆಗುತ್ತಿಲ್ಲ. ಸಂಸತ್ ಮತ್ತು ವಿಧಾನಸಭೆಯಲ್ಲಿ ಮಹಿಳೆಯರು, ಕೃಷಿಕಾರ್ಮಿಕರು ಹಾಗೂ ರೈತರಿಗೆ ಸಾಮಾಜಿಕ ನ್ಯಾಯಕಲ್ಪಿಸುವ ಕೆಲಸ ಆಗುತ್ತಿಲ್ಲ. ಹಾಗಾದರೇ ಅಂತಹಸಂಸತ್ ಮತ್ತು ವಿಧಾನಸಭೆ ನಮಗ್ಯಾಕೆ ಬೇಕೆಂಬ ಪ್ರಶ್ನೆ ಉದ್ಭವವಾಗಿದೆ ಎಂದರು.
Related Articles
Advertisement
ಕಾರ್ಯಕ್ರಮದಲ್ಲಿ ಡಾ.ವಿದ್ಯಾಧರ್ ಮುದ್ಕವಿ, ವಾಟರ್ ಇನ್ಸಟ್ಯೂಟ್ ನಿರ್ದೇಶಕ ಡಾ.ಎಂ.ಇನಾಯುತ್ತುಲ್ಲಾ, ಕಾ.ಲಕ್ಷಮಯ್ಯ, ಹೊಳಲಿಪ್ರಕಾಶ್, ರಾಜೇಶ್, ಜಿಲ್ಲಾ ಶಾಶ್ವತ ನೀರಾವರಿಹೋರಾಟ ಸಮಿತಿ ಅಧ್ಯಕ್ಷ ಆಂಜಿನೇಯ ರೆಡ್ಡಿ,ಉಪಾಧ್ಯಕ್ಷ ಮಳ್ಳೂರು ಹರೀಶ್, ಕಲ್ಯಾಣಬಾಬು,ಒಂದೇ ಭಾರತಂ ಲೋಕೇಶ್, ಯುವ ಶಕ್ತಿ ಸಂಘಟನೆಯ ವಿಜಯಬಾವರೆಡ್ಡಿ, ಶಿವಪ್ರಕಾಶ್‌ರೆಡ್ಡಿ, ರಾಘವೇಂದ್ರ, ನಾಗದೇನಹಳ್ಳಿ ನಾರಾಯಣಸ್ವಾಮಿ, ಆನೂರು ದೇವರಾಜು, ಎಂ.ಆರ್.ಲಕ್ಷ್ಮೀನಾರಾಯಣ, ಸುಷ್ಮಾ ಶ್ರೀನಿವಾಸ್, ಡಾ.ಪ್ರಭಾನಾರಾಯಣಗೌಡ, ಜೀವಿಕ ರತ್ನಮ್ಮ, ರೇಣುಕುಮ್ಮ, ಆಯೀಷಾ ಸುಲ್ತಾನ್, ಚಿಂತಾಮಣಿ ಲಕ್ಷ್ಮೀನಾರಾಯರೆಡ್ಡಿ, ಡಾ.ಅನೀಲ್‌ಕುಮಾರ್, ಪರಿಸರವಾದಿ ಚೌಡಪ್ಪ, ಬಿ.ಎಚ್.ನರಸಿಂಹಯ್ಯ, ಮಂಚನ ಬಲೆ ಶ್ರೀನಿವಾಸ್, ಪುರದಗಡ್ಡೆ ಕೃಷ್ಣಪ್ಪ ಇದ್ದರು.