ಕೊಳ್ಳೇಗಾಲ: ಸಕಲ ಜೀವ ರಾ ಶಿ ಗ ಳಿಗೆ ನೀರು ಆಸರೆಯಾಗಿದೆ. ನೀರಿ ಲ್ಲದೆ ಯಾವ ಜೀವಿಯೂ ಭೂಮಿಯ ಮೇಲೆ ಬದುಕಲು ಸಾಧ್ಯವಿಲ್ಲ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾ ಟೀಲ್ ತಿಳಿಸಿದರು.
ಪಟ್ಟಣದ ಮುಡಿ ಗುಂಡ ಬಡಾವಣೆಯ ಜೆಎಸ್ ಎಸ್ ಪ್ರೌಢ ಶಾಲೆಯಲ್ಲಿ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ವಿಶ್ವ ಜಲ ದಿನ ಅಂಗವಾಗಿ ಸೈಕಲ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬ ಮನುಷ್ಯ ಹಾಗೂ ಪ್ರಾಣಿ ಗಳು ಜೀವಿಸಬೇಕಾದರೆ ಗಾಳಿ, ಆಹಾರ, ವಸತಿ, ನೀರು ಮುಂತಾದ ಮೂಲ ಸೌಕರ್ಯ ಅವ ಶ್ಯಕ. ಭೂಮಿಯ ಮೇಲೆ ಶೇ.70ರಷ್ಟು ಇದೆ. ಆದರೆ, ಕುಡಿಯುವ ಯೋಗ್ಯ ವಾದ ನೀರು ಕೇವಲಒಂದು ಭಾಗ ಮಾತ್ರ ಇದೆ. ಹೀಗಾಗಿಪ್ರತಿಯೊಬ್ಬರೂ ನೀರನ್ನು ಮಿತವಾಗಿ ಬಳಸಬೇಕು. ಜಲಮೂಲಗಳನ್ನು ಸಂರಕ್ಷಿಸಬೇಕು ಎಂದು ಸಲಹೆ ನೀಡಿದರು.
ಭೂಮಿ ಯಲ್ಲಿ ಅನೇಕ ಭಾಗದಲ್ಲಿ ಕುಡಿಯುವ ನೀರಿನ ಅಭಾವ ಇದೆ. ನೀರಿ ನಿಂದಲೇ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿಪ್ರತಿಯೊಬ್ಬರೂ ಶುದ್ಧ ನೀರನ್ನೇ ಸೇವಿಸಬೇಕು ಎಂದರು.
ಪ್ರತಿಯೊಂದು ಭೌತ ಹಾಗೂ ರಸಾಯನಿಕ ಕ್ರಿಯೆಗಳಿಗೆ ನೀರು ಅತ್ಯಗತ್ಯ. ನೀರು ದೊರೆಯದೆ ಇದ್ದರೆ ದೇಹದ ಯಾವುದೇ ಅಂಗಾಂಗಳು ಸರಿಯಾಗಿ ಕಾರ್ಯ ನಿರ್ವಹಿ ಸುವುದಿಲ್ಲ. ಸಾಕಷ್ಟು ನೀರನ್ನು ಸೇವಿ ಸದೆ ಇದ್ದರೆ ಮಲ ಬ ದ್ಧತೆ, ನಿರ್ಜಲೀಕರಣ ಮುಂತಾದ ಸಮ ಸ್ಯೆ ಗಳು ಉಂಟಾಗಲಿದೆ ಎಂದರು.
ಜಾಗೃತಿ ಸೈಕಲ್ ಜಾಥವು ಬಡಾವಣೆಯ ಎಲ್ಲಾ ಬೀದಿಗ ಳಲ್ಲಿ ಸಂಚರಿಸಿ ನೀರಿನ ಮಹತ್ವದ ಬಗ್ಗೆ ಜನರಿಗೆ ಅರಿವು ಮೂಡಿಸಲಾಯಿತು. ಈ ವೇಳೆ ಜೆಎಸ್‌ಬಿ ಪ್ರತಿ ಷ್ಠಾ ನದ ಅಧ್ಯಕ್ಷ ಶಿವ ಕು ಮಾರ್, ಬಿಆರ್‌ಸಿ ಪುಟ್ಟ ಸ್ವಾಮಿ, ಶಾಲೆ ಮುಖ್ಯ ಶಿಕ್ಷಕ ರಾಜಶೇಖರ ಶೆಟ್ಟಿ, ಶಿಕ್ಷ ಕ ರಾದ ನಿರ್ಮಲಾ, ಮಣೀಶ್, ಧನಂಜಯ್ಯ, ನವೀನ್ ಇದ್ದರು.