Advertisement
ಹೌದು ಎನ್ನುತ್ತಿವೆ ರಷ್ಯಾದ ಸರಕಾರಿ ಸ್ವಾಮ್ಯದ ಮಾಧ್ಯಮ. “ಸಮರನೌಕೆಯ ನಾಶ ದೊಂದಿಗೆ ಮೂರನೇ ವಿಶ್ವಯುದ್ಧ ಈಗ ತಾನೇ ಶುರುವಾಗಿದೆ’ ಎಂದು ರಷ್ಯಾದ ಮಾಧ್ಯಮ ಶುಕ್ರವಾರ ಘೋಷಿಸಿದೆ. ಕಪ್ಪು ಸಮುದ್ರದ ದಿಗ್ಗಜನೆಂದೇ ಕರೆಯಲ್ಪಡುತ್ತಿದ್ದ “ಮಾಸ್ಕೊವಾ’ ನೌಕೆಯು ಬೆಂಕಿ ಅವಘಡದಿಂದ ಹಾನಿಗೀಡಾಯಿತು ಎಂದು ರಷ್ಯಾ ಹೇಳಿತ್ತಾದರೂ, ತಮ್ಮ ನೆಪ್ಟ್ಯೂನ್ ಕ್ಷಿಪಣಿಯ ಮೂಲಕ ಅದನ್ನು ಧ್ವಂಸಗೈದೆವು ಎಂದು ಉಕ್ರೇನ್ ಹೇಳಿಕೊಂಡಿತ್ತು. ಇದು ರಷ್ಯಾದ ಆಕ್ರೋಶಕ್ಕೆ ಕಾರಣವಾಗಿದೆ.
Related Articles
Advertisement
ಬಸ್ ಮೇಲೆ ದಾಳಿ: 7 ಸಾವು : ಯುದ್ಧಪೀಡಿತ ಪೂರ್ವ ಉಕ್ರೇನ್‌ನ ಇಝಿ³ನ್ ಜಿಲ್ಲೆಯಲ್ಲಿ ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಹೊತ್ತೂಯ್ಯುತ್ತಿದ್ದ ಬಸ್‌ನ ಮೇಲೆಯೇ ರಷ್ಯಾ ಸೈನಿಕರು ದಾಳಿ ನಡೆಸಿದ್ದಾರೆ. ಪರಿಣಾಮ 7 ಮಂದಿ ನಾಗರಿಕರು ಮೃತಪಟ್ಟಿದ್ದು, 27ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೀವ್ ಹೊರಭಾಗದ ಲ್ಲಿರುವ ಉಕ್ರೇನ್‌ನ ಕ್ಷಿಪಣಿ ಉತ್ಪಾದನ ಘಟಕದ ಮೇಲೆ ರಷ್ಯಾ ಶುಕ್ರವಾರ ದಾಳಿ ನಡೆಸಿದೆ.
ಫಿನ್ಲಂಡ್, ಸ್ವೀಡನ್‌ಗೂ ರಷ್ಯಾ ದಾಳಿ ಎಚ್ಚರಿಕೆಅಮೆರಿಕ ನೇತೃತ್ವದ ನ್ಯಾಟೋಗೇನಾದರೂ ಸೇರ್ಪಡೆಗೊಂಡರೆ ಪರಿಣಾಮ ನೆಟ್ಟಗಿರಲ್ಲ ಎಂದು ತನ್ನ ನೆರೆಯ ದೇಶಗಳಾದ ಫಿನ್ಲಂಡ್ ಮತ್ತು ಸ್ವೀಡನ್‌ಗೆ ರಷ್ಯಾ ಎಚ್ಚರಿಕೆ ನೀಡಿದೆ. ಆಯ್ಕೆ ನಿಮಗೆ ಬಿಟ್ಟಿದ್ದೇವೆ. ನ್ಯಾಟೋ ಸೇರ್ಪಡೆಯತ್ತ ನೀವು ಹೆಜ್ಜೆಯಿಟ್ಟರೆ ಅದರ ಪರಿಣಾಮ ನಿಮ್ಮ ಮೇಲೆ ಮತ್ತು ಇಡೀ ಯುರೋಪ್ ಮೇಲೆ ಹೇಗಿರುತ್ತದೆ ಎಂಬುದನ್ನು ಯೋಚಿಸಿ ನಿರ್ಧಾರ ಕೈಗೊಳ್ಳಿ. ಹಾಗೇನಾದರೂ ಆದರೆ ಅಣ್ವಸ್ತ್ರಗಳು ಹಾಗೂ ಹೈಪರ್‌ಸಾನಿಕ್‌ಗಳ ನಿಯೋಜನೆಯನ್ನೂ ಮಾಡಬೇಕಾಗುತ್ತದೆ ಎಂದೂ ರಷ್ಯಾ ವಿದೇಶಾಂಗ ಇಲಾಖೆ ಬೆದರಿಕೆ ಹಾಕಿದೆ. ಅಮೆರಿಕದ ಮೇಲೂ ಗರಂ
ಉಕ್ರೇನ್‌ಗೆ ಶಸ್ತ್ರಾಸ್ತ್ರಗಳ ಸರಬರಾಜನ್ನು ಹೀಗೇ ಮುಂದು ವರಿಸಿದರೆ ಅದರ ಪರಿಣಾಮ ಎದುರಿಸಬೇಕಾದೀತು ಎಂದು ಅಮೆರಿಕಕ್ಕೂ ರಷ್ಯಾ ಎಚ್ಚರಿಕೆ ನೀಡಿದೆ. ಬೇಜವಾಬ್ದಾರಿಯುತವಾಗಿ ನೀವು ಉಕ್ರೇನ್‌ಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದೀರಿ. ಇದು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ಭದ್ರತೆಗೆ ಊಹಿಸಲಾಗದಷ್ಟು ಸಮಸ್ಯೆ ತಂದೊಡ್ಡಲಿದೆ. ಕೂಡಲೇ ಇದನ್ನು ನಿಲ್ಲಿಸಿ ಎಂದು ಹೇಳಿದೆ. ಸಮರಾಂಗಣದಲ್ಲಿ ಕೇವಲ 24 ಗಂಟೆಗಳಲ್ಲಿ 39 ಸೈನಿಕರು, 4 ವಾಹನಗಳನ್ನು ಕಳೆದುಕೊಂಡ ಪುತಿನ್ ಪಡೆ ಬೆಲ್ಗರೋಡ್‌ನಲ್ಲಿ ಉಕ್ರೇನ್‌ನ ಶೆಲ್ ದಾಳಿಯಿಂದ 20 ಕಟ್ಟಡಗಳು, ಶಾಲೆಗಳಿಗೆ ಹಾನಿ: ರಷ್ಯಾ ಆರೋಪ ಫ್ರಾನ್ಸ್‌ನ ರೇಡಿಯೋ ಆರ್‌ಎಫ್ಐ ವೆಬ್‌ಸೈಟ್ ಹ್ಯಾಕ್ ಮಾಡಿರುವುದಾಗಿ ಘೋಷಿಸಿದ ರಷ್ಯಾ ಯುದ್ಧದಿಂದಾಗಿ 50 ಲಕ್ಷ ಮಂದಿ ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ ರುಬಿಜ್ನೆ, ಪೋಪಸ್ನಾ ಮತ್ತು ಮರಿಯುಪೋಲ್ ವಶಕ್ಕೆ ಪಡೆಯುವತ್ತ ಮುನ್ನುಗ್ಗಿದ ಪುತಿನ್ ಪಡೆ ಮರಿಯುಪೋಲ್‌ನಲ್ಲೂ ದಾಳಿ ತೀವ್ರಗೊಳಿಸಿದ ರಷ್ಯಾ. ದೀರ್ಘವ್ಯಾಪ್ತಿಯ ಕ್ಷಿಪಣಿಗಳ ಬಳಸಿ ದಾಳಿ . ರಷ್ಯಾದವರು ನಮಗೆ ಗರಿಷ್ಠವೆಂದರೆ ಐದೇ ದಿನ ಬದುಕಿರುತ್ತೀರಿ ಎಂದಿದ್ದರು. ಆದರೆ, ಉಕ್ರೇನಿಯನ್ನರಾದ ನಾವು 50 ದಿನಗಳ ಯುದ್ಧದಲ್ಲಿ ಬದುಕುಳಿದಿದ್ದೇವೆ ಎಂದು ಹೇಳಲು ಹೆಮ್ಮೆ ಪಡುತ್ತೇವೆ.
– ವೊಲೊಡಿಮಿರ್ ಝೆಲೆನ್‌ಸ್ಕಿ, ಉಕ್ರೇನ್ ಅಧ್ಯಕ್ಷ