Advertisement
ಆರಂಭದಲ್ಲಿ ಕೋವಿಡ್ ಬಾವಲಿಗಳ ಮೂಲಕ ಹರಡಿತ್ತು ಎಂದು ಹೇಳಲಾಗಿತ್ತು. ಬಳಿಕ ಇತರ ಪ್ರಾಣಿಗಳೂ ಇದನ್ನು ಹರಡಬಹುದು ಎಂದು ಅಧ್ಯಯನಗಳು ತಿಳಿಸಿದ್ದವು. ಇಂತಹ ಪರಿಸ್ಥಿತಿಯಲ್ಲಿ ಮಾಂಸಾಹಾರಿಗಳೂ ಜಾಗೃತೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂಬುದನ್ನು ಮನಗಂಡ ಚೀನ ತನ್ನ ವೆಟ್ ಮಾರ್ಕೆಟ್ ಸೇರಿದಂತೆ ಎಲ್ಲ ಮಾಂಸ ಮಾರಾಟದ ಅಂಗಡಿಗಳನ್ನು ಅನ್ನು ಮುಚ್ಚಲಾಗಿತ್ತು.
ನೀವು ಮಧುಮೇಹವನ್ನು ನಿಯಂತ್ರಿಸಲು ಬಯಸುವವರಾಗಿದ್ದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದಾದರೆ ಒಂದು ದಿನದ ಆಹಾರದಲ್ಲಿ ಶೇ. 50ಕ್ಕಿಂತ ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಬೇಕು ಎಂದು ವಿಯೆಟ್ನಾಂನ ವೈದ್ಯಕೀಯ ಪೌಷ್ಟಿಕ ತಜ್ಞ ಡಾ. ಬಿಸ್ವರಪ್ ಚೌಧರಿ ಹೇಳುತ್ತಾರೆ. ವಿಶ್ವ ಸಸ್ಯಾಹಾರಿ ದಿನವು ಸಸ್ಯಾಹಾರಿ ಆಹಾರವನ್ನು ತಿನ್ನಲು ಮತ್ತು ಅದರ ಪ್ರಯೋಜನಗಳನ್ನು ವಿವರಿಸುವ ಸಲುವಾಗಿ ಪ್ರಾರಂಭಗೊಂಡಿತು. 1977ರ ಅಕ್ಟೋಬರ್ 1ರಂದು ನಾರ್ತ್ ಅಮೆರಿಕನ್ ವೆಜಿಟೇರಿಯನ್ ಸೊಸೈಟಿ ಈ ಉಪಕ್ರಮವನ್ನು ಪ್ರಾರಂಭಿಸಿತು.
ಮಾಂಸಾಹಾರಿ ಆಹಾರಕ್ಕಿಂತ ಸಸ್ಯಾಹಾರಿ ಆಹಾರವು ಆರೋಗ್ಯಕರವಾಗಿದೆ ಎಂದು ಜನರಿಗೆ ಮನವರಿಕೆ ಮಾಡುವುದು ಈ ದಿನದ ಗುರಿಯಾಗಿದೆ. ಸಸ್ಯಾಹಾರಿ ಆಹಾರವು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಹೆಚ್ಚಿಸುವುದಿಲ್ಲ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನಾರುಗಳು ಮತ್ತು ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ.
Related Articles
Advertisement
4 ಹೊಸ ಸೋಂಕುಗಳಲ್ಲಿ 3 ಪ್ರಾಣಿಗಳಿಂದಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್‌ಶನ್ (ಸಿಡಿಸಿ) ಪ್ರಕಾರ, ನಾವು ಪ್ರತಿದಿನ ಪ್ರಾಣಿಗಳ ಸಂಪರ್ಕಕ್ಕೆ ಬರುತ್ತೇವೆ. ಆದರೆ ಪ್ರಾಣಿಗಳಲ್ಲಿ ವಾಸಿಸುವ ಕೆಲವು ಸೂಕ್ಷ್ಮಜೀವಿಗಳು ನಮ್ಮನ್ನು ರೋಗಿಗಳನ್ನಾಗಿ ಮಾಡಬಹುದು. ಮನುಷ್ಯರಿಗೆ ಪ್ರಾಣಿಗಳ ಮೂಲಕ ಹರಡುವ ಸೂಕ್ಷ್ಮಜೀವಿಗಳಿಂದ ಉಂಟಾಗುವ ರೋಗಗಳನ್ನು ಜೂನೋಟಿಕ್ ಎಂದು ಕರೆಯಲಾಗುತ್ತದೆ. ಈ ರೋಗಾಣುಗಳು ಕೆಲವು ಸಂದರ್ಭ ಸಾವಿಗೆ ಕಾರಣವಾಗುತ್ತವೆ. ಸಿಡಿಸಿ ಪ್ರಕಾರ, ಜೂನೋಟಿಕ್ ಕಾಯಿಲೆಗಳು ಸಾಮಾನ್ಯವಾಗಿದೆ. ವಿಜ್ಞಾನಿಗಳು ಹೇಳುವಂತೆ 10ರಲ್ಲಿ 6ಕ್ಕೂ ಹೆಚ್ಚು ಸೋಂಕುಗಳು ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ ಪ್ರತಿ 4 ಹೊಸ ಕಾಯಿಲೆಗಳಲ್ಲಿ 3 ಪ್ರಾಣಿಗಳಿಂದ ಬರುತ್ತವೆ. ಮಾಂಸಾಹಾರಕ್ಕಾಗಿ ಸಸ್ಯಾಹಾರ ನಷ್ಟ
ಪೆಟಾ ನೀಡುವ ಅಂಕಿಅಂಶಗಳ ಪ್ರಕಾರ, ಪ್ರಾಣಿಗಳು ಹೆಚ್ಚು ಧಾನ್ಯಗಳನ್ನು ಆಹಾರವಾಗಿ ಸೇವಿಸುತ್ತವೆ. ಮಾತ್ರವಲ್ಲದೇ ಕಡಿಮೆ ಮಾಂಸ, ಡೈರಿ ಉತ್ಪನ್ನಗಳು ಅಥವಾ ಮೊಟ್ಟೆಗಳನ್ನು ಒದಗಿಸುತ್ತವೆ. ಒಂದು ಕಿಲೋ ಮಾಂಸಕ್ಕಾಗಿ ಪ್ರಾಣಿಗಳು 10 ಕೆ.ಜಿ. ವರೆಗೆ ಧಾನ್ಯವನ್ನು ನೀಡಬೇಕಾಗುತ್ತದೆ. ವರ್ಲ್ಡ್ ವಾಚ್ ಇನ್‌ಸ್ಟಿಟ್ಯೂಟ್ ಪ್ರಕಾರ, ಜಗತ್ತಿನಲ್ಲಿ 6ರಲ್ಲಿ 1 ಜನರು ಪ್ರತಿದಿನ ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಾಂಸವನ್ನು ಉತ್ಪಾದಿಸುವುದು ಧಾನ್ಯಗಳನ್ನು ದುರ್ಬಳಕೆ ಮಾಡಿದಂತಾಗುತ್ತದೆ. ಅದೇ ಧಾನ್ಯಗಳನ್ನು ಮನುಷ್ಯರು ನೇರವಾಗಿ ಬಳಸಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಸಸ್ಯ ಆಧಾರಿತ ಆಹಾರವು ಜಗತ್ತಿನಲ್ಲಿ ಹಸಿವನ್ನು ನೀಗಿಸುತ್ತದೆ ಎಂದು ಪೆಟಾದ ವೆಬ್‌ಸೈಟ್ ಹೇಳುತ್ತದೆ. 2050ರ ಹೊತ್ತಿಗೆ ಅಂದಾಜು 900 ಮಿಲಿಯನ್ ಜನರಿಗೆ ಭೂಮಿಯಲ್ಲಿ ಸಾಕಷ್ಟು ಆಹಾರ ಲಭ್ಯವಾಗಲಿದೆ. ಧಾನ್ಯ ಉತ್ಪಾದನೆಯ ಶೇ. 40ಕ್ಕಿಂತ ಹೆಚ್ಚು ಆಹಾರವನ್ನು ಪ್ರಾಣಿಗಳಿಗಿಂತ ಹೆಚ್ಚಾಗಿ ಮನುಷ್ಯರೇ ಬಳಸಲ್ಪಟ್ಟಾಗ ಮಾತ್ರ ಇದು ಸಾಧ್ಯವಾಗಲಿದೆ.
ಪೆಟಾ ಇಂಡಿಯಾದ ಪ್ರಕಾರ, ಶುದ್ಧ ಸಸ್ಯಾಹಾರಿ ಆಹಾರಕ್ಕೆ ಪ್ರತಿದಿನ 1,137 ಲೀಟರ್ ನೀರು ಬೇಕಾಗುತ್ತದೆ. ಆದರೆ ಮಾಂಸ ಆಧಾರಿತ ಆಹಾರಗಳನ್ನು ತಯಾರಿಸಲು ಪ್ರತಿದಿನ 15,000 ಲೀಟರ್‌ಗಿಂತ ಹೆಚ್ಚು ನೀರು ಬೇಕಾಗುತ್ತದೆ. ಅನೇಕ ರೋಗಗಳಿಗೆ ಮಾಂಸಾಹಾರ ಕಾರಣ
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತಿವರ್ಷ 100 ಮಿಲಿಯನ್ ಜನರು ಜುನೋಸಿಸ್‌ನಿಂದ ರೋಗಗಳಿಂದ ಬಳಲುತ್ತಿದ್ದಾರೆ. ಮಾತ್ರವಲ್ಲದೇ ಲಕ್ಷಾಂತರ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಪೆಟಾ ಪ್ರಕಾರ ಮಾಂಸ, ಡೈರಿ ಉತ್ಪನ್ನಗಳು ಮತ್ತು ಮೊಟ್ಟೆಗಳನ್ನು ಸೇವಿಸುವುದರಿಂದ ಹೃದ್ರೋಗ, ಬೊಜ್ಜು, ಕ್ಯಾನ್ಸರ್, ಮಧುಮೇಹ ಮತ್ತು ದುರ್ಬಲರಾಗಬಹುದು. ಸಸ್ಯಾಹಾರಿ ಆಹಾರವನ್ನು ತೆಗೆದುಕೊಳ್ಳುವ ಜನರಲ್ಲಿ ಕೆಲವು ರೀತಿಯ ಕ್ಯಾನ್ಸರ್ ಬರುವ ಸಾಧ್ಯತೆಗಳಿವೆ. ಆದರೆ ಸಸ್ಯಹಾರಗಳನ್ನು ಸೇರಿಸುವುದರಿಂದ ಶೇ. 50ರಷ್ಟು ಕಡಿಮೆಯಾಗುತ್ತವೆ ಎಂದು ಸಂಶೋಧನೆ ಕಂಡುಹಿಡಿದಿದೆ. ಎಲ್ಲರೂ ಸಸ್ಯಾಹಾರಿಗಳಾಗಿದ್ದರೆ?
2016ರಲ್ಲಿ, ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯ ಅಧ್ಯಯನದ ಪ್ರಕಾರ ಪ್ರಪಂಚದ ಇಡೀ ಜನಸಂಖ್ಯೆಯು ಮಾಂಸವನ್ನು ಬಿಟ್ಟು ಸಸ್ಯಾಹಾರಿ ಆಹಾರವನ್ನು ಮಾತ್ರ ತಿನ್ನಲು ಪ್ರಾರಂಭಿಸಿದರೆ, 2050ರ ವೇಳೆಗೆ ಹಸಿರು ಮನೆ ಅನಿಲಗಳ ಹೊರಸೂಸುವಿಕೆಯನ್ನು ಶೇ. 70ರಷ್ಟು ಕಡಿಮೆ ಮಾಡಬಹುದು ಎಂದು ಅದು ಹೇಳಿದೆ. ವಿಶ್ವದ ಅಂದಾಜು 12 ಬಿಲಿಯನ್ ಎಕ್ರೆ ಭೂಮಿಯನ್ನು ಕೃಷಿ ಮತ್ತು ಸಂಬಂಧಿತ ಕೆಲಸಗಳಿಗೆ ಬಳಸಲಾಗುತ್ತದೆ. ಈ ಭೂಮಿಯಲ್ಲಿ ಶೇ. 68 ಅನ್ನು ಪ್ರಾಣಿಗಳಿಗಾಗಿ ಮೀಸಲಿಡಲಾಗಿದೆ. ಹೀಗಾಗಿ ಜಗತ್ತಿನಲ್ಲಿರುವವರು ಎಲ್ಲರೂ ಸಸ್ಯಾಹಾರಿಗಳಾಗಿದ್ದರೆ ಶೇ. 80ರಷ್ಟು ಭೂಮಿ ಕಾಡುಗಳಾಗಿ ಬದಲಾಗುತ್ತಿದ್ದವು ಎಂಬ ವಾದವೂ ಇದೆ. ಇದು ಕಾರ್ಬನ್ ಡೈಆಕ್ಸೆ„ಡ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲದೆ ಹವಾಮಾನ ಬದಲಾವಣೆಯನ್ನು ಎದುರಿಸಲು ಸಹಾಯ ಮಾಡುತ್ತದೆ. ಉಳಿದ ಶೇ. 20ರಷ್ಟು ಭೂಮಿಯನ್ನು ಕೃಷಿಗೆ ಬಳಸಲಾಗುತ್ತದೆ. ಆದರೆ ಈಗ ಸಾಗುವಳಿ ಮಾಡುವ ಭೂಮಿಯ ಮೂರನೇ ಒಂದು ಭಾಗದಷ್ಟು ಪ್ರಾಣಿಗಳಿಗೆ ಮೇವು ಬೆಳೆಯಲಾಗುತ್ತದೆ. vegetarian and vegan ನಡುವಿನ ವ್ಯತ್ಯಾಸ ಗೊತ್ತೆ?
ಈ ಎರಡು ಪದಗಳನ್ನು ನಾವು ಯಾವತ್ತೂ ಕೇಳಿರುತ್ತೇವೆ. ಆದರೆ ಇವುಗಳ ಅರ್ಥದ ಕುರಿತು ನಮಗೆ ಯಾವತ್ತೂ ಗೊಂದಲ ಇದೆ. ಪೆಟಾ ಪ್ರಕಾರ, vegetarian ಗಳು ಆಹಾರವನ್ನು ತೆಗೆದುಕೊಳ್ಳುವ ಅದರಲ್ಲಿ ಪ್ರಾಣಿಗಳ ಯಾವುದೇ ಅಂಶ ಆಹಾರದಲ್ಲಿ ಸೇರಿಸಿಕೊಳ್ಳುವುದಿಲ್ಲ. ಆದರೆ veganಗಳು ಎಂದರೆ ಮೊಟ್ಟೆ, ಹಾಲು, ಚೀಸ್ ಮೊದಲಾದವುಗಳನ್ನು ಆಹಾರದಲ್ಲಿ ಬಳಸುವವರು ವೇಗನ್ಸ್ ಆಗಿರುತ್ತಾರೆ. ಕಾರ್ತಿಕ್ ಅಮೈ