Advertisement

“ಟೈಮ್ಸ್‌’ಶ್ರೇಷ್ಠ ವಿವಿಗಳ ಪಟ್ಟಿಯಲ್ಲಿ ಭಾರತದ 56 ಸಂಸ್ಥೆ!

10:11 AM Sep 13, 2019 | Team Udayavani |

– ಕಳೆದ ವರ್ಷದ ಪಟ್ಟಿಗೆ ಹೋಲಿಸಿದರೆ ಭಾರತದ 7 ವಿವಿಗಳು ಹೊಸದಾಗಿ ಸೇರ್ಪಡೆ
– ಕಳೆದ ವರ್ಷದ ಪಟ್ಟಿಯಲ್ಲಿ 49 ವಿವಿಗಳಷ್ಟು ಇದ್ದ ಭಾರತದ ಪ್ರಾತಿನಿಧ್ಯ ಈಗ 56ಕ್ಕೆ

Advertisement

ಲಂಡನ್‌: ಪ್ರತಿಷ್ಠಿತ ಟೈಮ್ಸ್‌ ನಿಯತಕಾಲಿಕೆಯು ವಾರ್ಷಿಕವಾಗಿ ಸಿದ್ಧಪಡಿಸುವ “ಟೈಮ್ಸ್‌ ಹೈಯರ್‌ ಎಜುಕೇಷನ್‌ ವರ್ಲ್x ಯೂನಿವರ್ಸಿಟಿ ರ್‍ಯಾಂಕಿಂಗ್ಸ್‌’ ಪಟ್ಟಿಯನ್ನು ಪರಿಷ್ಕರಿಸಿದ್ದು, ಅದರಲ್ಲಿ ಭಾರತದ 7 ವಿಶ್ವವಿದ್ಯಾಲಯಗಳು ಹೊಸದಾಗಿ ಸೇರ್ಪಡೆಗೊಂಡಿವೆ.

ವಿಶ್ವದ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿನ ಬೋಧನಾ ಗುಣಮಟ್ಟ, ಸಂಶೋಧನೆಗಳಿಗೆ ಇರುವ ವಿಪುಲ ಅವಕಾಶ ಹಾಗೂ ಅಲ್ಲಿಂದ ತೇರ್ಗಡೆಯಾಗುವ ವಿದ್ಯಾರ್ಥಿಗಳಿಗೆ ಉದ್ಯೋಗ ಖಾತ್ರಿ – ಇವೇ ಮುಂತಾದವುಗಳನ್ನು ಆಧರಿಸಿ ತಯಾರಿಸಲಾಗುವ ಈ ಪಟ್ಟಿಯಲ್ಲಿ ಕಳೆದ ವರ್ಷ ಭಾರತದ 49 ವಿಶ್ವವಿದ್ಯಾಲಯಗಳು ಕಾಣಿಸಿಕೊಂಡಿದ್ದವು. ಈ ಬಾರಿ ಅವುಗಳ ಸಂಖ್ಯೆ 56ಕ್ಕೆ ಏರಿದೆ.

ಟಾಪ್‌ 300ರೊಳಗೆ ಬಾರದ ಐಐಎಸ್ಸಿ 
ವಿಪರ್ಯಾಸವೆಂದರೆ, ಈ ಬಾರಿಯ ಪಟ್ಟಿಯಲ್ಲಿ ಟಾಪ್‌ 300 ವಿಶ್ವವಿದ್ಯಾಲಯಗಳಲ್ಲಿ ಭಾರತದ ಯಾವುದೇ ವಿಶ್ವವಿದ್ಯಾಲಯ ಕಾಣಿಸಿಕೊಂಡಿಲ್ಲ. ಭಾರತದಲ್ಲಿ ಅಗ್ರ ವಿವಿಯೆಂದೇ ರ್‍ಯಾಂಕಿಂಗ್‌ ಪಡೆದಿರುವ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಕೂಡ ಪಟ್ಟಿಯ 301ರಿಂದ 350ರ ಆವರಣದಲ್ಲಿ ಕಾಣಿಸಿಕೊಂಡಿದೆ. ಕಳೆದ ವರ್ಷದ ಪಟ್ಟಿಯಲ್ಲಿ 250ರಿಂದ 300ರ ಆವರಣದಲ್ಲಿ ಐಐಎಸ್‌ಸಿ ಕಾಣಿಸಿಕೊಂಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next