ಎಚ್.ಡಿ.ಕೋಟೆ: ವಿಶ್ವದಲ್ಲಿ ಕ್ಷಯರೋಗ ಪೀಡಿತರು ಪ್ರತಿ 3ನಿಮಿಷಕ್ಕೆ ಒಬ್ಬರು ಮೃತರಾಗು ತ್ತಿದ್ದು ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಮಹಮ್ಮದ್ ಸಿರಾಜ್ ತಿಳಿಸಿದರು.
ವಿಶ್ವ ಕ್ಷಯರೋಗ ದಿನದ ಅಂಗವಾಗಿ ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಅರಿವು ಜಾಥಾಕ್ಕೆ ಹಸಿರುನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಬಹುಸಂಖ್ಯೆ ಯಲ್ಲಿ ಆದಿವಾಸಿಗಳಿದ್ದು ಹೆಚ್ಚೆಚ್ಚು ಅರಿವುಮೂಡಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.
ಲಕ್ಷಣಗಳು: ವಾರಕ್ಕಿಂತ ಹೆಚ್ಚಿನ ದಿನ ಕೆಮ್ಮು, ಕಫದಲ್ಲಿ ರಕ್ತ ಕಂಡು ಬಂದರೆ ಕೂಡಲೇ ವೈದ್ಯ ರಬಳಿ ತಪಾಸಣೆಗೆ ಒಳಗಾಗಬೇಕು. ಕೋವಿಡ್ ಮಾರಿಯಷ್ಟೇ ಕ್ಷಯರೋಗ ಕೂಡ ಮಾರಕವಾದಕಾಯಿಲೆಯಾಗಿದೆ. ಅಸಡ್ಡೆ ತೋರದೇ ಆರಂಭದಲ್ಲಿಯೇ ತಪಾಸಣೆ ನಡೆಸಿಕೊಂಡುಉಚಿತ ಚಿಕಿತ್ಸೆ ಪಡೆದುಕೊಂಡರೆ 6ತಿಂಗಳಲ್ಲಿಕಾಯಿಲೆ ಗುಣಪಡಿಸಿ ಕೊಳ್ಳಬಹುದು, ಕ್ಷಯರೋಗ ಪೀಡಿತರಿಗೆ ಸರ್ಕಾರದ ವತಿಯಿಂದ6ತಿಂಗಳ ತನಕ 500ರೂ. ಧನಸಹಾಯ ಕೂಡಸರ್ಕಾರ ಮಂಜೂರು ಮಾಡುತ್ತದೆ ಎಂದರು.
ಸಹಕಾರ ನೀಡಿ: ಕ್ಷಯ ಕುರಿತು ಅರಿವು ಮೂಡಿಸಲು ಸರ್ಕಾರಿ-ಖಾಸಗಿ ವೈದ್ಯರು ಮತ್ತುಆಶಾ ಕಾರ್ಯಕರ್ತೆಯರಿಗೆ ತರಬೇತಿ ನೀಡಿಮನೆಮನೆಗಳಿಗೆ ಭೇಟಿ ನೀಡಿ ಸಮಗ್ರ ಮಾಹಿತಿನೀಡಲಾಗುತ್ತಿದೆ. ಈ ಮೂಲಕ ಕ್ಷಯ ಮುಕ್ತ ರಾಷ್ಟ್ರನಿರ್ಮಾಣಕ್ಕೆ ಸಮುದಾಯ ಸಹಕಾರ ನೀಡಬೇಕೆಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ರವಿ ಕುಮಾರ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಭಾಸ್ಕರ್, ನೋಡಲ್ ಅಧಿಕಾರಿ ಉಮೇಶ್, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಆಸ್ಪತ್ರೆ ಡಾ.ಡೆನ್ನಿಸ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಉದಯಕುಮಾರ್, ನಾಗೇಂದ್ರಸ್ವಾಮಿ, ನಾಗರಾಜು, ಸರಳ, ಆಶಾ ಕಾರ್ಯಕರ್ತೆಯರು ಇದ್ದರು.