Advertisement
ಚೀನಕ್ಕೆ 2-3 ಅಂತರದಿಂದ ಸೋತ ಬಳಿಕ ಲಯ ಕಂಡುಕೊಂಡ ಭಾರತದ ವನಿತೆಯರು ಹಂಗೇರಿಯನ್ನು 3-2ರಿಂದ ಮಣಿಸಿದ್ದರು. ಇದೀಗ ಉಜ್ಬೆಕಿಸ್ಥಾನಕ್ಕೆ 3-0 ಸೋಲುಣಿಸಿದರು. ಐಹಿಕಾ ಮುಖರ್ಜಿ ಮತ್ತು ಶ್ರೀಜಾ ಅಕುಲಾ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಇವರ ಬದಲು ಅರ್ಚನಾ ಕಾಮತ್ ಮತ್ತು ದಿಯಾ ಚಿತಾಲೆ ಆಡಲಿಳಿದರು. ಇಬ್ಬರೂ ಸಿಂಗಲ್ಸ್ ಜಯಿಸಿದರು. ಇನ್ನೊಂದು ಗೆಲುವನ್ನು ತಂದಿತ್ತವರು ಮಣಿಕಾ ಬಾತ್ರಾ.
ಅನುಭವಿ ಆಟಗಾರ ಅಚಂತ ಶರತ್ ಕಮಲ್, ಹಾಲಿ ರಾಷ್ಟ್ರೀಯ ಚಾಂಪಿಯನ್ ಹರ್ಮೀತ್ ದೇಸಾಯಿ ಹಾಗೂ ಜಿ. ಸಥಿಯನ್ ಅವರನ್ನೊಳಗೊಂಡ ಭಾರತದ ಪುರುಷರ ತಂಡ ಆತಿಥೇಯರ ಸವಾಲನ್ನು ಮೆಟ್ಟಿ ನಿಲ್ಲಲು ವಿಫಲವಾಯಿತು. ಮೂವರೂ ಸೋಲನುಭವಿಸಿದರು.
Related Articles
Advertisement