Advertisement

17ಪ್ರವಾಸಿ ತಾಣಗಳಿಗೆ ವಿಶ್ವ ತಾಣ ಸ್ಥಾನಮಾನ

12:01 AM Jul 06, 2019 | Team Udayavani |

ಪ್ರವಾಸೋದ್ಯಮ, ಸಂಸ್ಕೃತಿ ಸಚಿವಾಲಯಗಳ ಮೂಲಸೌಕರ್ಯ ಮತ್ತು ಪ್ರಚಾರಕ್ಕೆ ಶೇ.1.82 ರಿಂದ 7ರಷ್ಟು ಆರ್ಥಿಕ ನೆರವನ್ನು ಬಜೆಟ್‌ನಲ್ಲಿ ಹೆಚ್ಚಿಸಲಾಗಿದೆ.ಪ್ರವಾಸ ಉದ್ಯಮ ಸೌಕರ್ಯ ನಿರ್ಮಾಣಕ್ಕಾಗಿ 1,378.53 ಕೋಟಿ ರೂ., ಪ್ರಚಾರಕ್ಕಾಗಿ 575.50 ರೂ. ಸಂಸ್ಕೃತಿ ಸಚಿವಾಲಯಕ್ಕೆ ಸೌಲಭ್ಯ ಗಳಿಗೆ 875.33 ಕೋಟಿ ರೂ. ಮೀಸಲಿಡಲಾಗಿದೆ.

Advertisement

ಅಲ್ಲದೆ, ದೇಶದ 17 ಸಾಂಪ್ರದಾಯಿಕ ಪ್ರವಾಸಿ ತಾಣಗಳನ್ನು ವಿಶ್ವದರ್ಜೆಯ ತಾಣಗಳಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 50,000 ಕುಶಲ ಕರ್ಮಿಗಳು ಆರ್ಥಿಕ ಮೌಲ್ಯ ಸರಪಳಿಯಲ್ಲಿ ಬರಲು ಸಾಧ್ಯವಾಗುವಂತೆ ನೂರು ಹೊಸ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುವುದು.

ಯುವ ಜನತೆಗೆ ಆರ್ಥಿಕ ನೆರವು: ಕೇಂದ್ರ ಬಜೆಟ್‌ನಲ್ಲಿ ಯುವಜನತೆಯ ಅನುಕೂಲಕ್ಕಾಗಿ ನವೋದ್ಯಮ(ಸ್ಟಾರ್ಟ್‌ ಅಪ್‌) ಸ್ಥಾಪಿಸುವವರಿಗೆ ನೆರವು ಕಲ್ಪಿಸ ಲಾಗಿದೆ. ಖೇಲೊ ಇಂಡಿಯಾ ಸ್ಕೀಮ್‌ನಿಂದ ರಾಷ್ಟ್ರೀಯ ಕ್ರೀಡಾ ಶಿಕ್ಷಣ ಮಂಡಳಿ ಮೂಲಕ ಕ್ರೀಡಾಪಟುಗಳಿಗೆ ಮಾನ್ಯತೆ, ಆರ್ಥಿಕ ನೆರವು.

ಯುವಕರ ಆಸಕ್ತಿಗೆ ಅನುಗುಣವಾಗಿ ಕೌಶಲ್ಯ ವನ್ನು ಹೆಚ್ಚಿಸಲು ಸಂವಹನ, ಆರಿಸಿಕೊಂಡ ಕ್ಷೇತ್ರಕ್ಕೆ ಸಂಬಂಧಿ ಸಿದ ವಿವಿಧ ತರಬೇತಿಗಳನ್ನು ನೀಡಿ ಉದ್ಯೋಗಕ್ಕೆ ಅವಕಾಶ. ಸ್ಟಾಂಡ್‌ ಅಪ್‌ ಇಂಡಿಯಾ ಸ್ಕೀಮ್‌ ಮೂಲಕ ಯುವಕರ ಆರ್ಥಿಕ ಅಭಿವೃದ್ಧಿಗೆ ಮಾನ್ಯತೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next