Advertisement

ವಿಶ್ವ ಪ್ರವಾಸೋದ್ಯಮ ದಿನ: ಓದುಗರು ಭೇಟಿ ಕೊಟ್ಟ ಪ್ರವಾಸಿ ತಾಣಗಳು

08:26 AM Sep 28, 2019 | Sriram |

ಪ್ರವಾಸ ಹೋಗುವ ಆಸೆ, ಕನಸು ಯಾರಲ್ಲಿ ಇಲ್ಲ ಹೇಳಿ. ಕೆಲವೊಂದು ತಾಣಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಹೋಗಬೇಕೆಂಬ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಸುವರ್ಣ ಸಂಭ್ರಮದಲ್ಲಿರುವ ಉದಯವಾಣಿ ಪತ್ರಿಕೆ ವಿಶ್ವ ಪ್ರವಾಸೋದ್ಯಮ ದಿನದ ನಿಟ್ಟಿನಲ್ಲಿ ಓದುಗರಲ್ಲಿ ಅವರವರ ಕನಸಿನ ತಾಣದ ಕುರಿತಾಗಿ ಬರೆದು ಕಳುಹಿಸುವಂತೆ ತಿಳಿಸಿತ್ತು. ಸುಮಾರು 600 ಮಂದಿ ತಮ್ಮ ಕನಸಿನ ತಾಣಗಳ ಕುರಿತು ಬರೆದು ಕಳುಹಿಸಿದ್ದಾರೆ. ಆದರೆ ಕೆಲವರು ತಮ್ಮ ಹೆಸರು, ಊರು ಯಾವುದನ್ನೂ ಬರೆದಿಲ್ಲ. ಅಂಥವುಗಳನ್ನು ಪ್ರಕಟಿಸಿಲ್ಲ. ಇನ್ನು ಸಾಕಷ್ಟು ಮಂದಿ ಒಂದೇ ತಾಣವನ್ನು ಆರಿಸಿದ್ದರಿಂದ ಒಂದೊಂದನ್ನು ಆಯ್ಕೆ ಮಾಡಲಾಗಿದ್ದು, ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

Advertisement

ಕವಿಶೈಲ


ಕವಿಶೈಲ ಹೆಸರೇ ಹೇಳುವಂತೆ ಕವಿಮನೆ. ಅದನ್ನೊಮ್ಮೆ ನೋಡುವ ಆಸೆ ನನಗೆ . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಪ್ರತಿದಿನ ಮಂಜಿನಲ್ಲಿಯೇ ಮಿಂದು ಕಂಗೊಳಿಸುತ್ತಿರುವ ಕುವೆಂಪು ಅವರ ಹುಟ್ಟಿದ ಮನೆಯನ್ನು ನೋಡುವ ಆಸೆ ನನಗಿದೆ .ಎಂದು ನೋಡುವೆನು ಆ ಕವಿಯ ಮನೆ ಎಂದು ಕಾತುರದಿಂದ ಕಾಯುತ್ತಿದ್ದೇನೆ ಆದಷ್ಟು ಬೇಗ ಆ ಜಾಗವನ್ನು ನೋಡುವ ಅದೃಷ್ಟ ನನಗೆ ಒಲಿದು ಬರಲಿದೆ.
-ಬಿನಿ ರೋಡ್ರಿಗಸ್‌, ಬಂಟ್ವಾಳ

ನಾಡಿನ ಎತ್ತರದ ತಾಣ


ದಟ್ಟವಾದ ಮಂಜು, ತಣ್ಣಗೆ ಬೀಸುವ ಗಾಳಿ, ಹಸುರು ಹಾಸಿಗೆಯಂತ ಹುಲ್ಲು ಗಾವಲಿನ ಮುಳ್ಳಯ್ಯನ ಗಿರಿ ನನ್ನ ಕನಸಿನ ತಾಣ. ಚಿಕ್ಕಮಗಳೂರಿನ ಪಶ್ಚಿಮ ಘಟ್ಟದಲ್ಲಿರುವ ಕರ್ನಾಟಕದ ಅತಿ ಎತ್ತರದ ಈ ಗಿರಿಧಾಮಕ್ಕೆ ಹೋಗಬೇಕೆನ್ನುವುದು ನನ್ನ ಕನಸಾಗಿದೆ. ಅಲ್ಲಿನ ಪ್ರಕೃತಿಯೊಡನೆ ಬೆರೆತು ಹೋಗಿ, ಅಲ್ಲಿನ ಸೌಂದರ್ಯವನ್ನು ಆಸ್ವಾದಿಸುವ ಕಾತರದಲ್ಲಿದ್ದೇನೆ.
-ಜ್ಯೋತಿ , ಬದಿಯಡ್ಕ, ಕಾಸರಗೋಡು.  

ಪಂಚಕೂಟ ದೇವಾಲಯ


ಮಂಡ್ಯ ಜಿಲ್ಲೆಯ ಕಿಕ್ಕೇರಿ ಸಮೀಪದ ಗೋವಿಂದನ ಹಳ್ಳಿಯಲ್ಲಿರುವ ಅಪೂರ್ವವಾದ ಹೊಯ್ಸಳರ ಪಂಚಕೂಟ ದೇವಾಲಯವಾದ ಪಂಚಲಿಂಗೇಶ್ವರ ದೇವಾಲಯವನ್ನು ನೋಡಬೇಕೆಂಬ ಆಸೆಯಿದೆ. ಐದು ವಿಮಾನಗೋಪುರಗಳಿರುವ ಹೊಯ್ಸಳರ ಕಾಲದ ಒಂದೇ ಒಂದು ಪಂಚಕೂಟ ದೇವಾಲಯ ಇದಾಗಿರುವುದು ವಿಶೇಷ. ಈ ವರ್ಷವೇ ಬಿಡುವು ಮಾಡಿಕೊಂಡು ಹೋಗಿ ನೋಡಿಬರಬೇಕೆಂಬ ಆಸೆಯಿದೆ.
-ನಾಗರಾಜ ಖಾರ್ವಿ, ಬಂಟ್ವಾಳ

ಜೋಗ ಜಲಪಾತ


ಜಲಪಾತದ ಮೇಲಿನಿಂದ ಬೀಳುವ ನೀರನ್ನು ನೋಡಬೇಕು ಎಂಬ ಆಸೆ ನನ್ನಲ್ಲಿದೆ.ಅದಕ್ಕೆ ಒಮ್ಮೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಜೋಗ ಜಲಪಾತಕ್ಕೆ ಭೇಟಿ ನೀಡಬೇಕೆಂದಿದ್ದೇನೆ. ದಿನ ಪೂರ್ತಿ ಜಲಪಾತದ ನಾಲ್ಕು ಭಾಗಗಳಾದ ರಾಜ,ರೋರರ್‌, ರಾಕೆಟ್‌, ರಾಣಿಯನ್ನು ನೋಡಬೇಕು.ನೀರಿನ ಶಬ್ಧವನ್ನು ಕೇಳಿ ಅಲ್ಲಿನ ಪ್ರಕೃತಿ ಸೌಂದ ರ್ಯವನ್ನು ಸವಿಯಬೇಕು ಎಂಬುವುದು ನನ್ನ ಕನಸಾಗಿದೆ.
-ಸ್ವಾತಿ, ಶಿರ್ಲಾಲ್‌

Advertisement

ಮಂತ್ರಾಲಯ


ಅತೀ ಹೆಚ್ಚು ಭಕ್ತರು ಸಂದರ್ಶಿಸುವ ಮಂತ್ರಾಲಯದ ರಾಯರ ಬೃಂದಾವನದ ದರ್ಶನ ಮಾಡಬೇಕೆಂಬ ಆಸೆ ಹಲವು ವರ್ಷಗಳಿಂದ ಇದೆ. ಆದರೆ ಕಾರಾಣಾಂತರಗಳಿಂದ ಇದು ಸಾಧ್ಯವಾಗಿರಲಿಲ್ಲ. ಮನಸ್ಸಿಗೆ ನೆಮ್ಮದಿಯನ್ನು ನೀಡುವ ರಾಯರ ತಾಣಕ್ಕೆ ಈ ಬಾರಿ ದಸರಾ ರಜೆಯಲ್ಲಿ ಭೇಟಿ ನೀಡಿ, ದರ್ಶನ ಮಾಡಬೇಕೆಂಬ ಸಂಕಲ್ಪ ಹೊಂದಿದ್ದೇನೆ. ಆದಷ್ಟು ಬೇಗ ಕನಸು ನನಸಾಗಲಿ ಎಂಬುದೇ ನನ್ನ ಆಸೆ.
-ಅಶ್ವಥ್‌, ಬರಿಮಾರು, ಬಂಟ್ವಾಳ

ಕೇದಾರನಾಥ


ಜೀವನದಲ್ಲಿ ಒಮ್ಮೆ ಕಾಣಬೇಕು ಕೇದಾರನಾಥ. ಹೆಸರೇ ನೆಮ್ಮದಿಯನ್ನು ಸೂಚಿಸುತ್ತದೆ. ಸಮುದ್ರ ಮಟ್ಟಕ್ಕಿಂತ ಸಾವಿರಾರು ಕಿ.ಮೀ. ಎತ್ತರದಲ್ಲಿರುವ ಕೇದಾರನಾಥ ಹಿಂದೂಗಳ ಪಾವನ ಕ್ಷೇತ್ರವೂ ಹೌದು. ಎತ್ತರದ ಪರ್ವತದ ದಾರಿಗಳು, ಅರಳಿ ಕಂಪ ಸೂಸುವ ಹಿಮಾಲಯದ ಹೂವುಗಳು, ತಣ್ಣಗೆ ಹೆಪ್ಪುಗಟ್ಟಿದ ನದಿಗಳ ಸಾನಿಧ್ಯವನ್ನು ಅನುಭವಿಸಬೇಕೆಂಬ ಕಾತರತೆಯಿದೆ. ಕೇದಾರನಾಥದ ಸೊಬಗನ್ನು ಕಣ್ತುಂಬುವ ಹಂಬಲ ನನ್ನದು.
-ಶ್ಯಾಮ್‌ಪ್ರಸಾದ್‌, ಅಡ್ಯಾರ್‌ಪದವು

ಯಾಣ ನನ್ನ ಮನಕದ್ದ ತಾಣ..


ಹೀಗೇ ಒಂದು ದಿನ ಯೂಟ್ಯೂಬ್‌ನಲ್ಲಿ ಏನನ್ನೋ ಹುಡುಕಾಡುತ್ತಿದ್ದಾಗ‌ “ಯಾಣ’ ಎಂಬ ಪ್ರೇಕ್ಷಣೀಯ ಸ್ಥಳದ ವೀಡಿಯೋ ಕಣ್ಣಿಗೆ ಬಿತ್ತು. ಜೀವಮಾನದಲ್ಲಿ ಒಂದು ಬಾರಿಯಾದರೂ ಆ ಸ್ಥಳಕ್ಕೆ ಭೇಟಿ ನೀಡಬೇಕೆನಿಸಿತು. ಉತ್ತರ ಕನ್ನಡದ ಕುಮಟಾದಲ್ಲಿರುವ ಈ ಪ್ರದೇಶ ವಿಶಿಷ್ಟ ಕಲ್ಲಿನ ರಚನೆಯಿಂದ ಕೂಡಿದೆ. ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡುವ ಕ್ಷಣಕ್ಕಾಗಿ ಕಾಯುತ್ತಿದ್ದೇನೆ.
-ಶರೋನ್‌, ಉಜಿರೆ

ಭಾನ್ಕುಳಿ


ಶ್ರೀರಾಮಚಂದ್ರಾಪುರ ಮಠದ ಶಾಖೆಯಾದ ಉತ್ತರ ಕನ್ನಡ ಜಿಲ್ಲೆಯ ಭಾನ್ಕುಳಿ ಯಲ್ಲಿರುವ ಭೂಲೋಕದ ಪ್ರಥಮ ಸ್ವರ್ಗ ಎಂದೇ ಖ್ಯಾತಿ ಪಡೆಯುತ್ತಿರುವ ತಾಣ ಗೋಸ್ವರ್ಗ. ಸಪ್ತ ಸನ್ನಿಧಿಯಿರುವ ತೀರ್ಥಕುಂಡ, ಗೋತೀರ್ಥ, ಸರೋವರದ ನಾಲ್ಕು ಗೋಪದಗಳು, ಗೋಗಂಗಾರತಿ, ಗೋವಿರಾಮ, ವಿಹಾರ, ಗೋನಂದನ, ಗೋಪಥದಿಂದ ವೀಕ್ಷಣೆ, ಗೋಪಾಲ ಭವನ ವಿಶೇಷಗಳಿಂದ ಕೂಡಿದ ವೀಕ್ಷಿಸಲೇಬೇಕಾದ ತಾಣ.
-ಅದಿತಿ ಶೇಖರ್‌, ಪಡಾರು,ವಿಟ್ಲ

ಕೇದಾರನಾಥ


ಭಾರತದ ಅದ್ಭುತ ದೇವಾಲಯಗಳಲ್ಲಿ ಉತ್ತರಖಂಡದ ಕೇದಾರನಾಥವು ಒಂದು. ಅತೀ ಸುಂದರ ಪ್ರಕೃತಿ ಸೊಬಗು ಹೊಂದಿರುವ ದೇವಾಲಯವು ,ಚಾರಣಿಗರಿಗೆ ಅದ್ಭುತವಾದ ಅನುಭವವನ್ನು ನೀಡುವುದರಲ್ಲಿ ಸಂಶಯವಿಲ್ಲ .ಅತೀ ಕಠಿನ ದಾರಿ ಹೊಂದಿರುವ ಜಗತøಸಿದ್ಧವಾದ ಇಂತಹ ಸುಂದರವಾದ ಕ್ಷೇತ್ರದ ಸೌಂದರ್ಯವನ್ನು ಜೀವಮಾನದಲ್ಲಿ ಒಮ್ಮೆಯಾದರೂ ನೋಡಬೇಕೆನ್ನುವುದು ನನ್ನ ಆಸೆಯಾಗಿದೆ.
-ನೀಲೇಶ್‌, ಕಡೇಶಿವಾಲಯ.

ಕೊಡಚಾದ್ರಿ


ಪ್ರಕೃತಿ ಸೌಂದರ್ಯ ಸವಿಯುವುದೆಂದರೆ ನನಗೆ ತುಂಬಾ ಇಷ್ಟ. ಅದರಲ್ಲೂ ಗುಡ್ಡಗಾಡು ಪ್ರದೇಶದಲ್ಲಿ ಕೊರೆಯುವ ಚಳಿಯಲ್ಲಿ ಕಾಲ್ನಡಿಗೆಯಲ್ಲಿ ಸಾಗುವ ಮಜವೇ ಬೇರೆ.ಕೊಡಚಾದ್ರಿ ನನ್ನ ಕನಸಿನ ತಾಣಗಳಲ್ಲಿ ಒಂದು. ಈ ಬಾರಿಯ ರಜಾ ದಿನದಲ್ಲಿ ಒಮ್ಮೆ ಅಲ್ಲಿಗೆ ಭೇಟಿ ನೀಡಬೇಕೆಂದಿದ್ದೇನೆ.ಅಲ್ಲಿಯ ಪ್ರಕೃತಿ ಸೊಬಗನ್ನು ಮತ್ತೂಮ್ಮೆ ಸವಿಯುವ ಆಸೆ ನನ್ನದು.
-ಸವಿತಾ ಶೆಟ್ಟಿ, ಮಂಗಳೂರು

ಕನ್ಯಾಕುಮಾರಿ


ನನ್ನ ಕನಸಿನ ತಾಣ ಕನ್ಯಾಕುಮಾರಿ, ಭಾರತದ ಪ್ರಸಿದ್ಧ ಯಾತ್ರಾ ಸ್ಥಳ,ದಕ್ಷಿಣ ತುದಿಯಲ್ಲಿ ರಮಣೀಯತೆಯನ್ನು ಮೈದುಂಬಿಕೊಂಡು,ಹಿಂದೂ, ಅರಬ್ಬೀ ಮತ್ತು ಬಂಗಾಳಕೊಲ್ಲಿ ಸೇರುವ ಸ್ಥಳದಲ್ಲಿದೆ. ಈ ಸುಂದರ ಪರಿಸರದಲ್ಲಿ ನಿಂತುಕೊಂಡು ಇಲ್ಲಿನ ಸೂರ್ಯಾಸ್ತಮಾನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಹಂಬಲ ನನ್ನದು,ಆದಷ್ಟು ಭೆಗ ಆ ಸಮಯಕ್ಕಾಗಿ ಕಾಯುತ್ತಿದ್ದೇನೆ.
-ವಿನೋದ್‌ ಕುಮಾರ್‌ ಶೆಟ್ಟಿ, ಬೆಳ್ತಂಗಡಿ

ಈಜಿಪ್ಟ್


ಈಜಿಪ್ಟ್ನಲ್ಲಿರುವ ಮಮ್ಮಿ ನನ್ನ ಕನಸಿನ ತಾಣ. ದೊಡ್ಡ ಕಲ್ಲಿನ ಪಿರಮಿಡ್‌ ಮತ್ತು ನೈಲ್‌ ನದಿಯಲ್ಲಿ ಆಡುವ ಆಸೆ ನನ್ನದು. ಚರಿತ್ರೆಯಲ್ಲಿ ಈಜಿಪ್ಟ್ನ ಇತಿಹಾಸವನ್ನು ಓದಿ ಅದರ ಬಗ್ಗೆ ಹಲವಾರು ಕುತೂಹಲ ಹಾಗೂ ಅಚ್ಚರಿಗಳನ್ನು ಬೆಳೆಸಿಕೊಂಡಿದ್ದೇನೆ. ಆ ಕೌತುಕವನ್ನು ನೀಗಿಸಲು ಆದಷ್ಟು ಬೇಗ ಅಲ್ಲಿಗೆ ತೆರಳಿ ನನ್ನಾಸೆಯನ್ನು ಈಡೇರಿಸುವ ತವಕದಲ್ಲಿ ನಾನಿದ್ದೇನೆ.
-ಪೂರ್ಣಶ್ರೀ ಶಾಸ್ತ್ರೀ, ಪುತ್ತೂರು

ಹಿಮಾಲಯ


ಹಿಮದ ರಾಶಿಯಿಂದ ಆವೃತವಾಗಿರುವ ಹಿಮಾಲಯವನ್ನು ಒಮ್ಮೆ ನೋಡಬೇಕೆಂಬ ಆಸೆ ನನ್ನದು. ವಿಶ್ವದ ಅತ್ಯುನ್ನತ ಶಿಖರಾಗ್ರಗಳನ್ನು ತನ್ನ ಒಡಲಲ್ಲಿ ಪೊರೆಯುವ ಈ ಪರ್ವತ ಶ್ರೇಣಿಯ ಹಿರಿಮೆ ವರ್ಣನಾತೀತವಾದದ್ದು. ಇದು ಅನೇಕ ಜೀವನದಿಗಳ ಉಗಮ ಸ್ಥಾನವಾಗಿದೆ. ಹಿಮಾಲಯದ ತಪ್ಪಲು ಪ್ರದೇಶಗಳೂ ಸಹ ವೈವಿಧ್ಯಮಯ ಪ್ರವಾಸೀ ಆಕರ್ಷಣೆಗಳಿಂದ ಕೂಡಿದ್ದು, ನನ್ನ ಉತ್ಸಾಹಕ್ಕೆ ಪೂರಕವಾಗಿವೆ.
-ಸುದೀಪ್‌ ಶೆಟ್ಟಿ, ಪೇರಮೊಗ್ರು

ಹೂಂಝ ಕಣಿವೆ


ಕಣ್ಣು ಹಾಯಿಸಿದೆಲ್ಲೆಡೆ ಹಿಮ ಕವಿದ ಪರ್ವತಗಳು, ಕುರಿ-ಮೇಕೆಗಳ ಕೂಗು, ಸಮೃದ್ಧವಾದ ಹಚ್ಚ-ಹಸುರಿನ ಔಷಧ ವೃಕ್ಷಗಳ ಸಮೂಹ, ಗಾಳಿಯಲ್ಲಿಯೇ ಅಮೃತ ಪಸರಿದ ಕಾರಣ ಆಯುಷ್ಯವನ್ನು ವೃದ್ಧಿಸಲು ಸಹಕಾರಿಯಾದ ದೇವರ ಅದ್ಭುತ ಸೃಷ್ಟಿ, ಇಹಲೋಕದ ಸ್ವರ್ಗ, ನಮ್ಮದೇ ಆದ ಆದರೆ ಸದ್ಯಕ್ಕೆ ನಮ್ಮಿಂದ ದೂರವಿರುವ ಹೂಂಝ ಕಣಿವೆ (ಪಾಕ್‌ ಆಕ್ರಮಿತ ಕಾಶ್ಮೀರ)ಗೆ ಒಮ್ಮೆ ಹೋಗಬೇಕೆಂಬ ಆಸೆ.
-ರೇಷ್ಮಾ ಭಟ್‌ ಬಿ., ಬಂಟ್ವಾಳ

ಶಿಮ್ಲಾ-ಮನಾಲಿ


ಹಿಮದ ನಡುವಿನ ಬೆಟ್ಟಗುಡ್ಡಗಳ ನಡುವೆ ಸಂಚರಿಸುತ್ತಾ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುವುದೆಂದರೆ ನನಗಿಷ್ಟ. ಆದ್ದರಿಂದ ಜೀವನದಲ್ಲಿ ಒಂದು ಬಾರಿಯಾದರೂ ಶಿಮ್ಲಾ-ಮನಾಲಿಗೆ ಭೇಟಿ ನೀಡುವ ಕನಸನ್ನು ಕಟ್ಟಿಕೊಂಡಿದ್ದೇನೆ. ಆ ರಮಣೀಯ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ ತವಕದ ಲ್ಲಿದ್ದೇನೆ. ಚುಮುಚುಮು ಚಳಿಯಲ್ಲಿ ಸಂಚರಿಸಿ, ಅಲ್ಲಿನ ಜೀವನಶೈಲಿಯನ್ನು ವೀಕ್ಷಿಸುವ ಹಂಬಲ ನನಗಿದೆ.
-ಶ್ರೀರಕ್ಷಾ, ಶಿರ್ಲಾಲ್‌, ಮೂಡುಬಿದಿರೆ

ಮುರುಡೇಶ್ವರ


ಬೃಹತ್‌ ಶಿವನ ಮೂರ್ತಿ, ರಾಜಗೋಪುರ, ಅರಬೀಕಡಲ ತೀರ ಇದೆಲ್ಲ ಇರುವುದುದು ಮುರುಡೇಶ್ವರದಲ್ಲಿ ಮಾತ್ರ. ಮುರುಡೇಶ್ವರ ಸ್ವಾಮಿಯ ದೇವಾಲಯವು ಧಾರ್ಮಿಕ ಪುಣ್ಯಸ್ಥಳವಾಗಿದೆ. ಎರಡು ಬದಿಯಲ್ಲಿ ವಿಸ್ತಾರವಾದ ಕಡಲತೀರವಿರುವ ಈ ಪ್ರದೇಶದ ಸೊಬಗನ್ನು ನೋಡುವ ಆಸೆ ಇನ್ನೂ ಈಡೇರಿಲ್ಲ. ಈ ನನ್ನ ಕನಸಿನ ತಾಣವನ್ನು ಕಣ್ತುಂಬಿಕೊಳ್ಳಲು ನಾನು ಕಾತರದಿಂದ ಕಾಯುತ್ತಿದ್ದೇನೆ.
-ಶೃತಿ ವಸಂತ್‌, ಬಜಪೆ

ಮುಂಬಯಿ


ಮುಂಬಯಿ ಎಂದ ಕೂಡಲೆ ನೆನಪಿಗೆ ಬರುವ ಮೊದಲ ಸ್ಥಳ ತಾಜ್‌ಮಹಲ್‌ ಹೊಟೇಲ್‌ ಹಾಗೂ ಅದರ ಮುಂದಿರುವ ಅರಬ್ಬೀ ಸಮುದ್ರ, ಹತ್ತಿರದಲ್ಲೇ ಗೇಟ್‌ ವೇ ಆಫ್ ಇಂಡಿಯಾ. ಇಲ್ಲಿ ಸಂಜೆ ಸೂರ್ಯಾಸ್ತದ ಸಮಯಕ್ಕೆ ಸಮುದ್ರದಲ್ಲಿ ಬೋಟಿಂಗ್‌ ಹೊಗುವಾಗ ಅದರಲ್ಲಿ ಸಿಗುವ ಸಂತೋಷ ಎಷ್ಟು ಹಣ ಕೊಟ್ಟರು ಸಾಲದು. ಮುಂದೆ ಬರುವ ರಜೆಗೆ ನಾನು, ಅಮ್ಮ ಮತ್ತು ಮಾವ ಹೋಗುವದೆಂದು ನಿರ್ಧಾರ ಮಾಡಿದೆ.
-ಸ್ವಾತಿ ಕಾರಂತ್‌, ಉಪ್ಪಿನಂಗಡಿ

ವಿವೇಕಾನಂದರ ಸ್ಮಾರಕ


ನನ್ನ ಕನಸಿನ ತಾಣ ಕನ್ಯಾಕುಮಾರಿ. ಇಲ್ಲಿನ ಧ್ಯಾನ ಸ್ಥಳವಾದ ವಿವೇಕಾನಂದರ ರಾಕ್‌ ಮೆಮೋರಿಯಲ್‌ಗೆ ಒಮ್ಮೆಯಾದರೂ ಹೋಗಬೇಕು, ವಿಶಾಲವಾದ ಸಮುದ್ರದ ಅಲೆಗಳ ಸಂಗೀತ ಮೌನವಾಗಿ ಆಲಿಸಬೇಕು ಎಂಬ ಆಸೆ. ಅಲ್ಲಿಗೆ ಹೋಗಬೇಕಾದರೆ ದೋಣಿಯಲ್ಲಿ ಪ್ರಯಾಣಿಸಬೇಕೆಂದು ಕೇಳಿದ ನೆನಪು. ಆ ಪ್ರಯಾಣ ಎಷ್ಟು ರೋಮಾಂಚನಕಾಯಾಗಿರಬಹುದೆಂದು ಕಲ್ಪನೆ ಮಾಡಿಕೊಂಡರೆ ಮೈ ನವಿರೇಳುತ್ತದೆ.
-ಸೌಜನ್ಯಾ ಕಡಪ್ಪು, ಬೆಳ್ತಂಗಡಿ

ಬೇಕಲಕೋಟೆ


ಬೇಕಲಕೋಟೆ ಎಲ್ಲರಿಗೂ ತಿಳಿದಿರುವ ಕೋಟೆ. ರಾಜರ ಕಾಲದಲ್ಲಿ ನಿರ್ಮಿಸಿದಂತಹ ಭದ್ರಕೋಟೆಯಾಗಿದೆ. ಈ ಕೋಟೆಯ ಸಮೀಪದಲ್ಲೇ ಸಮುದ್ರವು ಇದೆ. ಶಾಲಾ ಪ್ರವಾಸದ ಸಮಯದಲ್ಲಿ ಬೇಕಲಕೋಟೆಗೆ ಹೋಗಿದ್ದ ನೆನಪು ಇದೆ.ಈಗ ಬೇಕಲಕೋಟೆಯನ್ನು ಪ್ರವಾಸಿ ತಾಣವಾಗಿ ಮಾಡಿದ್ದಾರೆ ಎಂದು ಅಲ್ಲಿಗೆ ಹೋದವರು ವಿವರಿಸುವುದನ್ನು ಕೇಳಿದ್ದೇನೆ.ಆದರಿಂದ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ಬಹಳ ಆಸೆಯಿದೆ.
-ವಿಜಯಲಕ್ಷ್ಮೀ ನಾಟಿಕೇರಿ, ಐವರ್ನಾಡು, ಸುಳ್ಯ

ಪ್ಯಾರಿಸ್‌


ಪ್ಯಾರಿಸ್‌ ನನ್ನ ಕನಸಿನ ತಾಣ. ಅಲ್ಲಿರುವಂತಹ ದೊಡ್ಡ ಟವರ್‌ಅನ್ನು ನನ್ನ ಜೀವನದಲ್ಲಿ ಒಮ್ಮ ನೋಡಬೇಕೆಂಬ ಆಸೆಯಿದೆ. ದೀಪವಾರಿದ ಅನಂತರ ಟವರನ್ನು ನೋಡುತ್ತಾ ಯಾವುದೇ ಯೋಚನೆಯಿಲ್ಲದೆ ಸಮಯವನ್ನು  ಕಳೆಯಬೇಕೆನ್ನುವುದು ನನ್ನ ಆಸೆ. ಉದ್ಯೋಗ ಸಂಪಾದಿಸಿ ಅದಕ್ಕೆ ಬೇಕಾಗುವ ಹಣ ಸಂಗ್ರಹಿಸಿ ನನ್ನ ಕನಸಿನೂರಿಗೆ ಪ್ರಯಾಣವನ್ನು ಬೆಳೆಸಬೇಕೆಂದಿದ್ದೇನೆ.
-ಮೋಕ್ಷಾ ರೈ, ಮಡಿಕೇರಿ

ವೈಷ್ಣೋದೇವಿ ದೇವಸ್ಥಾನ


ಆಕೆ ನನ್ನೆಲ್ಲಾ ಸಮಾಧಾನಕ್ಕೆ ಕಾರಣಳು. ಬಹುಶಃ ನನ್ನ ಹೃದಯಕ್ಕೆ ತುಂಬಾ ಹತ್ತಿರದವಳು ಎಂದರೆ ತಪ್ಪಾಗಲಾರದು! ಅದುವೇ ಜಮ್ಮುವಿನ ಮಾತಾ ವೈಷ್ಣೋದೇವಿ ದೇವಸ್ಥಾನ. ವೈವಿಧ್ಯಮಯ ಪ್ರಕೃತಿಯ ನಡುವೆ ಕತ್ರಾದ ತ್ರಿಕುಟ ಬೆಟ್ಟದ ಮೇಲೆೆ 1700 ಅಡಿ ಎತ್ತರದಲ್ಲಿ ಇರುವ ಆ ತಾಯಿ ದರ್ಶನಕ್ಕೆ ತುದಿಗಾಲಿನಲ್ಲಿ ನಿಂತಿರುವೆ. ಆದಷ್ಟು ಬೇಗ ಅಲ್ಲಿಗೆ ಭೇಟಿ ನೀಡಬೇಕೆಂದಿದ್ದೇನೆ.
-ಸೌಮ್ಯಾ ಎಸ್‌. ಎಲ್‌., ಮೂಲ್ಕಿ

ಮುಳ್ಳಯ್ಯನ ಗಿರಿ


ಮುಳ್ಳಯ್ಯನಗಿರಿ ನನ್ನ‌ ಕನಸಿನ ತಾಣ. ಬೆಟ್ಟ ಗುಡ್ಡಗಳನ್ನು ಏರುವುದೇ ಒಂಥರಾ ಖುಷಿ. ಹಚ್ಚ ಹಸುರಿನ ಸೀರೆಯನ್ನು ಹೊದ್ದುಕೊಂಡಿರುವಂತೆ ಕಾಣುವ ಪ್ರಕೃತಿ ಸೊಬ ಗನ್ನು ಕಣ್ಣಾರೆ ಕಂಡು ಆನಂದಿÓಬೇಕೆನ್ನುವುದು ನನ್ನ ಮನದಾಸೆ.ಗಿರಿಯ ತುದಿಯಲ್ಲಿರುವ ದೇವಾಲಯ, ಪಶ್ಚಿಮ ಘಟ್ಟದ ಸೌಂದರ್ಯವನ್ನು ಇಮ್ಮಡಿಗೊಳಿಸುವ ಪ್ರದೇಶಕ್ಕೆ ಈ ಬಾರಿಯಾದರೂ ಭೇಟಿ ನೀಡಬೇಕೆಂದಿದ್ದೇನೆ.
-ವೃಂದಾ ಕೊನ್ನಾರ್‌, ಬೈಕಂಪಾಡಿ

ಮುನ್ನಾರ್‌


ಮುನ್ನಾರ್‌ ಹೆಸರೇ ಹೇಳುವಂತೆ ದೇವರನಾಡು ಕೇರಳದ ಈ ರಮಣೀಯಾ ತಾಣ, ಹನ್ನೆರಡು ವರ್ಷಗಳಿಗೊಮ್ಮೆ ಅರ ಳುವ ನೀಲಕುರವಂಜೀ ಪುಷ್ಪ ಪರ್ವತ ಸಾಲುಗಳನ್ನು ಒಮ್ಮೆ ನೋಡುವ ಆಸೆ ಇದೆ. ಆ ಸಮಯಕ್ಕಾಗಿ ಕಾಯುತ್ತಿದ್ದೇನೆ. ಆ ಸುಂದರ ಮುಗಿಲು ಮಟ್ಟುವ ಪರ್ವತವನ್ನು ನೋಡ ಬಯಸುವೆ. ನೀಲಕುರವಂಜೀಯಿಂದ ಮಾಡಿದ ಜೇನನ್ನು ಸವಿಯುವ ಕನಸು ನನಸು ಮಾಡುವ ಹಂಬಲ ನನ್ನದು.
-ಮನೀಷಾ ಶೆಟ್ಟಿ, ದೇವಸ್ಯ , ಕೋಳ್ನಾಡು

ತಾಜ್‌ಮಹಲ್‌


ತಾಜ್‌ ಮಹಲ್‌ ನನ್ನ ಕನಸಿನ ಮಹಲ್‌. ನಾನು ನನ್ನ ಜೀವನದಲ್ಲಿ ಒಂದು ಬಾರಿಯಾದರೂ ತಾಜ್‌ ಮಹಲ್‌ಗೆ ಭೇಟಿ ನೀಡಬೇಕೆಂದಿದ್ದೇನೆ. ಅದರ ಅದ್ಭುತ ವಾಸ್ತುಶಿಲ್ಪ ನನ್ನ ಮನ ಸೆಳೆದಿದೆ. ಅಮೃತಶಿಲೆಯ ಆ ಭವ್ಯ ಪ್ರೇಮ ಮಹಲ್‌ ವಿಶ್ವದ ಅದ್ಭುತಗಳಲ್ಲಿ ಒಂದು. ಆ ಭವ್ಯತೆಯನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಬೇಕೆಂಬುದು ನನ್ನ ಬಯಕೆ. ಅಲ್ಲಿನ ಯಮುನಾ ನದಿ ತೀರಕ್ಕೆ ತೆರಳಬೇಕೆನ್ನುವುದು ನನ್ನ ಆಸೆ.
-ಸನ್ನಿಧಿ ಯಾದವ್‌ ಕೆ., ಬೆಳ್ತಂಗಡಿ

ಗೋಸ್ವರ್ಗ


ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಆಡಳಿತದಲ್ಲಿರುವ ಗೋಸ್ವರ್ಗವು ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಬಾನುRಳಿಯಲ್ಲಿದೆ. ಇಲ್ಲಿಗೆ ಒಮ್ಮೆ ಯಾದರೂ ಭೇಟಿ ನೀಡಬೇಕು ಎಂಬುದು ನನ್ನ ಕನಸು. ಒಂದು ಲಕ್ಷ ಚದರ ಅಡಿಯಲ್ಲಿ ಇರುವ ಗೋನಿವಾಸವನ್ನು ನೋಡುವುದೇ ಕಣ್ಣಿಗೆ ಹಬ್ಬ. ಮೂವತ್ತಕ್ಕೂ ಅಧಿಕ ಭಾರತೀಯ ಗೋತಳಿಗಳ ಸ್ವತ್ಛಂದ ಆಶ್ರಯ ತಾಣವಾಗಿದೆ.
-ನಯನಾ, ಪೆರಿಯಡ್ಕ, ಉಪ್ಪಿನಂಗಡಿ

ಮುರುಡೇಶ್ವರ


ಮುರುಡೇಶ್ವರ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ಸಮುದ್ರದ ತಪ್ಪಲಿನಲ್ಲಿರುವ ಕಲ್ಲು ಬಂಡೆಗಳ ಚಿತ್ತಾರದ ಮೇಲೆ ಎದ್ದು ನಿಂತಿರುವ ಶಿವನ ಪ್ರತಿಮೆಯನ್ನು ಕಣ್ಣಾರೆ ಕಾಣಬೇಕೆಂಬ ನನ್ನ ಅಸೆ ಇನ್ನೂ ಈಡೆರಿಲ್ಲ. ಶಿವನ ಪ್ರತಿಮೆ ಹಾಗೂ ಕಡಲ ಕಿನಾರೆಯನ್ನು ಕಣ್ತುಂಬಿಸಿಕೊಳ್ಳುವ ಕಾತರದಲ್ಲಿದ್ದೇನೆ.ಈ ಬಾರಿ ದಸರಾ ರಜೆಗೆ ಮನೆ ಮಂದಿಯೊಂದಿಗೆ ಹೋಗಲೆಬೇಕೆಂದು ಸಂಕಲ್ಪಿಸಿದ್ದೇನೆ.
-ಕಿರಣ್‌, ಧರ್ಮಸ್ಥಳ

ಉತ್ತರಾಖಂಡ


ನನ್ನ ಕನಸಿಣ ತಾಣ ಉತ್ತರಾಖಂಡದ ಯಾತ್ರೆ. ತುಂಬಾ ಕಠಿಣವಾದರೂ ಅಲ್ಲಿಯ ಶ್ರೀ ಬದರೀನಾರಾಯಣ, ಬದರೀನಾಥ ದೇವರ ದರ್ಶನ ಮಾಡುವ ಆಸೆ ನನ್ನದು. ಈ ಸಲದ ನವರಾತ್ರಿ ರಜೆಯಲ್ಲಿ ಬದರಿನಾಥ ಸನ್ನಿದಾನಕ್ಕೆಭೇಟಿ ನೀಡಬೇಕೆಂ ದಿದ್ದೇನೆ. ಅಲ್ಲಿನ ರುದ್ರ ಪ್ರಯಾಗ, ಗುಪ್ತಕಾಶಿ, ಸರಸ್ವತಿಯ ಉಗಮ ಸ್ಥಾನ ನೋಡಲು ಬಹಳ ಉತ್ಸುಕನಾಗಿದ್ದೇನೆ. ಅಲ್ಲಿನ ಪ್ರಕೃತಿ ಸೌಂದರ್ಯ ಸವಿಯುವ ಆತುರದಲ್ಲಿ ನಾನಿದ್ದೇನೆ.
-ಮಂಜುಳಾ ಕಾಮತ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next